ಎಡಿಜಿಪಿ ಅಲೋಕ್ ಕುಮಾರ್ ಅವರಿಂದ ಪೋಲಿಸ್ ಅಧಿಕಾರಿಗಳಿಗೆ ಫಿಟ್ನೆಸ್ ಕ್ಲಾಸ್

 

ಚಿತ್ರದುರ್ಗ, ನ.02: ಜಿಲ್ಲೆಯ ಪೊಲೀಸ್ ಆಧಿಕಾರಿಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ಫಿಟ್ನೆಸ್ (ದೈಹಿಕ ಕ್ಷಮತೆ) ಕ್ಲಾಸ್ ತೆಗದುಕೊಂಡು ಘಟನೆ ಇಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದಿದೆ.
ನಗರಕ್ಕೆ ಇಂದು ಆಗಮಿಸಿದ ಅಲೋಕ್ ಕುಮಾರ್ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಲ್ಲಿನ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನಾ (ಗಾಡ್ ಆಫ್ ಆನಾರ್) ವಂದನೆ ಸಲ್ಲಿಸುವ ವೇಳೆ ದೇಹ ತೂಕ ಹೆಚ್ಚು ಇದ್ದಂತಹ ಹಿರಿಯೂರು ಡಿವೈಎಸ್ಪಿ ರೋಷನ್ ಜಮೀರ್, ಚಿತ್ರದುರ್ಗ ಡಿವೈಎಸ್ಪಿ ಅನಿಲ್ , ಚಳ್ಳಕೆರೆ ಡಿವೈಎಸ್ಪಿ ರಮೇಶ್, ಡಿಸಿಆರ್ ಬಿ ಡಿವೈ ಎಸ್ಪಿ ಲೋಕೇಶ್ ಹಾಗೂ ಎಸ್ಪಿ ಕಚೇರಿಯ ಸಿಪಿಐ ನಾಗರಾಜ್ ಅವರುಗಳನ್ನು ನೋಡಿ ಪೊಲೀಸ್ ಇಲಾಖೆಯಲ್ಲಿ ಕಷ್ಟದ ಕೆಲಸಗಳನ್ನು ಎದುರಿಸಬೇಕಿದ್ದು, ಇಂತಹ ಪರಿಸ್ಥಿತಿಯಲ್ಲಿ ಇಷ್ಟು ದೊಡ್ಡ ದೇಹವನ್ನು ಹೊಂದಿದ್ದರೆ ಹೇಗೆ ಕಾರ್ಯ ನಿರ್ವಹಿಸುತ್ತಿರಿ ? ಎಂದು ಕ್ಲಾಸ್ ತೆಗೆದುಕೊಂಡರು.
ದೇಹ ತೂಕ ಕಡಿಮೆ ಮಾಡಿ, ಟಫ್ ಜಾಬ್ ಇಲಾಖೆಯದ್ದು, ಮಿತ ಆಹಾರ ಸೇವನೆ ಮಾಡಿ, ಹೆಚ್ಚು ವ್ಯಾಯಾಮ ಮಾಡಿ ಎಂದು ಎಡಿಜಿಪಿ ಸಲಹೆ ನೀಡಿದರು.
ಹಿರಿಯೂರು ಸಿಪಿಐ ಆನಂದ್ ಅವರಿಗೆ ಸ್ಲಿಮ್ ಆಗಿದ್ದೀರಿ ಗುಡ್, ಐಜಿಪಿ ತ್ಯಾಗರಾಜನ್ ಹಾಗೂ ಎಸ್ಪಿ ಕೆ.ಪರಶುರಾಮ್ ಲೈಟ್ ವೇಟಿದ್ದಾರೆ. ಉಳಿದವರೇ ಹೆಚ್ಚು ದಪ್ಪಗಿರುವುದು. ಅವರೆಲ್ಲಾ ಬಹುಬೇಗ ತೂಕ ಇಳಿಸಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

[t4b-ticker]

You May Also Like

More From Author

+ There are no comments

Add yours