ಮತದಾರರಿಗೆ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ತಲುಪಿಸಿ: ಸಂಸದ ಚಂದ್ರಪ್ಪ

 

ಚಿತ್ರದುರ್ಗ ಮಾ. ೦೩
ರಾಜ್ಯದಲ್ಲಿ ಮುಂದಿನ ದಿನದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಮತದಾರರಿಗೆ ನೀಡುವ ಮೂರು ಭರವಸೆಗಳ ಗ್ಯಾರೆಂಟಿ ಕಾರ್ಡ್ ನ್ನು  ವಿತರಣೆ ಮಾಡುವಾಗ ಎಲ್ಲಾ ನಾಯಕರು ಸಾಮೂಹಿಕವಾಗಿ ಭಾಗವಹಿಸುವುದರ ಮೂಲಕ ಮತದಾರರಿಗೆ ತಲುಪಿಸಬೇಕಿದೆ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಸಲಹೆ ನೀಡಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಚಿತ್ರದುರ್ಗ ನಗರ ಮತ್ತು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿಯವತಿಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಗ್ಯಾರೆಂಟಿ ಕಾರ್ಡ್ ವಿತರಣಾ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ೩೫ ವಾರ್ಡ ಹಾಗೂ ೨೩ ಪಂಚಾಯಿತಿಗಳಿವೆ. ಈ ಪ್ರತಿಯೊಂದು ವಾರ್ಡ ಮತ್ತು ಪಂಚಾಯಿತಿಯಲ್ಲಿನ ಮನೆಗಳಿಗೂ ಸಹಾ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಕಾರ್ಡ ತಲುಪಬೇಕಿದೆ. ಇದರಲ್ಲಿ ಎಲ್ಲಾ ಅಭ್ಯರ್ಥಿಗಳು ಸಹಾ ಭಾಗವಹಿಸಬೇಕಿದೆ. ಈ ಕಾರ್ಯ ಮುಂದಿನ ೩-೪ ದಿನದಲ್ಲಿ ಆಗಬೇಕಿದೆ. ಇದರಲ್ಲಿ ಬ್ಲಾಕ್ ಸಮಿತಿಯ ಜವಾಬ್ದಾರಿ ಹೆಚ್ಚಾಗಿದೆ ಎಂದು ಮಾಜಿ ಸಂಸದರು ತಿಳಿಸಿದರು.
ಗ್ಯಾರೆಂಟಿ ಕಾರ್ಡ ವಿತರಣಾ ಸಮಾರಂಭದಲ್ಲಿ ಪಕ್ಷದ ನಾಯಕರು ಎಲ್ಲಿಗೆ ಬೇಕಾದರೂ ಹೋಗಬಹುದಾಗಿದೆ ಅವರಿಗೆ ಇಲ್ಲಿಗೆ ಬನ್ನಿ ಎಂಬ ನಿಬಂಧನೆ ಬೇಡ ಅವರು ಅನುಕೂಲವಾದಾಗ ಅಲ್ಲಿಗೆ ಬರಲು ಅವಕಾಶವನ್ನು ನೀಡಬೇಕಿದೆ ಇದರಿಂದ ಪರಿಣಾಮಕಾರಿಯಾಗಿ ಪ್ರಚಾರವಾಗಲಿದೆ. ಇಲ್ಲಿ ಭಾಗವಹಿಸಿದ ಪಕ್ಷದ ಕಾರ್ಯಕರ್ತರು, ಮುಖಂಡರು ಉತ್ತಮವಾದ ಸಲಹೆಯನ್ನು ನೀಡಿದ್ದಾರೆ.ಅವುಗಳನ್ನು ಸಹಾ ಡಿಸಿಸಿ ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ಬಿ.ಎನ್.ಚಂದ್ರಪ್ಪ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ಕಾಂಗ್ರೆಸ್ ಪಕ್ಷ ನೀಡಿದ ಭರವಸೆಯನ್ನು ಬೇರೆ ಯಾವ ಪಕ್ಷಗಳು ಸಹಾ ನೀಡಿಲ್ಲ, ಸಿದ್ದರಾಮಯ್ಯ ರವರು ಮುಖ್ಯಮಂತ್ರಿಗಳಾಗಿದ್ದಾಗ ನೂರು ಭರವಸೆಗಳನ್ನು ಈಡೇರಿಸಿದ್ದರು. ಜನರಿಗೆ ಭರವಸೆಯನ್ನು ನೀಡುವುದು ಪಕ್ಷದ ಕಾರ್ಯವಾಗಿದೆ ಅದೇ ರೀತಿ ಅಧಿಕಾರಕ್ಕೆ ಬಂದಾಗ ಅವುಗಳನ್ನು ಈಡೇರಿಸುವಲ್ಲಿ ಮುಂದಾಗಬೇಕಿದೆ. ಪಕ್ಷದ ಟೀಕೇಟ್ ಆಕಾಂಕ್ಷಿಗಳು ಈ ಗ್ಯಾರೆಂಟಿ ಕಾರ್ಡ ವಿತರಣೆ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಹಕಾರವನ್ನು ನೀಡಬೇಕಿದೆ ಎಂದರು.
ಮತ್ತೋರ್ವ ಆಕಾಂಕ್ಷಿಯಾದ ವಿರೇಂದ್ರ ಪಪ್ಪಿ ಮಾತನಾಡಿ,ಪಂಚಾಯಿತಿ ಮತ್ತು ವಾರ್ಡಗಳಲ್ಲಿ ಆಯಾ ಆಧ್ಯಕ್ಷರುಗಳ ಸಮ್ಮುಖದಲ್ಲಿ ಕಾರ್ಡಗಳನ್ನು ವಿತರಣೆ ಮಾಡಬೇಕಿದೆ, ಇವರೊಂದಿಗೆ ಮುಖಂಡರುಗಳು ನಾವುಗಳು ಸಾಥ್ ನೀಡಬೇಕಿದೆ. ಇದರಿಂದ ಪಕ್ಷದ ವರ್ಚಸ್ಸು ಬೆಳೆಯುತ್ತದೆ. ಕಾರ್ಡಗಳನ್ನು ವಿತರಣೆ ಮಾಡುವುದರ ಮೂಲಕ ಪಕ್ಷವನ್ನು ಬೆಳಸಬೇಕಿದೆ ಎಂದರು.
ಮಾಜಿ ಶಾಸಕರಾದ ಉಮಾಪತಿ ಮಾತನಾಡಿ, ವಾರ್ಡ ಮತ್ತು ಪಂಚಾಯಿತಿಗಳಲ್ಲಿ ಕಾರ್ಡ ವಿತರಣೆ ಸಮಯದಲ್ಲಿ ಮನೆ ಮನೆಗೆ ಹೋದಾಗ ಅಲ್ಲಿ ಬಿಜೆಪಿ, ಕಾಂಗ್ರೆಸ್ ಜೆಡಿಎಸ್ ಅನ್ನದೆ ಎಲ್ಲರಿಗೂ ಸಹಾ ಸಮೂಹಿಕವಾಗಿ ಕಾರ್ಡಗಳನ್ನು ವಿತರಣೆ ಮಾಡಿ ಅವರು ಬೇರೆ ಪಕ್ಷದವರಾಗಿದ್ದರೂ ಸಹಾ ನಮ್ಮ ಗ್ಯಾರೆಂಟಿ ಕಾರ್ಡ ನೋಡಿ ನಮ್ಮ ಪಕ್ಷಕ್ಕೆ ಮತವನ್ನು ಹಾಕುವ ರೀತಿ ಆಗಬೇಕಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಅದ ಕೆಲಸಗಳನ್ನು ಅವರಿಗೆ ತಿಳಿಸುವುದರ ಮೂಲಕ ಮತಯಾಚನೆಯನ್ನು ಮಾಡಬೇಕಿದೆ. ಚಿತ್ರದುರ್ಗ ಜಿಲ್ಲೆಯ ಆರು ಕ್ಷೇತ್ರದಲ್ಲಿ ಈ ಬಾರಿ ಆಕಾಂಕ್ಷಿಗಳು ಹೆಚ್ಚಾಗಿ ಇದ್ದಾರೆ ಇದರಿಂದಲೇ ತಿಳಿಯುತ್ತದೆ ಮುಂದಿನ ಬಾರಿ ಕಾಂಗ್ರೆಸ ಅಧಿಕಾರವನ್ನು ಹಿಡಿಯುವುದು ಶತ ಸಿದ್ದವಾಗಿದೆ ಎಂದರು.
ಚಿತ್ರದುರ್ಗ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಯು.ಲಕ್ಷಿö್ಮÃಕಾಂತ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾದ ಆರ್.ಪ್ರಕಾಶ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಿಸಿಸಿ ಅಧ್ಯಕ್ಷರಾದ ತಾಜ್‌ಪೀರ್ ಪಕ್ಷದ ಮುಖಂಡರಾದ ಹನುಮಲಿ ಷಣ್ಮುಖಪ್ಪ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಎನ್,ಡಿ,ಕುಮಾರ್, ಮುದಸಿರ್, ಮಹಡಿ ಶಿವಮೂರ್ತಿ, ನಾಗರಾಜ್ ಜಾನ್ಹವಿ, ಶ್ರೀಮತಿ ಗೀತಾ ನಂದಿನಿಗೌಡ, ಮೀನಾಕ್ಷಿ, ವೆಂಕಟೇಶ್, ಅಲ್ಲಾಭಕ್ಷಿ, ಹಾಲಸ್ವಾಮಿ, ಮೈಲಾರಪ್ಪ, ಓ.ಶಂಕರ್, ಕೃಷ್ಣಪ್ಪ, ಆನ್ವರ್ ಸೇರಿದಂತೆ ಇತರರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours