ನನ್ನ ಹೆಣ ಕೂಡ ಬಿಜೆಪಿ ಕಚೇರಿ ಮುಂದೆ ಹೋಗಲ್ಲ: ಲಕ್ಷ್ಮಣ್ ಸವದಿ

 

ಬೆಂಗಳೂರು, ಏಪ್ರಿಲ್‌ 14: ಅಥಣಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಸಿಗದ ಹಿನ್ನೆಲೆ ಬಿಜೆಪಿ ತೊರೆದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅಧಿಕೃತವಾಗಿ ಡಿಕೆ ಶಿವಕುಮಾರ್‌ ನೇತೃತ್ವದಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಗೊಂಡರು.

ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಬೆಂಗಳೂರಿನ ಮನೆಗೆ ತೆರಳಿದ ಲಕ್ಷ್ಮಣ್ ಸವದಿ ಅವರು ರಾಜಿನಾಮೆ ಪತ್ರವನ್ನು ನೀಡಿದರು. ಈ ವೇಳೆ ಯಾವುದಾದರೂ ರಾಜಕೀಯ ಒತ್ತಡಕ್ಕೆ ಸಿಲುಕಿ ರಾಜಿನಾಮೆ ನೀಡುತ್ತಿದ್ದೀರಾ ಎಂದು ಸಭಾಪತಿಗಳು ಪ್ರಶ್ನಿಸಿದ್ದು ಇದಕ್ಕೆ ನಾನು ಸ್ವಹಿಚ್ಛೆಯಿಂದ ರಾಜಿನಾಮೆ ನೀಡುತ್ತಿರುವುದಾಗಿ ಸವದಿ ಹೇಳಿದರು.

ಈಗಾಗಲೇ ಲಕ್ಷ್ಮಣ್ ಸವದಿ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹಾಗೂ ವಿವಿಧ ಹುದ್ದೆಗಳಿಗೂ ರಾಜಿನಾಮೆ ನೀಡಿದ್ದರು. ಟಿಕೆಟ್ ಸಿಗದ ಹಿನ್ನಲೆಯಲ್ಲಿ ಪಕ್ಷ ಬಿಡುವ ಸುಳಿವು ನೀಡಿದ್ದ ಸವದಿ ಅವರು ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.

ಕಾಂಗ್ರೆಸ್   ನಾಯಕರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಲಕ್ಷ್ಮಣ್ ಸವದಿ ಎರಡು ಬೇಡಿಕೆಗಳನ್ನು ಮುಂದಿಟ್ಟಿದ್ದರು. ಸದ್ಯ ಅಥಣಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಹಾಗೂ ಒಂದು ವೇಳೆ ಪಕ್ಷ ಗೆದ್ದು ಸರ್ಕಾರ ರಚಿಸಿದರೆ ಬೆಳಗಾವಿಯಲ್ಲಿ ನಿಂತಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಕೇಳಿದ್ದಾರೆ. ಇದಕ್ಕೆ ಕೈ ನಾಯಕರು ಆಗಲಿ ಎಂದಿದ್ದಾರೆ ಎಂದು ಸವದಿ ಹೇಳಿದರು. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಶ್ರಮಿಸುವುದಾಗಿ ಸವದಿ ಹೇಳಿದ್ದಾರೆ.

ಬಿಜೆಪಿ ಪಕ್ಷದ ಹಾಗೂ ವಿಧಾನಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ, ಇಂದಿನಿಂದ ನನಗೂ ಬಿಜೆಪಿಗೂ ನನಗೂ ಸಂಬಂಧ ಇಲ್ಲ. ಅರುಣ್‌ ಸಿಂಗ್‌ ಇನ್ನು ಬಿಜೆಪಿ ಬಿಟ್ಟು ಹೋದವರಿಗೆ ಜಾಗ ಇಲ್ಲ ಎಂದು ಹೇಳಿದ್ದಾರೆ. ನಾನು ಕಾಂಗ್ರೆಸ್‌ ಪಕ್ಷ ಸೇರುತ್ತಿದ್ದೇನೆ. ನನ್ನ ಹೆಣ ಕೂಡ ಬಿಜೆಪಿ ಕಚೇರಿ ಮುಂದೆ ಹೋಗಲ್ಲ. ಜನಾನು ಕಾಂಗ್ರೆಸ್‌ ನಾಯಕರಿಗೆ ಭೇಟಿ ಮಾಡಿ ಬೇಡಿಕೆ ಇಟ್ಟಿದ್ದೇನೆ. ಅದಕ್ಕೆ ಅವರು ಒಪ್ಪಿದ್ದಾರೆ.

ನಾನು ಕಾಂಗ್ರೆಸ್‌ ಟಿಕೆಟ್‌ ಪಡೆದು ಅಥಣಿಯಿಂದ ಗೆಲ್ಲುತ್ತೇನೆ. ಶಾಸಕ ಆಗುತ್ತೇನೆ, ನನ್ನ ಕ್ಷೇತ್ರದ ಕೆಲಸ ಮಾಡುತ್ತೇನೆ. ನನ್ನ ಜೊತೆ ಎಲ್ಲರಿಗೂ ಒಳ್ಳೇಯದಾಗಲಿ. ಒಂದು ಮನೆ ಬಿಟ್ಟ ಮೇಲೆ ಮತ್ತೆ ಮಾತ್ಯಾಕೆ. ನನ್ನ ಕ್ಷೇತ್ರದ ಜನ ನನ್ನ ಬೆಂಬಲಕ್ಕೆ ಇದ್ದಾರೆ. ಬಿಎಲ್‌ ಸಂತೋಷ್‌ ಬಗ್ಗೆ ನನಗೆ ಗೌರವ ಇದೆ. ನನಗೋಸ್ಕರ ಅವರು ರಾಜ್ಯಕ್ಕೆ ಇಂದು ಬಂದಿಲ್ಲ. ಅವರು ನನ್ನ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ನನ್ನ ನಿರ್ಧಾರ ಬದಲಿಸಲ್ಲ ಎಂದೆ ಎಂದು ಸವದಿ ಹೇಳಿದರು.

 

[t4b-ticker]

You May Also Like

More From Author

+ There are no comments

Add yours