ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಆರ್‌ಡಿಎಕ್ಸ್ ತಂಡಕ್ಕೆ ಮೊದಲ ಬಹುಮಾನ

 

 

 

 

ಎನ್.ಮಾರುತಿ ಸ್ಮರಣಾರ್ಥ ಹೊನಲು, ಬೆಳಕಿನ ಕ್ರಿಕೆಟ್ (cricket) ಪಂದ್ಯಾವಳಿ : ಆರ್‌ಡಿಎಕ್ಸ್ ತಂಡಕ್ಕೆ ಮೊದಲ ಬಹುಮಾನ.

ಚಳ್ಳಕೆರೆ-೨೫ ನಗರದ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಯುವ ಕ್ರಿಕೆಟಿಗ ದಿವಂಗತ ಎನ್.ಮಾರುತಿ ಸ್ಮರಣಾರ್ಥ ಹೊನಲು, ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಎರಡು ದಿನಗಳ ಕಾಲ ನಡೆಸಿದ್ದು, ಸುಮಾರು ೩೦ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು ಎಂದು ತಿಪ್ಪೇಸ್ವಾಮಿ ತಿಳಿಸಿದರು.

 

 

ಇದನ್ನೂ ಓದಿ: ಇಂದಿನ ಬಂಗಾರ ಬೆಳ್ಳಿ ಬೆಲೆ

ಅವರು, ಪತ್ರಿಕೆಗೆ ಮಾಹಿತಿ ನೀಡಿ ಸದರಿ ಪಂದ್ಯಾವಳಿಯಲ್ಲಿ ಕೇವಲ ನಗರದ ಕ್ರಿಕೆಟ್ ತಂಡಗಳು ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಿದ್ದು, ಪ್ರಥಮಸ್ಥಾನ ಪಡೆದ ತಂಡಕ್ಕೆ ೧೦ ಸಾವಿರ, ಪಾರಿತೋಷಕ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೫ ಸಾವಿರ, ಪಾರಿತೋಷಕ, ತೃತೀಯ ಸ್ಥಾನ ಪಡೆದ ತಂಡಕ್ಕೆ ಆಕರ್ಷಕ ಪಾರಿತೋಷಕ ಬಹುಮಾನವನ್ನು ನೀಡಲಾಯಿತು.

ಪ್ರಥಮ ಸ್ಥಾನವನ್ನು ನಗರದ ಆರ್‌ಡಿಎಕ್ಸ್ ತಂಡ, ಎರಡನೇ ಸ್ಥಾನವನ್ನು ೦೦೧ ತಂಡ ಪಡೆದುಕೊಂಡರೆ ಸಮಧಾನಕರ ಬಹುಮಾನವನ್ನು ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡರು. ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಯಿತು. ನಗರದ ವಿವಿಧ ಕ್ರಿಕೆಟ್ ತಂಡಗಳ ಆಟಗಾರರು ಹೊನಲು-ಬೆಳಕಿನ ಪಂದ್ಯಾವನ್ನು ವೀಕ್ಷಿಸಿದರು.

[t4b-ticker]

You May Also Like

More From Author

+ There are no comments

Add yours