ದೇಶದಲ್ಲಿ ಕೋವಿಡ್ 19 ಪಾಸಿಟಿವಿಟಿ ದರ ಕುಸಿತ, ಎಷ್ಟು?

 

ನವದೆಹಲಿ, ಮೇ 22: ದೇಶದಲ್ಲಿ ಕೋವಿಡ್ 19 ಪಾಸಿಟಿವಿಟಿ ದರ ಕುಸಿತಗೊಂಡಿದೆ, ಸಕ್ರಿಯ ಪ್ರಕರಣಗಳ ಇಳಿಕೆಯೊಂದಿಗೆ ಪರಿಸ್ಥಿತಿ ಸ್ಥಿರವಾಗಿದೆ.

ಮೇ 10 ರಂದು ಶೇ.24.83 ರಷ್ಟಿದ್ದ ಕೋವಿಡ್-19 ಪಾಸಿಟಿವಿಟಿ ದರ ಮೇ 22 ರಂದು ಶೇ.12.45ಕ್ಕೆ ಕುಸಿತ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಒಂದೇ ದಿನ 2.57 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಸತತ ಆರನೇ ದಿನವೂ ದೇಶದಲ್ಲಿ ಕೋವಿಡ್-19 ಪ್ರಕರಣಗಳ ದೈನಂದಿನ ಏರಿಕೆಯಲ್ಲಿ ಮೂರು ಲಕ್ಷಕ್ಕಿಂತ ಕಡಿಮೆಯಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

2.57 ಲಕ್ಷ ಹೊಸ ಪ್ರಕರಣ ಪತ್ತೆಯೊಂದಿಗೆ ದೇಶದಲ್ಲಿ ಒಟ್ಟಾರೇ ಪ್ರಕರಣಗಳ ಸಂಖ್ಯೆ 2.62,89,290ಕ್ಕೆ ಏರಿಕೆಯಾಗಿದೆ. 4,194 ಮಂದಿ ಸೋಂಕಿತರು ಮೃತಪಡುತ್ತಿರುವುದಾಗಿ ಒಟ್ಟಾರೇ ಸಾವಿನ ಸಂಖ್ಯೆ 2,95,525ಕ್ಕೆ ಏರಿಕೆಯಾಗಿದೆ.

ಒಟ್ಟಾರೇ ಸೋಂಕಿತರಲ್ಲಿ ಶೇ.11.12 ರಷ್ಟು 29,23,400 ಸಕ್ರಿಯ ಪ್ರಕರಣಗಳು ಇಳಿಕೆಯಾಗಿದ್ದು, ಚೇತರಿಕೆ ಪ್ರಮಾಣ ಶೇ.87.76 ರಷ್ಟಿದೆ.

ನೀತಿ ಆಯೋಗ ಸದಸ್ಯ (ಆರೋಗ್ಯ) ವಿಕೆ ಪೌಲ್, ಒಟ್ಟಾರೇ, ಪ್ರಕರಣಗಳ ಸಂಖ್ಯೆಯಲ್ಲಿಕುಸಿತ ಕಂಡಿದ್ದರೂ 382 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಈಗಲೂ ಶೇ.10 ರಷ್ಟಿದೆ. ಪಾಸಿಟಿವಿಟಿ ಪ್ರಮಾಣ, ದೈನಂದಿನ ಮತ್ತು ಸಕ್ರಿಯ ಪ್ರಕರಣಗಳ ಇಳಿಕೆಯೊಂದಿಗೆ ಕೋವಿಡ್-19 ಪರಿಸ್ಥಿತಿ ಸ್ಥಿರವಾಗಿದೆ ಎಂದರು.

ಮಾರ್ಚ್ 1 ರಲ್ಲಿ ಶೇ.8 ರಷ್ಟಿದ್ದ ಕೋವಿಶೀಲ್ಡ್ ಲಸಿಕೆ ವ್ಯರ್ಥ ಈಗ ಶೇ.1ಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಕೋವಾಕ್ಸಿನ್ ಲಸಿಕೆ ವ್ಯರ್ಥ ಶೇ.17ರಿಂದ ಶೇ.4ಕ್ಕೆ ಕಡಿಮೆಯಾಗಿದೆ. ಮಕ್ಕಳಲ್ಲಿಯೂ ಕೊರೊನಾವೈರಸ್ ಸೋಂಕು ಹರಡಬಹುದು ಆದರೆ, ಬಹುತೇಕವಾಗಿ ಲಘು ಸೋಂಕು ಕಾಣಿಸಿಕೊಳ್ಳಲಿದ್ದು, ಮರಣ ಪ್ರಮಾಣ ಕಡಿಮೆ ಇರಲಿದೆ ಎಂದು ಪೌಲ್ ಹೇಳಿದರು.

[t4b-ticker]

You May Also Like

More From Author

+ There are no comments

Add yours