ಕನ್ನಡ ನಾಡು ನುಡಿಯ ಬಗ್ಗೆ ಎಲ್ಲಾರೂ ಧ್ವನಿ ಎತ್ತಬೇಕು:ಶಾಸಕ ಟಿ.ರಘುಮೂರ್ತಿ

 

 

 

 

ಚಳ್ಳಕೆರೆ-01: ಕನ್ನಡ ನಾಡು ನುಡಿಯ ಬಗ್ಗೆ ಪ್ರತಿಯೊಬ್ಬರು ಧ್ವನಿ ಎತ್ತಬೇಕು. ಭಾಷೆ ತಾಯಿ ಪ್ರತಿರೂಪವೆಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಬಿಎಂಜಿಎಚ್ ಎಸ್ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಸುಂದರ ಭಾಷೆ. ಕನ್ನಡ ಭಾಷೆ ನಮ್ಮ ಬದುಕು. ಭಾಷೆ ಹಾಗೂ ನಾಡಿನ ಪರಂಪರೆಯ ಶ್ರೀಮಂತಿಕೆಯನ್ನು ಹೆಚ್ವಿಸಬೇಕು. ಏಕೀಕೃತ ರಾಜ್ಯದ ಮೊದಲ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದ ದಿವಂಗತ ಎಸ್.ನಿಜಲಿಂಗಪ್ಪ ಹಾಗೂ ಪ್ರಾದೇಶಿಕ ಅಸಮಾನತೆ ಕುರಿತಂತೆ ಮತ್ತು ಅದಕ್ಕೆ ಪರಿಹಾರವಾಗಿ ಇಡೀ ದೇಶಕ್ಕೆ ಮಾದರಿಯಾದರು ಎಂದರು.
ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಕನ್ನಡ‌ ಭಾಷೆಯ ಹಿರಿಮೆ‌ ಹೆಚ್ಚಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕಿದೆ. ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿ ಬರುವ ಮೂಲಕ ದೇಶ ಎಲ್ಲಾ ಭಾಷೆಗಿಂತಲ್ಲೂ‌‌ಮೇರು ಪರ್ವತದಲ್ಲಿರುವ ನಮ್ಮ‌ ಭಾಷೆ ಹಿರಿಮೆ ದೊಡ್ಡದು ಎಂದರು.
ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ‌ ಸಮಿತಿ ಸದಸ್ಯ ರುದ್ರನಾಯಕ, ಸದಸ್ಯರಾದ ರಾಘವೇಂದ್ರ, ರಮೇಶ್ ಗೌಡ, ಸಾಕಮ್ಮ, ಪಾಲಮ್ಮ, ಜಯಣ್ಣ, ವೆಂಕಟೇಶ್, ನಾಗಮಣಿ, ನಿರ್ಮಲ, ತಿಪ್ಪಮ್ಮ, ಮಲ್ಲಿಕಾರ್ಜುನ, ಜಯಲಕ್ಷ್ಮಿ, ಇಒ ಹೊನ್ನಯ್ಯ, ಪೌರಾಯುಕ್ತ ಸಿ.ಚಂದ್ರಪ್ಪ, ಬಿಇಒ ಸುರೇಶ್, ಶಿವಮೂರ್ತಿ, ಕನ್ನಡ‌‌ಸಾಹಿತ್ಯ ಪರಿಷತ್ ಅಧ್ಯಕ್ಷ ‌ವೀರಭದ್ರಸ್ವಾಮಿ ಮುಂತಾದವರು ಇದ್ದರು.‌
ನಗರದ ತಾಲ್ಲೂಕು ಕಚೇರಿಯಿಂದ ಬಿಎಂಜಿಎಚ್ ಎಸ್ ಪ್ರೌಢಶಾಲಾ ಆವರಣದವರೆಗೂ‌ ತಾಯಿ ಭುವನೇಶ್ವರಿ ಭಾವಚಿತ್ರವನ್ನು ಮೆರವಣಿಗೆ ಮೂಲಕ‌ ತರಲಾಯಿತು. ಶಾಸಕ ಟಿ.ರಘುಮೂರ್ತಿ ಕಾರ್ಯಕ್ರಮಕ್ಕೂ ಮುನ್ನ ಅಪ್ಪು ಭಾವಚಿತ್ರಕ್ಕೆ‌ಪುಪ್ಪನಮನ ಸಲ್ಲಿಸಿದರು.

 

 

[t4b-ticker]

You May Also Like

More From Author

+ There are no comments

Add yours