ಅರ್ಧ ದಾರಿಯಲ್ಲಿ ಕತ್ತು ಕೊಯ್ದ ಕಾಂಗ್ರೆಸ್ : ರಘು ಆಚಾರ್ ವಾಗ್ದಾಳಿ

 

ಚಿತ್ರದುರ್ಗ:ಕಾಂಗ್ರೆಸ್ ಟಿಕೇಟ್ ಎರಡನೇ ಪಟ್ಟಿ ಬಿಡುಗಡೆ ಹಿನ್ನಲೆ ಚಿತ್ರದುರ್ಗ ಕಾಂಗ್ರೆಸ್ ಟಿಕೆಟ್  ಆಕಾಂಕ್ಷಿ ರಘುಆಚಾರ್ ಅಸಮಾಧಾನ ಹೊರಹಾಕಿದ್ದಾರೆ. ಜಿಲ್ಲಾ ಕಾಂಗ್ರೆಸ್  ನಲ್ಲಿ ಆಕಾಂಕ್ಷಿಗಳ ಬಿನ್ನಮತ ಸ್ಪೋಟ.ಕಾಂಗ್ರೆಸ್ ವಿರುದ್ಧ ರೆಬಲ್ ಆದ ರಘುಆಚಾರ್.ಚಿತ್ರದುರ್ಗದಲ್ಲಿ 2ಬಾರಿ MLC ಆಗಿದ್ದು ಈ ಬಾರಿ ಟಿಕೆಟ್ ನನಗೆ ಎಂಬ ಅಚಲ ವಿಶ್ವಾಸದಲ್ಲಿದ್ದ ರಘು ಅಚಾರ್ ಅವರಿಗೆ ಟಿಕೆಟ್ ಕೈ ತಪ್ಪಿದ್ದು ನಟ ದೊಡ್ಡಣ್ಣನ ಅಳಿಯ ಕೆಸಿ ವೀರೇಂದ್ರ ಪಪ್ಪಿಗೆ ಕೈ ಟಿಕೇಟ್ ಘೋಷಣೆ ಮಾಡಿದೆ.

ರಘು ಆಚಾರ್ ಪರವಾಗಿ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಬ್ಯಾಟ್ ಬೀಸಿದ್ದರು.ಡಿಕೆಶಿ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ ಕೆಸಿ ವೀರೇಂದ್ರ ಪಪ್ಪಿ ಎಂದು ಹೇಳಿತ್ತಿದ್ದು ಟಿಕೆಟ್ ಆಕಾಂಕ್ಷಿ‌ ಮಾಜಿ MLC ರಘುಆಚಾರ್ ಕೈ ನಾಯಕರ ವಿರುದ್ಧ ವಾಗ್ದಾಳಿ‌ ನಡೆಸಿದ್ದಾರೆ.ಸಿದ್ದರಾಮಯ್ಯ ಅವರೇ ನನಗೆ, ಸ್ಪರ್ಧಿಸುವಂತೆ ಹೇಳಿದ್ರು. 3 ನೇ ಬಾರಿಗೆ MLC ಆಗೋದು ಬೇಡ,MLAಗೆ ಸ್ಪರ್ಧಿಸಿ ಎಂದು ಕೈ ನಾಯಕರು ಹೇಳಿದ್ರು.ಈಗ ತಗೋ ಬಂದು ಅರ್ಧದಾರಿಯಲ್ಲೇ ಕತ್ತು ಕೊಯ್ದಿದ್ದಾರೆ.ಜಾತಿ ಇಲ್ಲವೆಂಬ ಸಣ್ಣ ಕಾರಣಕ್ಕೆ ಈ ರೀತಿ ಮಾಡಿದ್ದಾರೆ.ಈ ಜಿಲ್ಲೆಯ ಜನ ಇದಕ್ಕೆ ಉತ್ತರಿಸ್ತಾರೆ.ನನಗೊಬ್ಬನಿಗೆ ಅಲ್ಲ,ಗೋಪಿಕೃಷ್ಣಗು ಕಾಂಗ್ರೆಸ್ ಅನ್ಯಾಯ.ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲ.197 ಸಣ್ಣ ಸಮುದಾಯಗಳಿಗೆ ಕಾಂಗ್ರೆಸ್ ಒಂದು ಸ್ಥಾನ ನೀಡಿಲ್ಲ.ಆ ಸಮುದಾಯಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷರಿಗೆ ಗೌರವ ಇದೆಯೊ ಇಲ್ಲವೊ ಗೊತ್ತಿಲ್ಲ

.ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ರಘುಆಚಾರ್ ಅಸಮಧಾನ.ಸಾಮಾಜಿಕ ನ್ಯಾಯ ಮರೆತು ಕಾಂಗ್ರೆಸ್ ತೀರ್ಮಾನ.ಜಾತಿ ಇಲ್ಲ ಅನ್ನೊ ಕಾರಣಕ್ಕೆ ಕಾಂಗ್ರೆಸ್ ನನ್ನನ್ನು ನಿರ್ಲಕ್ಷ್ಯಿಸಿದೆ.ಇಡೀ ರಾಜ್ಯ ಸುತ್ತಿ ವಿಶ್ವಕರ್ಮ ಸಮಾಜ ಕಾಂಗ್ರೆಸ್ ಗೆ ಮತ ಹಾಕದಂತೆ ಹೋರಾಟ.ಮಾರ್ಚ್ 17 ರಂದು ಚಿತ್ರದುರ್ಗದಲ್ಲಿ ನಾಮಪತ್ರ ಸಲ್ಲಿಸುವೆ.ಬೆಂಬಲಿಗರ ಸಭೆ ನಡೆಸಿ ಸೂಕ್ತ ನಿರ್ಧಾರ ಇಂಗಿತ.

[t4b-ticker]

You May Also Like

More From Author

+ There are no comments

Add yours