ಧಾರವಾಡ ಜಿಲ್ಲಾಧಿಕಾರಿಯಾಗಿ ದಿವ್ಯಪ್ರಭು ಜಿ.ಆರ್.ಜೆ. ನೇಮಕ

 

ಬೆಂಗಳೂರು: ಧಾರವಾಡ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶವನ್ನ ಹೊರಡಿಸಿದ್ದು, ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದಿರುವ ಮಹಿಳಾ ಐಎಎಸ್ ಅಧಿಕಾರಿಯನ್ನ ನೇಮಿಸಿದೆ.

ಬಿಜೆಪಿ  ಅಧಿಕಾರದಲ್ಲಿದ್ದಾಗ ಧಾರವಾಡ ಜಿಲ್ಲೆಗೆ ಗುರುದತ್ ಹೆಗಡೆ ಅವರು ಜಿಲ್ಲಾಧಿಕಾರಿಯಾಗಿ ಬಂದಿದ್ದರು. ತದನಂತರ ಕಾಂಗ್ರೆಸ್ ಆಡಳಿತ ಆರಂಭವಾದ ಏಳು ತಿಂಗಳ ನಂತರ ವರ್ಗಾವಣೆಯಾಗಿದ್ದು, ಯಾವುದೇ ಸ್ಥಳವನ್ನ ತೋರಿಸಿಲ್ಲ.

ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನಂತರ    ವರ್ಗಾವಣೆಗಿದ್ದ ದಿವ್ಯಾ ಪ್ರಭು ಜಿ.ಆರ್‌ಜೆ ಅವರನ್ನ ಧಾರವಾಡ ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದ್ದು, ಮಹಿಳಾ ಅಧಿಕಾರಿಗಳ ಪರ್ವ ಜಿಲ್ಲೆಯಲ್ಲಿ ಮುಂದುವರೆದಂತಾಗಿದೆ.

ಇದನ್ನೂ ಓದಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಿಲ್ಲಾ ಪ್ರವಾಸ

ದಿವ್ಯಾ ಪ್ರಭು ಅವರು 2023 ರಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಣೆಗಾಗಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದುಕೊಂಡಿದ್ದಾರೆ.

[t4b-ticker]

You May Also Like

More From Author

+ There are no comments

Add yours