ಶಾಲೆಯ ಅವರಣದಲ್ಲಿರುವ ವೃಕ್ಷ ಮಾತೆಗೆ ಪೂಜಿಸುವ ಮೂಲಕ ಪರಿಸರ ದಿನಾಚರಣೆ

 

ಶಾಲೆಯ ಅವರಣದಲ್ಲಿರುವ ವೃಕ್ಷ ಮಾತೆಗೆ ಪೂಜಿಸುವ ಮೂಲಕ ಪರಿಸರ ದಿನಾಚರಣೆ

ವೃಕ್ಷೋ ರಕ್ಷತಿ ರಕ್ಷಿತಃ ಉಕ್ತಿಯಂತೆ ಮರಗಳನ್ನು ಸಂರಕ್ಷಿಸಲು ಮರಗಳು ಸಹ ನಮ್ಮನ್ನು ಸಲಹುತ್ತವೆ. ಪರಿಸರ ದಿನಾಚರಣೆ ಆಚರಣೆಗೆ ಸೀಮಿತವಾಗದೆ ಪ್ರತಿ ದಿವಸವೂ ಪರಿಸರದ ಬಗ್ಗೆ ಜಾಗೃತಿ ವಹಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಡಾಕ್ಟರ್ ಮಹೇಶ್ ಮಾತನಾಡಿದರು

ಇಂದು ಸಿರಿಗೆರೆ ಸಮೀಪದ ಶ್ರೀ ಆಂಜನೇಯ ಸ್ವಾಮಿ ಪ್ರೌಢಶಾಲೆಯಲ್ಲಿ ಶಾಲೆಯ ಆವರಣದಲ್ಲಿರುವ ವೃಕ್ಷ ಮಾತೆಗೆ ಪೂಜಿಸುವುದರ ಮೂಲಕ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು

ಇಂದು ವೃಕ್ಷ ಮಾತೆಗೆ ಹಸಿರು ಸೀರೆಯನ್ನು ಉಡಿಸಿ ಬಳೆ ಹೂವುಗಳನ್ನು ತೊಡಿಸಿ ಬೀಜದುಂಡೆ ಗಳ ಆರತಿಯನ್ನು ಮಾಡಿ ಅರ್ಥಪೂರ್ಣವಾಗಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು ಪರಿಸರ ದಿನಾಚರಣೆ ಗಿಡಮರಗಳನ್ನು ಸಂರಕ್ಷಿಸುವುದು ಆಗಿದೆ ನಮ್ಮನೆಲ್ಲಾ ಪೊರೆವ ಪ್ರಕೃತಿಮಾತೆಯನ್ನು ಪೂಜಿಸುವುದರ ಮೂಲಕನಮ್ಮ ಭೂಮಿತಾಯಿಯನ್ನು ಸಂರಕ್ಷಿಸೋಣ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಹಿಂದಿ ಶಿಕ್ಷಕರಾದ ನಟರಾಜ್ ಅವರು ಮಾತನಾಡಿ ಪರಿಸರವು ನಮ್ಮನೆಲ್ಲ ಕಾಪಾಡುತ್ತಿದೆ ಲವ್ ಸಹ ನಮ್ಮ ಪ್ರಕೃತಿಯನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಆದ್ದರಿಂದ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದರು.

8ನೇ ತರಗತಿಯ ವಿದ್ಯಾರ್ಥಿ ಶೈಲ ಮಾತನಾಡಿ ಇಂದು ನಮ್ಮ ಶಾಲಾ ಕೈತೋಟದಲ್ಲಿ ಇರುವ ಮರಕ್ಕೆ ಸೀರೆ ಉಡಿಸಿ ಪೂಜೆ ಮಾಡಿದ್ದು ತುಂಬಾ ಖುಷಿಯಾಗಿದೆ ನಾವೆಲ್ಲರೂ ಪರಿಸರ ಉಳಿವಿಗಾಗಿ ಜಾಗೃತರಾಗುತ್ತೇವೆ ಎಂದು ಖುಷಿ ಹಂಚಿಕೊಂಡರು.

ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಿಕ್ಷಕರಾದ ನಾಗರಾಜ್ ಕರಿಬಸಪ್ಪ ಮಂಜುನಾಥ್ ಮಹಾಂತೇಶ್ ಕಂಟ್ರಾಕ್ಟರ್ ಪ್ರಕಾಶ್ ಗ್ರಾಮಸ್ಥರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours