ಹನ್ನೊಂದು ಸಾವಿರ ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ:ಜ:3: ಹನ್ನೊಂದು ಸಾವಿರ ಕೊಳಗೇರಿ ನಿವಾಸಿಗಳ  ಕುಟುಂಬಗಳಿಗೆ ಹಕ್ಕು ಪತ್ರ ನೀಡಿ ನಮ್ಮ ಸರ್ಕಾರ ನುಡಿದಂತೆ ನಡೆದಿದೆ  ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ  ಮಾರುತಿ ನಗರ ಮತ್ತು  ಚೇಳುಗುಡ್ಡದ  ಕೊಳಗೇರಿ ನಿವಾಸಿಗಳಿಗೆ  ಸ್ಲಂ ಬೋರ್ಡ್ ವತಿಯಿಂದ ಹಕ್ಕು ಪತ್ರ ವಿತರಣೆ ಮತ್ತು ರಸ್ತೆ ಕಾಮಗಾರಿಗೆ  ಚಾಲನೆ ನೀಡಿ ಮಾತನಾಡಿದರು.
ನಮ್ಮ ಬಿಜೆಪಿ ಸರ್ಕಾರ 2018 ಚುನಾವಣೆಯಲ್ಲಿ ಘೋಷಿಸಿದಂತೆ ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ನೀಡಿ ಅವರ ಹಿತಾ ಕಾಯುವ ಕೆಲಸ ಮಾಡಿದ್ದೇವೆ.ಮಾರುತಿ ನಗರದ 55 ಜನರಿಗೆ ಮತ್ತು ಚೇಳುಗುಡ್ಡದ 568 ಜನರಿಗೆ ಹಕ್ಕು ಪತ್ರವನ್ನು ನೀಡಲಾಗಿದೆ. ಮಾರುತಿ ನಗರದ ನಿವಾಸಿಗಳಿಗೆ ನಮ್ಮ ಅಣ್ಣನವರಾದ ಅಶ್ವಥ್ ರೆಡ್ಡಿ ಅವರು 1982 ರಲ್ಲಿ ನಿವೇಶನ ನೀಡಿದ್ದರು ನಾನು ಶಾಸಕನಾದ ನಂತರ ಆಶ್ರಯ ಯೋಜನೆ, ಅಂಬೇಡ್ಕರ್ ಯೋಜನೆಯಡಿ ಮನೆಗಳನ್ನು ಕಟ್ಟಿಸಿಕೊಡಲಾಗಿತ್ತು. ನಗರದ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ಇರಲಿಲ್ಲ. ನಗರದ ಹಲವು ಭಾಗಗಳಲ್ಲಿ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು ಆದರೆ ಆ ಮನೆಗಳಿಗೆ ಅವರದೇ ಎಂದು ದಾಖಲೆ ಮತ್ತು ಹಕ್ಕು ಇರಲಿಲ್ಲ. ಆದರೆ ನಗರದ ಎಲ್ಲಾ ಕೊಳಗೇರಿ ನಿವಾಸಿಗಳಿಗೆ ಈಗ ಹಕ್ಕು ಪತ್ರ ನೀಡಿತ್ತಿದ್ದು ಅವರ ಆಸ್ತಿಗೆ ಅವರಿಗೆ ದಾಖಲೆ ಸಿಕ್ಕಂತಾಗಿದೆ ಎಂದರು.
11 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ನೀಡುವುದರಿಂದ  ಅವರ ಅವಲಂಬಿತರು ಸೇರಿ  ಸುಮಾರು 48 ಸಾವಿರ ಜನರಿಗೆ ಸದುಪಯೋಗ ಆಗಲಿದೆ. ನಾನು ಶಾಸಕನಾಗಿ  ನಗರದಲ್ಲಿ 9 ಸಾವಿರ ಮತ್ತು ಗ್ರಾಮಂತರ ಪ್ರದೇಶದಲ್ಲಿ 39 ಸಾವಿರ ಮನೆಗಳನ್ನು ನೀಡುಲು ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ.
 ನಗರದ ವಿಜಯನಗರ ರೈಲ್ವೆ ಟ್ರಾಕ್ ಬಳಿಯಲ್ಲಿ   30-40 ವರ್ಷದಿಂದ ಜೀವನ ನಡೆಸುತ್ತಿದ್ದರೆ ಆದರೆ ರಸ್ತೆಯಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದು ಅದು ಬದಲಿ ದಾರಿ ಖಾಸಗಿ ಅವರಿಗೆ ಸೇರಿತ್ತು. ಅವರು ದಾರಿ ಮುಚ್ಚಿದ್ದರಿಂದ ಅಲ್ಲಿನ ಲೇ ಹೌಟ್ ದಾರಿಯಲ್ಲಿ ಬಡವರು ನಿರ್ಮಿಸಿಕೊಂಡಿದ್ದರು ಆದರೆ ದಾರಿಗೆ ಸಮಸ್ಯೆ ಆದ್ದರಿಂದ ದಾರಿಯಲ್ಲಿ ಕಟ್ಟಿಕೊಂಡಿದ್ದ ಮನೆಗಳನ್ನು ತೆರವು ಮಾಡಿ ಅಲ್ಲಿನ  60 ರಿಂದ 70 ಕುಟುಂಬಗಳಿಗೆ ಬದಲಿ ವ್ಯವಸ್ಥೆ ಮಾಡಲಾಗಿದ್ದು ಮೂಲಭೂತ ಸೌಕರ್ಯ ಒದಗಿಸಲಾಗುವುದು.
ನಗರದಲ್ಲಿ ಸ್ಥಳಾವಕಾಶ ಇಲ್ಲದೆ ಇರುವುದು ಸಮಸ್ಯೆ ಆಗುತ್ತಿದೆ. ಸರ್ಕಾರ ಜಮೀನು ಕೊಳ್ಳಲು ತಯಾರಿದ್ದರು ಯಾರು ಸಹ ಮಾರಟ ಮಾಡಲು ಮುಂದೆ ಬರುತ್ತಿಲ್ಲ. ಇರುವ ಸರ್ಕಾರಿ ಜಾಗಗಳನ್ನು ಎಲ್ಲಾ‌  ಕಡೆ ಬಡವರಿಗೆ ನೀಡಲಾಗಿದ್ದು ಪ್ರಸ್ತುತ ಮೆದೇಹಳ್ಳಿ ಬಳಿ 1100 ಮನೆಗಳನ್ನು ಜಿ ಪ್ಲಸ್ 2 ಮಾದರಿಯಲ್ಲಿ ಮಾಡುತ್ತಿದ್ದು ಇದಕ್ಕೆ 18 ಸಾವಿರ ಅರ್ಜಿ ಬಂದಿದ್ದು ಮನೆ ಪಡೆದುಕೊಂಡರೆ ಮತ್ತೆ ಅರ್ಜಿ ಹಾಕುತ್ತಿದ್ದು ಸಮಸ್ಯೆ ಆಗುತ್ತಿದೆ ಅದಕ್ಕಾಗಿ ಎಲ್ಲಾವನ್ನು ಪರಿಶೀಲನೆ ಮಾಡಿ ಅರ್ಹ ಫಲಾನುಭವಿಗಳಿಗೆ ಮನೆ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ  ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಉಪಾಧ್ಯಕ್ಷ ಶ್ರೀದೇವಿ ಚಕ್ರವರ್ತಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ನಗರಸಭೆ ಸದಸ್ಯರಾದ ಶ್ರೀನಿವಾಸ್,ಬಾಲಮ್ಮ ವೆಂಕಟೇಶ್,ಡಿ. ಮಲ್ಲಿಕಾರ್ಜುನ್, ಅನುರಾಧ ರವಿಕುಮಾರ್, ವೇದಾ  ಇದ್ದರು.
[t4b-ticker]

You May Also Like

More From Author

+ There are no comments

Add yours