ಲೋಕ ಕದನಕ್ಕೆ ಡೇಟ್ ಫಿಕ್ಸ್ ,ಏಳು ಹಂತದಲ್ಲಿ ಮತದಾನ

 

ನವದೆಹಲಿ: ಲೋಕಸಭಾ ಚುನಾವಣೆಯ  ದಿನಾಂಕವನ್ನು ಚುನಾವಣಾ ಆಯೋಗ ಇಂದು ತಿಳಿಸಿದ್ದು, ರಂದು ಚುನಾವಣಾ ಫಲಿತಾಂಶವನ್ನು ಪ್ರಕಟ ಮಾಡಿದೆ. ಒಟ್ಟು 7 ಹಂತಗಳಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ ಅಂಥ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು.

ಇನ್ನೂ ಚುನಾವಣಾ ನೀತಿ ಸಂಹಿತೆ (Model Code of Conduct) ಇಂದಿನಿಂದಲೇ ಜಾರಿಯಾಗಲಿದೆ ಅಂತ ಅವರು ಹೇಳಿದರು. ಇದಲ್ಲದೇ ಚುನಾವಣಾ ಜೂನ್ 4 ರಂದು ಫಲಿತಾಂಶವನ್ನು ಪ್ರಕಟ ಮಾಡಲಾಗುವುದು ಅಂತ ಹೇಳಿದರು.

ಇದೇ ವೇಳೆ ಅವರು ಮಾತನಾಡಿ, “ಇದು ನಮಗೆ ಐತಿಹಾಸಿಕ ಕ್ಷಣ. 2024 ವಿಶ್ವಕ್ಕೆ ಚುನಾವಣೆಗಳ ವರ್ಷವಾಗಿದೆ. ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ರೋಮಾಂಚಕ ಪ್ರಜಾಪ್ರಭುತ್ವವಾಗಿ, ಭಾರತವು ಸಾರ್ವಕಾಲಿಕ ಕೇಂದ್ರಬಿಂದುವಾಗಿದೆ. ಪ್ರಜಾಪ್ರಭುತ್ವದ ಬಣ್ಣಗಳು ಇಲ್ಲಿ ಹೊರಹೊಮ್ಮುತ್ತವೆ ಮತ್ತು ಅದರಲ್ಲಿ ಎಲ್ಲಾ ಭಾಗಗಳನ್ನು ಸೇರಿಸಲಾಗಿದೆ. ದೇಶದ ಹೊಳಪನ್ನು ಹೆಚ್ಚಿಸುವ ರೀತಿಯಲ್ಲಿ ನಾವು ಚುನಾವಣೆಗಳನ್ನು ನಡೆಸುತ್ತೇವೆ ಎಂಬುದು ನಮ್ಮ ಭರವಸೆಯಾಗಿದೆ. 17ನೇ ಲೋಕಸಭೆಯ ಅವಧಿ ಜೂನ್ 16ಕ್ಕೆ ಕೊನೆಗೊಳ್ಳಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಇನ್ನೂ ವಿಧಾನಸಭಾ ಚುನಾವಣೆ ನಡೆಯಬೇಕಿದೆ ಅಂತ ತಿಳಿಸಿದರು.

ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಂಪೂರ್ಣ ತಯಾರಿಯಾಗಿದೆ ಅಂತ ಅವರು ಇದೇ ವೇಳೆ ಹೇಳಿದರು. ದೇಶದಲ್ಲಿ ಒಟ್ಟು 97 ಕೋಟಿ ಮತದಾರರು ಇದ್ದಾರೆ ಅಂಥ ಅವರು ತಿಳಿಸಿದರು. ಈ ಬಾರಿ 1.82 ಕೋಟಿ ಹೊಸ ಮತದಾರರು ತಮ್ಮ ಹಕ್ಕನ್ನು ಚಲಾವಣೆ ಮಾಡಲಿದ್ದಾರೆ ಅಂಥ ತಿಳಿಸಿದರು. ಇದಲ್ಲದೇ ಈ ಬಾರಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲಾ ಸಿದ್ದತೆಯನ್ನು ನಡೆಸಲಾಗಿದೆ. ಇದಲ್ಲದೇ ಸದ್ಯ ಸುಳ್ಳು ಸುದ್ದಿ ಮತ್ತು ನಕಲಿ ವಿಡಿಯೋಗಳನ್ನು ನಿಗ್ರಹ ಮಾಡಲು ಕೂಡ ಚುನಾವಣಾ ಆಯೋಗ ಎಲ್ಲಾ ರೀತಿಯಲ್ಲಿ ಸಿದ್ದತೆಯನ್ನು ನಡೆಸಲಾಗಿದೆ ಅಂಥ ಹೇಳಿದರು. “ಶಾಯಿ ಹಾಕಿಸಿಕೊಳ್ಳಿ. ಚುನಾವಣಾ ಆಯೋಗವು ಸಿದ್ಧವಾಗಿದೆ” ಅಂಥ ತಮ್ಮ ಮಾತಿನ ಆರಂಭದಲ್ಲೇ ತಿಳಿಸದಿರು.

ನಮ್ಮಲ್ಲಿ 97 ಕೋಟಿ ನೋಂದಾಯಿತ ಮತದಾರರು, 10.5 ಲಕ್ಷ ಮತಗಟ್ಟೆಗಳು, 1.5 ಕೋಟಿ ಮತಗಟ್ಟೆ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ, 55 ಲಕ್ಷ ಇವಿಎಂಗಳು, 4 ಲಕ್ಷ ವಾಹನಗಳಿವೆ 12 ರಾಜ್ಯಗಳಲ್ಲಿ ಮಹಿಳಾ ಮತದಾರರ ಅನುಪಾತವು ಪುರುಷ ಮತದಾರರಿಗಿಂತ ಹೆಚ್ಚಾಗಿದೆ. ಎಂದು ಅವರು ಇದೇ ವೇಳೆ ಹೇಳಿದರು. ಹಾಗಾದ್ರೇ ಕರ್ನಾಟಕ ಸೇರಿದಂಥೆ ದೇಶದ ಎಲ್ಲಾ ರಾಜ್ಯಗಳಲ್ಲಿ ಯಾವಾಗ ಚುನಾವಣೆಗಳು ನಡೆಯುತ್ತವೇ ಎನ್ನುವುದನ್ನು ನೋಡುವುದಾದ್ರೆ ಅದರ ವಿವರ ಕೆಳಕಂಡಿತದೆ.

ಭೌಗೋಳಿಕವಾಗಿ ವೈವಿಧ್ಯಮಯ ಮತ್ತು ಸಾಂಸ್ಕೃತಿಕವಾಗಿ ವೈವಿಧ್ಯಮಯ ಈ ದೇಶದ ಅತಿದೊಡ್ಡ ಚುನಾವಣೆಗೆ ನಾವು ಎರಡು ವರ್ಷಗಳಿಂದ ತಯಾರಿ ನಡೆಸಿದ್ದೇವೆ. ನಮ್ಮಲ್ಲಿ 97 ಕೋಟಿ ಮತದಾರರಿದ್ದಾರೆ. ಈ ಸಂಖ್ಯೆ ಅಮೆರಿಕ, ಯುರೋಪ್, ಆಸ್ಟ್ರೇಲಿಯಾದ ಒಟ್ಟು ಮತದಾರರಿಗಿಂತ ಹೆಚ್ಚಾಗಿದೆ. ನಮ್ಮಲ್ಲಿ 10.5 ಲಕ್ಷ ಮತಗಟ್ಟೆಗಳಿದ್ದು, 1.5 ಕೋಟಿ ಜನರು ನಿರ್ವಹಿಸುತ್ತಿದ್ದಾರೆ. 55 ಲಕ್ಷ ಇವಿಎಂಗಳಿವೆ. ಚುನಾವಣಾ ಆಯೋಗವು ಇಲ್ಲಿಯವರೆಗೆ 17 ಸಾರ್ವತ್ರಿಕ ಚುನಾವಣೆಗಳು ಮತ್ತು 400 ಕ್ಕೂ ಹೆಚ್ಚು ವಿಧಾನಸಭಾ ಚುನಾವಣೆಗಳನ್ನು ನಡೆಸಿದೆ. ಕಳೆದ 11 ಚುನಾವಣೆಗಳು ಶಾಂತಿಯುತವಾಗಿವೆ. ನ್ಯಾಯಾಲಯದ ಪ್ರಕರಣಗಳು ಕಡಿಮೆಯಾಗಿವೆ ಅಂಥ ತಿಳಿಸಿದರು. ಕಳೆದ ಒಂದು ವರ್ಷದಲ್ಲಿ ಹೊಸ ಮತದಾರರನ್ನು ನೋಂದಾಯಿಸಲು ನಾವು ತುಂಬಾ ಶ್ರಮಿಸಿದ್ದೇವೆ. ಈ ಬಾರಿ 18 ರಿಂದ 19 ವರ್ಷದೊಳಗಿನ 1.8 ಕೋಟಿ ಮತದಾರರು ಇರಲಿದ್ದಾರೆ. 20 ರಿಂದ 29 ವರ್ಷದೊಳಗಿನ 19.74 ಕೋಟಿ ಮತದಾರರು ಇರಲಿದ್ದಾರೆ. 85 ವರ್ಷಕ್ಕಿಂತ ಮೇಲ್ಪಟ್ಟ 82 ಲಕ್ಷ ಮತದಾರರಿದ್ದಾರೆ. ಯುವಕರು ಸೇರಿದಂತೆ ಜನರನ್ನು ಮತ ಚಲಾಯಿಸಲು ಉತ್ತೇಜಿಸಲು ಚುನಾವಣಾ ಆಯೋಗವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ‘ವೋಟ್ ಫಾರ್ ಶ್ಯೂರ್’ ಅಭಿಯಾನವನ್ನು ಪ್ರಾರಂಭಿಸಲಿದೆ ಅಂಥ ತಿಳಿಸಿದರು.

ಚುನಾವಣೆಯಲ್ಲಿ ರಕ್ತಪಾತ ಮತ್ತು ಹಿಂಸಾಚಾರಕ್ಕೆ ಅವಕಾಶವಿಲ್ಲ ಹಿಂಸಾಚಾರದ ಮಾಹಿತಿ ಎಲ್ಲಿಂದ ಬಂದರೂ, ನಾವು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. “ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳನ್ನು ಸೇರಿಸಲಾಗಿದೆ, ಇದರಿಂದಾಗಿ ನಮಗೆ ಮಾಹಿತಿ ನೀಡಲಾಗಿಲ್ಲ ಎಂದು ಯಾರೂ ನಂತರ ಹೇಳುವುದಿಲ್ಲ. ಜಿಲ್ಲಾಧಿಕಾರಿಗಳು ಪ್ರತಿ ಜಿಲ್ಲೆಯ ರಾಜಕೀಯ ಪಕ್ಷಗಳೊಂದಿಗೆ ಸಭೆಗಳನ್ನು ನಡೆಸಿದ್ದಾರೆ. ಅವರ ಆಕ್ಷೇಪಣೆಗಳನ್ನು ಪರಿಹರಿಸಲಾಗಿದೆ ಅಂತ ಹೇಳಿದರು.

ಪ್ರಸ್ತುತ ಲೋಕಸಭೆಯ ಅವಧಿ ಜೂನ್ 16 ರಂದು ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚುನಾವಣೇಗೆ ಎಲ್ಲಾ ರೀತಿಯಲ್ಲಿ ಸಿದ್ದತೆಯನ್ನು ಮಾಡಿಕೊಂಡಿದ್ದು, ಇಂದು ಚುನಾವಣೆಗೆ ಆದೇಶವನ್ನು ಹೊರಡಿಸಿದೆ. ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ.

ಲೋಕಸಭಾ ಚುನಾವಣೆಯ ಮತದಾನ ಏಪ್ರಿಲ್ 19 ರಿಂದ ಪ್ರಾರಂಭವಾಗಲಿದ್ದು, ಜೂನ್ 4 ರಂದು ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಏಪ್ರಿಲ್ 19 ರಂದು ಮೊದಲ ಹಂತ, ಏಪ್ರಿಲ್ 26 ರಂದು ಎರಡನೇ ಹಂತ, ಮೇ 7 ರಂದು ಮೂರನೇ ಹಂತ, ಮೇ 13 ರಂದು ನಾಲ್ಕನೇ ಹಂತ, ಮೇ 20 ರಂದು ಐದನೇ ಹಂತ, ಮೇ 25 ರಂದು ಆರನೇ ಹಂತ ಮತ್ತು ಜೂನ್ 1 ರಂದು ಏಳನೇ ಹಂತದ ಮತದಾನ ನಡೆಯಲಿದೆ.

ಈ ನಡುವೆ ಕರ್ನಾಟಕದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್‌ 26ರಂದು ಮೊದಲ ಹಂತದ ಮತದಾನ ನೇರವೇರಲಿದೆ. ಮೇ 7ರಂದು ಎರಡನೇ ಹಂತದಲ್ಲಿ ನಡೆಯಲಿದೆ. ಜೂನ್‌ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಮೊದಲನೇ ಹಂತ ಚುನಾವಣೆ: ಅರುಣಾಚಲ ಪ್ರದೇಶ, ಅಂಡಮಾನ್‌ ನಿಕೋಬಾರ್‌ ದ್ವೀಪ, ಆಂಧ್ರಪ್ರದೇಶ, ಚಂಡೀಗಢ, ದಿಯು-ದಮನ್‌ ನಾಗರ & ಹವೇಲಿ, ಗೋವಾ, ಗುಜರಾತ್‌, ಹಿಮಾಚಲ ಪ್ರದೇಶ, ಹರಿಯಾಣ, ಕೇರಳ, ಲಕ್ಷದ್ವೀಪ, ಲಡಾಕ್‌, ಮಿಜೀರಾಂ, ಮೇಘಾಲಯ, ನಾಗಾಲ್ಯಾಂಡ್‌, ಪುದುಚೇರಿ, ಸಿಕ್ಕಿಂ, ತಮಿಳುನಾಡು, ಪಂಜಾಬ್, ತೆಲಂಗಾಣ ಹಾಗೂ ಉತ್ತರಾಖಂಡ

ಎರಡನೇ ಹಂತ: ಕರ್ನಾಟಕ, ರಾಜಸ್ಥಾನ, ತ್ರಿಪುರಾ, ಮಣಿಪುರ

ಮೂರನೇ ಹಂತ: ಛತ್ತೀಸ್‌ಗಢ, ಅಸ್ಸಾಂ

ನಾಲ್ಕನೇ ಹಂತ: ಒಡಿಶಾ, ಮಧ್ಯಪ್ರದೇಶ, ಜಾರ್ಖಂಡ್‌

ಐದನೇ ಹಂತ: ಮಹಾರಾಷ್ಟ್ರ, ಜಮ್ಮು-ಕಾಶ್ಮೀರ

ಏಳನೇ ಹಂತ: ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಬಿಹಾರ

[t4b-ticker]

You May Also Like

More From Author

+ There are no comments

Add yours