ವಿಶ್ವಮಾನವ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

 

ಚಿತ್ರದುರ್ಗ:ನಗರದ ಹೊರ ವಲಯದ ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ ಸೀಬಾರ-ಗುತ್ತಿನಾಡು ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಇಂದು

ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದಲ್ಲಿ ಭಾನುವಾರದಂದು ಉಚಿತ ಹೃದಯರೋಗ, ನರರೋಗ, ಮೂತ್ರಪಿಂಡದ ಕಲ್ಲು, ಕ್ಯಾನ್ಸರ್ ಹಾಗೂ ಸಾಮಾನ್ಯ ಕಾಯಿಲೆಗಳಾದ ಸ್ತ್ರೀರೋಗ ಮತ್ತು ಗರ್ಭಕೋಶ ತೊಂದರೆ, ಮೂಳೆ ಮತ್ತು ಕೀಲು ರೋಗ, ಕಿವಿ, ಮೂಗು, ಗಂಟಲು, ರಕ್ತದೊತ್ತಡ, ಸಕ್ಕರೆ ಕಾಯಿಲೆ ಮುಂತಾದವುಗಳ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು ಮತ್ತು ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಚಿತ್ರದುರ್ಗ, ಇವರ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ” ವನ್ನು ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಡಾ.ಅಭಿಷೇಕ್ ಮಾತನಾಡಿ ಸಾರ್ವಜನಿಕರಿಗೆ ಆರೋಗ್ಯದ ಮಹತ್ವ, ಮಕ್ಕಳು ಮುಂದಿನ ದಿನಗಳಲ್ಲಿ ವೈದ್ಯಕೀಯ ಕೋರ್ಸ್ಗಳನ್ನು ತೆಗೆದುಕೊಂಡು ಜೀವ ಉಳಿಯುವ ಕೈಂಕಾರ್ಯವನ್ನು ಕೈಗೊಳ್ಳುವಂತೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸದರಿ ಶಿಬಿರದ ಅಧ್ಯಕ್ಷತೆ ವಹಿಸಿದ್ದಂತಹ ಬಿ.ಜಿ.ಶಿವರುದ್ರಯ್ಯ, ಮುಖ್ಯ ಶಿಕ್ಷಕರು ವಿಶ್ವಮಾನವ ವಸತಿ ಶಾಲೆ, ಇವರು ಹಾಗೂ ವೇದಿಕೆ ಮೇಲಿನ ಗಣ್ಯರು ಒಟ್ಟಾಗಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಡಾ.ಅಶ್ವಿನಿ (ಕಣ್ಣಿನ ತಜ್ಞರು), ಡಾ.ಅನುಷ (ಕಣ್ಣಿನ ತಜ್ಞರು), ಡಾ.ಅಭಿಷೇಕ್, (ಕಾರ್ಡಿಯಾಲಿಜಿಸ್ಟ್ ಸಪ್ತಗಿರಿ ಆಸ್ಪತ್ರೆ,) ಡಾ.ಅರುಣ್ ಕುಮಾರ್. (ಜನರಲ್ ಸರ್ಜರಿ, ಸಪ್ತಗಿರಿ ಆಸ್ಪತ್ರೆ,) ಡಾ.ಕವಿನ್. (ಜನರಲ್ ಸರ್ಜರಿ, ಸಪ್ತಗಿರಿ ಆಸ್ಪತ್ರೆ,.ಎಂ ಕಾರ್ಯದರ್ಶಿಗಳು, ನೀಲಕಂಠದೇವರು .ಹೆಚ್.ಜಲೀಲ್ ಸಾಬ್. ರೂವಾರಿಗಳು, ಜಿ.ಆರ್.ಚನ್ನಬಸಪ್ಪ, ಮುಖ್ಯೋಪಾಧ್ಯಾಯರು, ವಿಶ್ವಮಾನವ ವಸತಿ ಶಾಲೆ, ಶ್ರೀಮತಿ.ಸುಧಾ, ಪ್ರಾಂಶುಪಾಲರು ವಿಶ್ವಮಾನವ ಪದವಿಪೂರ್ವ ಕಾಲೇಜು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours