ರೈತರು ಆಧುನಿಕ ಕೃಷಿ ಪದ್ದತಿ ಅಳವಡಿಸಿಕೊಳ್ಳಿ:ತಹಶೀಲ್ದಾರ್ ಎನ್.ರಘುಮೂರ್ತಿ ಕರೆ

 

ಮೊಳಕಾಲ್ಮುರು:  ರೈತರು ವೈಜ್ಞಾನಿಕವಾಗಿ ಮತ್ತು ಆಧುನಿಕವಾಗಿ ಕೃಷಿಯಲ್ಲಿ ತೊಡಗಿ ಸ್ವಾವಲಂಬಿಗಳಾದಷ್ಟು ಸರ್ಕಾರಕ್ಕೆ ಸಾರ್ಥಕವಾದ ಭಾವನೆ ಬರುತ್ತದೆ ಹೆಚ್ಚು ಹೆಚ್ಚು ರೈತರು ವೈಜ್ಞಾನಿಕವಾಗಿ ಬಗೆ ಬಗೆಯ ತಳಿಗಳನ್ನು ಬೆಳೆಯಬೇಕ ತಹಸಿಲ್ದಾರ್ ಎನ್ ರಘುಮೂರ್ತಿ ರೈತರಿಗೆ ಸಲಹೆ ನೀಡಿದರು.

ಕೊಂಡ್ಲಹಳ್ಳಿ  ಗ್ರಾಮದ ಪ್ರಗತಿಪರ ರೈತ ದಯಾನಂದ ರವರ ಮನೆಯಲ್ಲಿ ತೋಟಗಾರಿಕೆ ಬೆಳೆಯ ಪ್ರಾತ್ಯಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ  ಮಾತನಾಡರು.

ಚಳ್ಳಕೆರೆ ಮತ್ತು ಮೊಳಕಾಲ್ಮುರು  ತಾಲ್ಲೂಕು ಅತಿ ಕಡಿಮೆ  ಮಳೆಯಾದರು ಸಹ  ಹೀಗಿರುವ ನೀರಿನ ಸಾಂದ್ರತೆನುಸಾರವಾಗಿ ಆಧುನಿಕವಾಗಿ ಬೆಳೆಗಳನ್ನು ಬೆಳೆದು ಇಲ್ಲಿಯ ಹವಾಮಾನ ಮತ್ತು ಮಣ್ಣಿನ ಗುಣಗಳ ಅನುಗುಣವಾಗಿ ಉತ್ಕೃಷ್ಟವಾದ ಬೆಳೆಗಳನ್ನು ಬೆಳೆಯಲು ಸಲಹೆ ನೀಡಿದರು.

ಹೆಚ್ಚು ಹೆಚ್ಚು ಯುವಕರು ಮತ್ತು ಕಾಲೇಜು  ವಿದ್ಯಾರ್ಥಿಗಳು ಈ ಒಂದು ಪ್ರಾತ್ಯಕ್ಷಿತೆಯ ಪ್ರಯೋಜನ ಪಡೆಯಬೇಕು. ಯುವಕರು ಹೆಚ್ಚು ಕೃಷಿಯಲ್ಲಿ ತೊಡಗಿದಷ್ಟು ತಮ್ಮಲ್ಲಿ ಗಟ್ಟಿತನ ಬೆಳೆಯುತ್ತದೆ. ಎಂತಹ ಸಮಸ್ಯೆಗಳು ಬಂದರೂ ಕೂಡ ಮುಂದಿನ ದಿನಗಳಲ್ಲಿ ನಿರ್ಭೀತಿಯಿಂದ ಎದುರಿಸಲು ಸಹಕಾರಿಯಾಗುತ್ತದೆ.

ಯುವಕರು ಮತ್ತು ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಿಂದಲೇ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಪರಿಚಯ ಮಾಡಿಕೊಳ್ಳಬೇಕು. ಸ್ವಾವಲಂಬಿಗಳಾಗಿ ಸ್ವಾಭಿಮಾನವನ್ನು ಬೆಳೆಸಿಕೊಳ್ಳಬೇಕೆಂದು ಎಂದರು.

ಈ ಸಂದರ್ಭದಲ್ಲಿ ಪ್ರಗತಿಪರ ರೈತರದಂತದಯಾನಂದ ಮತ್ತು ಮುಖಂಡರಾದ ಕೃಷ್ಣಾರೆಡ್ಡಿ ಮುಂತಾದವರು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours