ಯುವ ಜನೋತ್ಸವದ ಅಂಗವಾಗಿ ಮ್ಯಾರಾಥಾನ್ ಓಟದ ಸ್ಪರ್ಧೆಗೆ ಡಿಹೆಚ್‍ಒ ಡಾ.ಆರ್.ರಂಗನಾಥ್ ಚಾಲನೆ

 

 

 

 

ಎಚ್‍ಐವಿ ಏಡ್ಸ್: ಅರಿವು ಮೂಡಿಸಿ
***********
ಚಿತ್ರದುರ್ಗ(ಕರ್ನಾಟಕ ವಾರ್ತೆ)ಸೆ.16:
ಯುವ ಜನತೆಯಲ್ಲಿ ಎಚ್‍ಐವಿ ಏಡ್ಸ್ ಅರಿವು ಮೂಡಿಸಿ ಸೋಂಕು ಬರದಂತೆ ಎಚ್ಚರಿಕೆವಹಿಸುವುದು. ಸೋಂಕಿತರಿಗಿರುವ ಕಳಂಕ ತಾರತಮ್ಯ ಹೋಗಲಾಡಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್ ಹೇಳಿದರು.
ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಲ್ಲಿ ಶನಿವಾರ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕದ ವತಿಯಿಂದ ಯುವಜನೋತ್ಸವದ ಅಂಗವಾಗಿ ಮ್ಯಾರಾಥಾನ್ ಸ್ಪರ್ಧೆಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಎಚ್‍ಐವಿ ಏಡ್ಸ್ ಸೋಂಕಿನ ವಿರುದ್ಧ ಹೋರಾಡಲು, ಅರಿವು ಮೂಡಿಸಲು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸಿ.ಓ.ಸುಧಾ ಮಾತನಾಡಿ, ಯುವಜನೋತ್ಸವದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ 5 ಕಿ.ಮೀ ಮ್ಯಾರಾಥಾನ್ ಓಟದ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಎಚ್‍ಐವಿ ಏಡ್ಸ್ ಬಗ್ಗೆ ಅರಿವು, ಏಡ್ಸ್ ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ತಾರತಮ್ಯವನ್ನು ತಡೆಗಟ್ಟುವುದು, ಎಚ್‍ಐವಿ ಏಡ್ಸ್ ನಿಯಂತ್ರಣ ಕಾಯ್ದೆ, ಉಚಿತ ಎಚ್‍ಐವಿ ಏಡ್ಸ್ ರಾಷ್ಟ್ರೀಯ ಸಹಾಯವಾಣಿ 1097 ಎಸ್‍ಟಿಐ ಇತ್ಯಾದಿಗಳ ಬಗ್ಗೆ ಯುವ ಜನತೆಯಲ್ಲಿ ಅರಿವು ಮೂಡಿಸಲಾಗುತ್ತದೆ ಎಂದರು.
ಎಚ್‍ಐವಿ ಏಡ್ಸ್ ಜಾಗೃತಿಗಾಗಿ ಯುವ ಜನತೆ ಮುಂದೆ ಬರಬೇಕು. ಮ್ಯಾರಾಥಾನ್ ಸ್ಪರ್ಧೆಯನ್ನು ಎಚ್‍ಐವಿ ಏಡ್ಸ್ ಅರಿವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ ಎಂದರು.
ವಿಜೇತರಿಗೆ ಬಹುಮಾನ ವಿತರಣೆ: ಮ್ಯಾರಾಥಾನ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ ಯುವಕ-ಯುವತಿಯರಿಗೆ ಪ್ರತ್ಯೇಕವಾಗಿ ನಗದು ಬಹುಮಾನ ವಿತರಿಸಲಾಯಿತು. ಮೊದಲ ಬಹುಮಾನ ರೂ.5000/-, ದ್ವಿತೀಯ ಬಹುಮಾನ ರೂ.3500/-, ತೃತೀಯ ಬಹುಮಾನ ರೂ.2500/- ಹಾಗೂ 4 ಮಂದಿ ಯುವಕರಿಗೆ ಹಾಗೂ 3 ಮಂದಿ ಯುವತಿಯರಿಗೆ  ತಲಾ ರೂ.1000/-ದಂತೆ ಒಟ್ಟು 7 ಸಮಾಧಾನಕರ ಬಹುಮಾನ ನೀಡಲಾಯಿತು.
ಎಚ್‍ಐವಿ/ ಏಡ್ಸ್ ಕುರಿತು ಜಿಲ್ಲಾಮಟ್ಟದಲ್ಲಿ ಯುವ  ಜನೋತ್ಸವದ ಅಂಗವಾಗಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಮಂಡಳಿ ಮಾರ್ಗಸೂಚಿಯನ್ವಯ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ 5 ಕಿ.ಮೀ ಮ್ಯಾರಾಥಾನ್ ಓಟದ ಸ್ಪರ್ಧೆಯು ಕನಕ ವೃತ್ತದಿಂದ ಆರಂಭವಾಗಿ ಮುಖ್ಯ ವೃತ್ತ, ಪ್ರವಾಸಿ ಮಂದಿರ, ಆಸ್ಪತ್ರೆ ವೃತ್ತದ ಮಾರ್ಗವಾಗಿ ಒನಕೆ ಓಬವ್ವ ಸ್ಟೇಡಿಯಂವರೆಗೂ ಸಾಗಿತು.
ಜಿಲ್ಲಾ ಮೇಲ್ವಿಚಾರಕ ವಿ.ಅಶೋಕ ಅವರು ಎಚ್‍ಐವಿ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅಭಿನವ್, ವಿವಿಧ ಸ್ಪೋಟ್ರ್ಸ್ ಕ್ಲಬ್ ಸದಸ್ಯರು, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಸಿಬ್ಬಂದಿ, ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ಇದ್ದರು.
ಫೋಟೋ ವಿವರ: ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಕನಕವೃತ್ತದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯುವಜನೋತ್ಸವದ ಅಂಗವಾಗಿ ಮ್ಯಾರಾಥಾನ್ ಓಟದ ಸ್ಪರ್ಧೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
[t4b-ticker]

You May Also Like

More From Author

+ There are no comments

Add yours