ಕಲೆ ಮತ್ತು  ಕಲಾವಿದರ ಉಳಿಸಲು ಇಲಾಖೆ ಅಗತ್ಯ ನೆರವು:ಎಸ್.ಕೆ.ಮಲ್ಲಿಕಾರ್ಜುನ್

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಡಿ.26:
ಗ್ರಾಮೀಣ ಜಾನಪದ  ಬುಡಕಟ್ಟು ಸಂಸ್ಕøತಿಯ ಕಲೆಗಳನ್ನು ಮತ್ತು ಕಲಾವಿದರನ್ನು  ಉಳಿಸಿ, ಬೆಳೆಸುವ ನಿಟ್ಟಿನಲ್ಲಿ  ಕನ್ನಡ ಮತ್ತು  ಸಂಸ್ಕøತಿ ಇಲಾಖೆಯು ಅಗತ್ಯ ನೆರವು ನೀಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಎಸ್.ಕೆ. ಮಲ್ಲಿಕಾರ್ಜುನ್ ತಿಳಿಸಿದರು.
ಹೊಸದುರ್ಗ ತಾಲ್ಲೂಕಿನ ಮತ್ತೋಡು ಹೋಬಳಿಯ ಕಸಪ್ಪನಹಳ್ಳಿ ಗ್ರಾಮದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಡೆದ ಗಿರಿಜನ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ಗ್ರಾಮೀಣ ಬುಡಕಟ್ಟು ಸಂಸ್ಕøತಿ ಕಲೆಗಳು ಮತ್ತು  ಕಲಾವಿದರು ಮೂಲೆ ಗುಂಪಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿ, ಇಂತಹ ಕಲೆಗಳನ್ನು ಮತ್ತು  ಕಲಾವಿದರನ್ನು  ಉಳಿಸಿ ಬೆಳೆಸುವ  ನಿಟ್ಟಿನಲ್ಲಿ  ಇಲಾಖೆಯು  ಸಹಾಯಧನ  ನೀಡುವ ಮೂಲಕ  ಕಲಾವಿದರಿಗೆ ಪೆÇ್ರೀತ್ಸಾಹ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ಹಾಗೂ ನಿವೃತ್ತ ಶಿಕ್ಷಕರಾದ ಡಿ.ಪರಶುರಾಮಪ್ಪ ಮಾತನಾಡಿ, ಭಾರತ ದೇಶದಲ್ಲಿ ಅಲ್ಲದೆ ನಮ್ಮ ಜಿಲ್ಲೆಯಲ್ಲಿಯು ಬಹುಪಾಲು ಜನಸಂಖ್ಯೆ ಬುಡಕಟ್ಟು ಸಂಸ್ಕøತಿಯ ಕಲೆಗಳನ್ನು  ಮತ್ತು  ವಿವಿಧ ವಿಶೇಷ ಆಚರಣೆಗಳನ್ನು ಹೊಂದಿರುವ ನಾಯಕ ಸಮಾಜ ಭಾರತ ದೇಶದ ರಾಮಾಯಣವನ್ನು ಬರೆದು ಕೊಟ್ಟ ಆದಿ ಕವಿ ವಾಲ್ಮೀಕಿ, ಶಿವನಿಗೆ ತನ್ನ ಭಕ್ತಿ ಕಾಣಿಕೆಯಾಗಿ ತನ್ನ ಕಣ್ಣನ್ನು ದಾನ ನೀಡಿದ ಬೇಡರ ಕಣ್ಣಪ್ಪ, ಗುರುವಿಗೆ ಭಕ್ತಿ ಕಾಣಿಕೆಯಾಗಿ ತನ್ನ ಹೆಬ್ಬೆರಳನ್ನು ನೀಡಿದ ಏಕಲವ್ಯ, ನಮ್ಮ ಚಿತ್ರದುರ್ಗವನ್ನು  ಬಹಳ ವೈಭವೊಪೇರಿತವಾಗಿ ಆಳಿದ ಪಾಳೆಗಾರ ರಾಜ ವೀರ ಮದಕರಿ ನಾಯಕ ಹೀಗೆ ಅನೇಕ ಮಹನೀಯರು ಸಮಾಜಕ್ಕೆ ಬಹು ದೊಡ್ಡ ಕೊಡುಗೆಗಳನ್ನು ನೀಡಿರುವುದು ಒಂದು ಇತಿಹಾಸ ಎಂದ ಅವರು ಕಸಪ್ಪನಹಳ್ಳಿಯಲ್ಲಿ ನಡೆಯುತ್ತಿರುವ  ಗಿರಿಜನ  ಉತ್ಸವ  ನಮ್ಮ ಸಮಾಜದಲ್ಲಿ ಅನೇಕ  ಜಾನಪದ ಕಲೆಗಳು ಮತ್ತು ಕಲಾವಿದರು ಇದ್ದು, ಅವರ ಕಲೆಗಳಿಗೆ ಧನ ಸಹಾಯ ನೀಡುವ ಮೂಲಕ ಇಲಾಖೆಯು ಅತ್ಯುತ್ತಮ  ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದ ಅವರು ಸಂವಿಧಾನ ಬದ್ಧವಾಗಿ ನಾವು ಒಗ್ಗಟ್ಟಾಗಿ ಶಿಕ್ಷಣವಂತರಾಗಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಗುಡ್ಡದ ನೇರಲಕೆರೆ ಗ್ರಾ.ಪಂ.ಅಧ್ಯಕ್ಷರಾದ ಟಿ.ಚಿಕ್ಕಣ್ಣ ಮಾತನಾಡಿ, ಗ್ರಾಮೀಣ ಜಾನಪದ ಕಲೆಗಳು ಉಳಿಯಬೇಕು ಬೆಳೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ  ಶ್ರೀ ಶನೇಶ್ವರ ಸ್ವಾಮಿ ಅರ್ಚಕರಾದ ರಾಮಣ್ಣ ಸ್ವಾಮೀಜಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ತಿಪ್ಪೇಸ್ವಾಮಿ, ರಂಗ ಕಲಾವಿದ  ಗಣೇಶಯ್ಯ, ಗ್ರಾ.ಪಂ ಸದಸ್ಯರಾದ ನಟರಾಜ್, ಲೋಕಮ್ಮ,ಅಶೋಕ್, ಕಲಾವಿದರಾದ ಕೃಷ್ಣಪ್ಪ, ಮುಖಂಡರಾದ ಮಳಲಿ ವಿಜಯ ಕುಮಾರ್, ಶಿಕ್ಷಕರಾದ ಲೋಹಿತ್, ಆನಂದಪ್ಪ, ಗೊಂಚಿಗಾರ್, ಶಿವಣ್ಣ, ಕಂದಾಯ ಇಲಾಖೆ ನಿವೃತ್ತ ಅಧಿಕಾರಿ ವೀರಣ್ಣ, ಲೋಕೋಪಯೋಗಿ ಇಲಾಖೆ ನಿವೃತ್ತ ಅಧಿಕಾರಿ ಶಿವಣ್ಣ, ಗ್ರಾ.ಪಂ ಮಾಜಿ ಸದಸ್ಯ ಓ.ರಮೇಶ್, ಕನ್ನಡ ಸಾಹಿತ್ಯ  ಪರಿಷತ್ತಿನ  ಮಾಜಿ ಅಧ್ಯಕ್ಷ ಹೆಗ್ಗೆರೆ ರಂಗಪ್ಪ, ಸಂಗೀತ ಕಲಾವಿದರಾದ ಓ.ಮೂರ್ತಿ, ಜಾನಪದ  ಕಲಾವಿದರಾದ ಪೀಲಾಪುರ ಆರ್.ಕಂಠೇಶ್, ವೆಂಕಟೇಶ್ ಸೇರಿಂತೆ ಮತ್ತಿತರರ ಇದ್ದರು.
ಇದೇ ಸಂದರ್ಭದಲ್ಲಿ  ಕರ್ನಾಟಕ  ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಸುಗ, ಸಂಗೀತ, ಕನ್ನಡ ಗೀತೆ, ಜಾನಪದ ಗೀತೆ, ತತ್ವಪದ, ಕೀಲು ಕುದುರೆ, ನಾಸಿಕ್ ಡೋಲ್, ನಂದಿ ಧ್ವಜ, ಗಾರುಡಿ ಗೊಂಬೆ, ಖಾಸ ಬೇಡರ ಪಡೆ, ತ್ರಾಷವಾಧ್ಯ, ಕಲಾತಂಡಗಳ ಕಲಾ ಪ್ರದರ್ಶನ ನಡೆಸಲಾಯಿತು.

[t4b-ticker]

You May Also Like

More From Author

+ There are no comments

Add yours