ಚುನಾವಣೆಯಲ್ಲಿ ಯೋಗ್ಯರನ್ನು ಆಯ್ಕೆ ಮಾಡಿ:ಆರ್.ಬಿ.ತಿಮ್ಮಾಪುರ

 

chitradurga : ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಮಾದಿಗ ಜನಾಂಗ ಚುನಾವಣೆಯಲ್ಲಿ ನಿಮ್ಮ ಪರ ಕೆಲಸ ಮಾಡುವವರನ್ನು ಆಯ್ಕೆ ಮಾಡುವಂತ ಜಾಗೃತಿ ಮೂಡಿಸಿಕೊಳ್ಳಬೇಕಿದೆ ಎಂದು ಅಬಕಾರಿ ಸಚಿವ  (Minister of Excise)ಆರ್.ಬಿ.ತಿಮ್ಮಾಪುರ ಹೇಳಿದರು.

ಇದನ್ನೂ ಓದಿ: ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ

ಜಿಲ್ಲಾ ಮಾದಿಗ ನೌಕರರ ಸಾಂಸ್ಕøತಿಕ ಸಂಘದಿಂದ 2022-23 ನೇ ಸಾಲಿನಲ್ಲಿ ಹತ್ತನೆ ತರಗತಿ ಹಾಗೂ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತ.ರಾ.ಸು.ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.
ಮಾದಿಗ ನೌಕರರ ಸಾಂಸ್ಕøತಿಕ ಸಂಘದವರು ಅದ್ಬುತವಾದ ಕೆಲಸ ಮಾಡುತ್ತಿದ್ದಾರೆ. ಪ್ರತಿಭಾ ಪುರಸ್ಕಾರದ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಬೇಕಿದೆ. ಜಾತಿಯತೆ ನಿರ್ಮೂಲನೆಯಾಗಬೇಕು. ಎಲ್ಲರೂ ಒಗ್ಗಟ್ಟಾಗಿ ಚುನಾವಣೆಯಲ್ಲಿ ಯೋಗ್ಯರನ್ನು ಆಯ್ಕೆ ಮಾಡಿ. ಅಮೂಲ್ಯವಾದ ಮತ ಮೌಲ್ಯ ಉಳಿಯಬೇಕಾದರೆ ಯಾವ ಜಾಗದಲ್ಲಿ ಯಾರನ್ನು ಕೂರಿಸಬೇಕೆಂಬ ಅರಿವು ನಿಮ್ಮಲ್ಲಿರಬೇಕೆಂದು ವಿದ್ಯಾರ್ಥಿಗಳನ್ನು ಎಚ್ಚರಿಸಿದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ಎಲ್ಲಾ ರಂಗದಲ್ಲಿಯೂ ಸ್ಪರ್ಧೆಯಿರುವುದರಿಂದ ಅಂಕಗಳಿಗೆ ಹೆಚ್ಚಿನ ಮಹತ್ವವಿದೆ. ನಮ್ಮ ಕಾಲದಲ್ಲಿ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸುವವರು ಕಡಿಮೆಯಿದ್ದರು. ಅರ್ಜಿ ಹಾಕಿದ ಎಲ್ಲರಿಗೂ ನೌಕರಿ ಸಿಗುತ್ತಿತ್ತು. ಈಗ ಜನಸಂಖ್ಯೆ ಜಾಸ್ತಿಯಾಗುತ್ತಿರುವುದರಿಂದ ಅಂಕಗಳ ಮಾನದಂಡದ ಮೇಲೆ ನೌಕರಿ ನೀಡಲಾಗುತ್ತಿದೆ. ಹಾಗಾಗಿ ಓದಿನ ಕಡೆ ಹೆಚ್ಚು ಗಮನ ಕೊಡಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಪ್ರಬಲರು ಸೇರಿದ್ದಾರೆ. ಅಂಕಗಳ ಆಧಾರದ ಮೇಲೆ ಹುದ್ದೆ ಸಿಗುವುದರಿಂದ ಶಿಫಾರಸ್ಸು ನಡೆಯುವುದಿಲ್ಲ. ಒಳಮೀಸಲಾತಿ ಸಿಗದಿದ್ದರೆ ಜನಾಂಗ ಅವನತ್ತಿಯತ್ತ ಸಾಗುವುದರಲ್ಲಿ ಅನುಮಾನವಿಲ್ಲ. ಮಾದಿಗ ಅಧಿಕಾರಿಗಳ ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆಯಿದೆ. ವಿಧಾನಸಭೆ ಚುನಾವಣೆಯಲ್ಲಿ ಕುತಂತ್ರದಿಂದ ನನ್ನನ್ನು ಸೋಲಿಸಿದರು. ಆಗಂತ ನಾನು ಹೆದರುವುದಿಲ್ಲ. ನಿರಂತರವಾಗಿ ಹೋರಾಡುತ್ತೇನೆ. ಅನ್ಯಾಯಕ್ಕೊಳಗಾದವರು, ಶೋಷಿತರ ಪರವಾಗಿರುತ್ತೇನೆ. ಜನಾಂಗದ ಅಸ್ತಿತ್ವ ನಾಶದ ಅಂಚಿನಲ್ಲಿದೆ. ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ನಿಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಿ. ಆಸ್ತಿ ಮಾರಾಟ ಮಾಡಬಹುದು. ವಿದ್ಯೆ ಮಾರಲು ಆಗುವುದಿಲ್ಲ ಎಂದು ಶಿಕ್ಷಣದ ಮಹತ್ವ ತಿಳಿಸಿದರು.
ಅಧೀಕ್ಷಕ ಇಂಜಿನಿಯರ್ ಕೆ.ಜಿ.ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದನ್ನೂ ಓದಿ: ಬಿ.ಶ್ರೀರಾಮುಲುರನ್ನು ಬೆಳೆಸಿ ಶಾಸಕ ಮಾಡಿದ್ದು ನಾನು: ಜನಾರ್ಧನ ರೆಡ್ಡಿ
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ಐ.ಪಿ.ಎಸ್.ಅಧಿಕಾರಿ ಶ್ರೀಮತಿ ಕವಿತ, ನಿವೃತ್ತ ಜಂಟಿ ನಿರ್ದೇಶಕ ಎಂ.ರೇವಣಸಿದ್ದಪ್ಪ, ಜಿಲ್ಲಾ ಮಾದಿಗ ನೌಕರರ ಸಾಂಸ್ಕøತಿಕ ಸಂಘದ ಅಧ್ಯಕ್ಷ ಚಂದ್ರಪ್ಪ ಸಿ. ಸೇರಿದಂತೆ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

[t4b-ticker]

You May Also Like

More From Author

+ There are no comments

Add yours