ಇಂದಿನಿಂದ 18 ರಿಂದ 44 ವರ್ಷದವರಿಗೆ ಆದ್ಯತೆ ಗುಂಪುಗಳಿಗೆ ಕೋವಿಡ್ ಲಸಿಕೆ.

 

ಮೇ 22 ರಿಂದ 18 ರಿಂದ 44 ವಯೋಮಾನದ ಆದ್ಯತೆ ಗುಂಪುಗಳಿಗೆ ಕೋವಿಡ್ ಲಸಿಕೆ


ಚಿತ್ರದುರ್ಗ,ಮೇ.21:
ಜಿಲ್ಲೆಯಲ್ಲಿ 18 ರಿಂದ 44 ವರ್ಷ ವಯೋಮಾನದವರಲ್ಲಿ ಆದ್ಯತೆ ಗುಂಪುಗಳನ್ನು ಗುರುತಿಸಿ ಕೋವಿಡ್-19 ಲಸಿಕಾಕರಣವನ್ನು ಮೇ 22 ರಿಂದ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.
ರಾಜ್ಯ ಗುರುತಿಸಿರುವ ಕರೊನಾ ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತೆ ಗುಂಪುಗಳಿಗೆ ಕೋವಿಡ್ ಲಸಿಕೆ ನೀಡಲಾಗುವುದು.
 ರಾಜ್ಯ ಕರೊನಾ ಮುಂಚೂಣಿ ಕಾರ್ಯಕರ್ತರು: ಅಂಗವೈಕಲ್ಯ ಹೊಂದಿರುವ (ಮಾನಸಿಕ ಅಸ್ವಸ್ಥತೆ ಸೇರಿದಂತೆ) ಫಲಾನುಭವಿಗಳು ಮತ್ತು ಒಬ್ಬ ಆರೈಕೆದಾರರು, ಖೈದಿಗಳು, ಚಿತಾಗಾರ, ಸ್ಮಶಾನ, ರುದ್ರಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸ್ವಸಹಾಯಕರು,. ಆರೋಗ್ಯ ಕಾರ್ಯಕರ್ತರ ನಿಕಟ ಕುಟುಂಬಸ್ಥರು, ಕೋವಿಡ್-19 ಕರ್ತವ್ಯಕ್ಕೆ ನಿಯೋಜಿಸಲಾದ ಶಿಕ್ಷಕರು, ಸರ್ಕಾರಿ  ಸಾರಿಗೆ  ಸಿಬ್ಬಂದಿ, ಆಟೋ ಮತ್ತು ಕ್ಯಾಬ್ ಚಾಲಕರು, ವಿದ್ಯುತ್  ಮತ್ತು ನೀರು ಸರಬರಾಜು ಮಾಡುವವರು, ಅಂಚೆ ಇಲಾಖೆಯ ಸಿಬ್ಬಂದಿಗಳು, ಬೀದಿಬದಿ ವ್ಯಾಪಾರ ಮಾಡುವವರು, ಭದ್ರತೆ ಮತ್ತು ಕಚೇರಿಗಳ ಹೌಸ್ ಕೀಪಿಂಗ್ ಸಿಬ್ಬಂದಿಗಳು, ನ್ಯಾಯಾಂಗ ಅಧಿಕಾರಿಗಳು, ವಯೋವೃದ್ಧರ, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರ ಆರೈಕೆದಾರರು, ಮಕ್ಕಳ ಸಂರಕ್ಷಣಾಧಿಕಾರಿಗಳು, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ, ಮಾದ್ಯಮದವರು, ಆಸ್ಪತ್ರೆಗೆ ಸರಕು ಸರಬರಾಜು ಮಾಡುವ ವ್ಯಕ್ತಿಗಳು, ಆಯಿಲ್ ಇಂಡಸ್ಟ್ರಿ, ಗ್ಯಾಸ್ ಸರಬರಾಜು ಮಾಡುವವರು, ಔಷಧಿ ತಯಾರಿಸುವ ಕಂಪನಿ ಸಿಬ್ಬಂದಿಗಳು, ಆಸ್ಪತ್ರೆಗೆ ಆಕ್ಸಿಜನ್ ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವ ಸಿಬ್ಬಂದಿಗಳು, ಅಧಿಕೃತ ಗುರುತಿನ ಚೀಟಿ ಹೊಂದಿರದ ಫಲಾನುಭವಿಗಳು (ವೃದ್ಧಾಶ್ರಮ ವಾಸಿಗಳು, ನಿರ್ಗತಿಕರು), ಭಾರತೀಯ ಆಹಾರ ನಿಗಮ ಸಿಬ್ಬಂದಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕೆಲಸಗಾರರು ಸೇರಿದ್ದಾರೆ.
ಆದ್ಯತೆ ಗುಂಪು: ಕಟ್ಟಡ ಕಾರ್ಮಿಕರು, ಟೆಲಿಕಾಂ ಮತ್ತು ಇಂಟರ್‍ನೆಟ್ ಸೇವಾದಾರರು, ವಿಮಾನಯಾನ ಸಂಸ್ಥೆಗಳ ಸಿಬ್ಬಂದಿಗಳು, ಬ್ಯಾಂಕ್ ಸಿಬ್ಬಂದಿ, ಪೆಟ್ರೋಲ್ ಬ್ಯಾಂಕ್ ಕೆಲಸಗಾರರು, ಚಿತ್ರೋದ್ಯೋಮದ ಉದ್ಯಮಿ, ಕಾರ್ಯಕರ್ತ, ಸಿಬ್ಬಂದಿ, ಅಡ್ಡೋಕೇಟ್‍ಗಳು, ಹೋಟೆಲ್ ಮತ್ತು ಅತಿಥ್ಯ ಸೇವಾದಾರರು, ಕೆಎಂಎಫ್ ಸಿಬ್ಬಂದಿಗಳು, ರೈಲ್ವೆ ಸಿಬ್ಬಂದಿಗಳು, ಗಾಮೆಂಟ್ ಕಾರ್ಖಾನೆ ಸಿಬ್ಬಂದಿಗಳು, ಅರಣ್ಯ ಇಲಾಖೆ ಸಿಬ್ಬಂದಿಗಳು, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗಳು, ಜಿಎಐಎಲ್ ಸಿಬ್ಬಂದಿಗಳು, ಆರ್‍ಎಸ್‍ಕೆ ಕೆಲಸಗಾರರು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುವ  ಆಟಗಾರರು,, ಸ್ವಧಾರ್ ಗೃಹ ವಾಸಿಗಳು ಮತ್ತು ರಾಜ್ಯ ಮಹಿಳಾ ನಿಲಯವಾಸಿಗಳು (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ) ಹಿಂದೂಸ್ತಾನ್ ಏರೋನಾಟಿಕ್ಸ್ ಸಂಸ್ಥೆಯ ಸಿಬ್ಬಂದಿಗಳು ಸೇರಿದ್ದಾರೆ.
ಮೇ 24 ರಿಂದ ಶಾಲಾ ಕಾಲೇಜುಗಳಲ್ಲಿ ಲಸಿಕಾ ಅಧಿವೇಶನ: ಚಿತ್ರದುರ್ಗ ನಗರದಲ್ಲಿ ಜಿಲ್ಲಾ ಆಸ್ಪತ್ರೆ ಆವರಣದ ಜಿಲ್ಲಾ ತರಬೇತಿ ಕೇಂದ್ರ ಮತ್ತು ನಗರ ಕೇಂದ್ರಗಳಲ್ಲಿ ಕೋವಿಡ್ ಲಸಿಕಾ ಕೇಂದ್ರಗಳನ್ನು ನಡೆಸುತ್ತಿದ್ದು, ನಗರ ಆರೋಗ್ಯ ಕೇಂದ್ರಗಳ ಹೊರತುಪಡಿಸಿದ ಲಸಿಕಾ ಕೇಂದ್ರಗಳನ್ನು ಮೇ 24 ರಿಂದ ಶಾಲಾ ಮತ್ತು ಕಾಲೇಜುಗಳಲ್ಲಿ ಲಸಿಕಾ ಅಧಿವೇಶನ ನಡೆಸಲು ಗುರುತಿಸಲಾಗಿದೆ.
 ಜಿಲ್ಲಾ ತರಬೇತಿ ಕೇಂದ್ರ, ಜಿಲ್ಲಾ ಆಸ್ಪತ್ರೆ ಆವರಣ, ಚಿತ್ರದುರ್ಗ ಲಸಿಕಾ ಕೇಂದ್ರವನ್ನು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ನಗರ ಸಭೆ ಹತ್ತಿರ ಚಿತ್ರದುರ್ಗ ಇಲ್ಲಿಗೆ ಬದಲಾಯಿಸಲಾಗಿದೆ. ನಗರ ಆರೋಗ್ಯ ಕೇಂದ್ರ, ಬುದ್ಧ ನಗರ, ಸ್ಟೇಡಿಯಂ ಹತ್ತಿರ, ಚಿತ್ರದುರ್ಗ ಈ ಲಸಿಕಾ ಕೇಂದ್ರವನ್ನು ಬಾಲಭವನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸ್ಟೇಡಿಯಂ ಹತ್ತಿರ, ಚಿತ್ರದುರ್ಗ ಇಲ್ಲಿಗೆ ಬದಲಾಯಿಸಲಾಗಿದೆ. ನಗರ ಆರೋಗ್ಯ ಕೇಂದ್ರ, ನೆಹರು ನಗರ, ಹೊಳಲ್ಕೆರೆ ರಸ್ತೆ, ಚಿತ್ರದುರ್ಗ ಈ ಲಸಿಕಾ ಕೇಂದ್ರವನ್ನು ಶ್ರೀ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ, ಹೊಳಲ್ಕೆರೆ ರಸ್ತೆ, ಚಿತ್ರದುರ್ಗ ಇಲ್ಲಿಗೆ ಬದಲಾಯಿಸಲಾಗಿದೆ. ನಗರ ಆರೋಗ್ಯ ಕೇಂದ್ರ, ಮಾರುತಿ ನಗರ, ಗೋಪಾಲಪುರ ರಸ್ತೆ, ಚಿತ್ರದುರ್ಗ ಈ ಲಸಿಕಾ ಕೇಂದ್ರವನ್ನು ರಿಜಿನಲ್ ಶಾಲೆ, ವೆಂಕಟೇಶ್ವರ ಟಾಕೀಸ್ ಹತ್ತಿರ, ಚಿತ್ರದುರ್ಗ ಇಲ್ಲಿಗೆ ಬದಲಾಯಿಸಲಾಗಿದೆ.
ಮೇ 22 ರಿಂದ ರಾಜ್ಯಸರ್ಕಾರದ ಆದೇಶದಂತೆ 18 ರಿಂದ 44 ವರ್ಷ ವಯೋಮಾನದ ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತಾ ವಲಯದ ಫಲಾನುಭವಿಗಳಿಗೆ ಲಸಿಕಾ ಅಧಿವೇಶನ ನಡೆಸಲು ಆದೇಶವಾಗಿರುವುದರಿಂದ ಈ ವಯೋಮಾನದ ಲಸಿಕಾ ಫಲಾನುಭವಿಗಳಿಗೆ ಲಸಿಕಾ ಅಧಿವೇಶನ ನಡೆಸಲು ಅನುಮತಿ ನೀಡಿದೆ.

 18 ರಿಂದ 44 ವರ್ಷದ ವಯೋಮಾನದ ಮುಂಚೂಣಿ ಕರೊನಾ ಕಾರ್ಯಕರ್ತರು ಮತ್ತು ಆದ್ಯತಾ ವಲಯದ ಫಲಾನುಭವಿಗಳಿಗೆ ಲಸಿಕೆ ನೀಡಲು ಲಸಿಕಾ ಅಧಿವೇಶನವನ್ನು ಮೇ 22 ರಿಂದ ರಾಜ್ಯ ಸರ್ಕಾರ ಗುರುತಿಸಿರುವ 22 ಮುಂಚೂಣಿ ಕರೊನಾ ಕಾರ್ಯಕರ್ತರ ಕರ್ತವ್ಯ ನಿರತ ಸ್ಥಳಗಳಲ್ಲಿ ಲಸಿಕಾ ಅಧಿವೇಶನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours