ಮಾಜಿ ಸಿಎಂ ಬಂಧನ ,ಅರೆಸ್ಟ್ ಆಗಿದ್ದೇಕೆ.

 

ವಿಶಾಖಪಟ್ಟಣಂ(ಆಂಧ್ರ ಪ್ರದೇಶ):ಆಂಧ್ರ ಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಗದಿಗೆದರಿವೆ. ಟಿಡಿಪಿ ಮತ್ತು ವೈಎಸ್​ಆರ್​ ಪಕ್ಷಗಳ ನಡುವೆ ರಾಜಕೀಯ ಕೆಸರೆರಚಾಟ ಜೋರಾಗಿದೆ. ಇಂದು ಬೆಳಗ್ಗೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸ್ವಲ್ಪ ಸಮಯದ ಬಳಿಕ ಚಂದ್ರಬಾಬು ನಾಯ್ಡು ಅವರನ್ನು ವಿಶಾಖಪಟ್ಟಣಕ್ಕೆ ಕರೆದೊಯ್ಯಲಾಯಿತು. ಇವರ ಬಂಧನದ ಬೆನ್ನಲ್ಲೇ ವಿಶಾಖದಲ್ಲಿ ಮಾಜಿ ಸಚಿವ ಗಂಟಾ ಶ್ರೀನಿವಾಸ ಅವರ ಬಂಧನ ಸಹ ಆಗಿದೆ.

ಪ್ರಕರಣ ಮಾಹಿತಿ: ಇಂದು ಬೆಳಗ್ಗೆ 6 ಗಂಟೆ ಸುಮಾರು ನಂದ್ಯಾಲದ ಆರ್‌ಕೆ ಫಂಕ್ಷನ್‌ ಹಾಲ್‌ನಲ್ಲಿ ಚಂದ್ರಬಾಬು ನಾಯ್ಡು ಅವರು ತಂಗಿದ್ದ ಬಸ್‌ನಿಂದ ಕೆಳಗಿಳಿದಾಗ ಪೊಲೀಸರು ಅವರೊಂದಿಗೆ ಮಾತುಕತೆ ನಡೆಸಿ ವಶಕ್ಕೆ ಪಡೆದರು. ಈ ವೇಳೆ ಮಾನವ ಹಕ್ಕುಗಳನ್ನು ಏಕೆ ಉಲ್ಲಂಘಿಸಲಾಗುತ್ತಿದೆ ಎಂದು ಚಂದ್ರಬಾಬು ಪ್ರಶ್ನಿಸಿದ ಅವರು ನಾನು ತಪ್ಪು ಮಾಡಿದರೆ ರಸ್ತೆಯಲ್ಲೇ ನೇಣು ಹಾಕಿ. ಯಾವ ಕಾನೂನಿನ ಅಡಿಯಲ್ಲಿ ನನ್ನನ್ನು ಬಂಧಿಸುತ್ತೀರಿ. ಮೂಲಭೂತ ಸಾಕ್ಷ್ಯಗಳಿಲ್ಲದೆ ನನ್ನನ್ನು ಹೇಗೆ ಬಂಧಿಸುತ್ತೀರಿ ಎಂದು ಪ್ರಶ್ನಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.

ನಾವು ಹೈಕೋರ್ಟ್‌ಗೆ ಪ್ರಾಥಮಿಕ ಸಾಕ್ಷ್ಯವನ್ನು ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಂದೆಡೆ ಚಂದ್ರಬಾಬು ಪರ ವಕೀಲರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ವಕೀಲರು ಪೊಲೀಸರಿಗೆ ಸಾಕ್ಷ್ಯವನ್ನು ತೋರಿಸುವಂತೆ ಕೇಳಿದರು. ರಿಮಾಂಡ್ ವರದಿಯಲ್ಲಿ ಎಲ್ಲವೂ ಇದೆ ಎಂದು ಪೊಲೀಸರು ತಿಳಿಸಿದರು. ಪೊಲೀಸರು ನಮ್ಮನ್ನು ಸುತ್ತುವರಿದು ಬೆದರಿಕೆ ಹಾಕುವುದು ಸರಿಯಲ್ಲ. ನಾವು ವಿಚಲಿತರಾಗಿಲ್ಲ, ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ ಎಂದು ಚಂದ್ರಬಾಬು ಹೇಳಿದರು. ಚಂದ್ರಬಾಬು ಅವರನ್ನು ಬಂಧಿಸಿರುವುದು ಕಾನೂನು ಬಾಹಿರ ಎನ್ನುತ್ತಾರೆ ವಕೀಲರು.

 

550 ಕೋಟಿ ರೂಪಾಯಿ ಕೌಶಲ ಅಭಿವೃದ್ಧಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ. ನಾಯ್ಡು ಅವರನ್ನು ನಂಧ್ಯಾಲ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ಯಲಾಗಿತ್ತು. ವೈದ್ಯಕೀಯ ಪರೀಕ್ಷೆಯ ನಂತರ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಅವರನ್ನು ವಿಜಯವಾಡದ ಸಿಐಡಿ ಕೋರ್ಟ್‌ಗೆ ಹಾಜರು ಪಡಿಸಲಾಗುತ್ತಿದೆ. ಚಂದ್ರಬಾಬು ನಾಯ್ಡು ಬಂಧನವನ್ನು ವಿರೋಧಿಸಿ ಆಂಧ್ರ ಪ್ರದೇಶದಲ್ಲಿ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ.

ಮತ್ತೊಂದೆಡೆ, ಕೋನಸೀಮಾ ಜಿಲ್ಲೆಯ ರಜೌಲಿನಲ್ಲಿ ಚಂದ್ರಬಾಬು ನಾಯ್ಡು ಅವರ ಮಗ ನರಾ ಲೋಕೇಶ್ ಅವರನ್ನು ಪೊಲೀಸರು ತಡೆದಿದ್ದಾರೆ. ತಮ್ಮ ತಂದೆ ಚಂದ್ರಬಾಬು ನಾಯ್ಡು ಅವರ ಬಂಧನವನ್ನು ವಿರೋಧಿಸಿ ಅವರು, ಟಿಡಿಪಿ ಕಾರ್ಯಕರ್ತರೊಂದಿಗೆ ದಿಢೀರ್ ಪ್ರತಿಭಟನೆಗೆ ಮುಂದಾದರು. ಈ ವೇಳೆ ಪೊಲೀಸರು ಮತ್ತು ನರಾ ಲೋಕೇಶ್ ನಡುವೆ ವಾಗ್ವಾದ ನಡೆಯಿತು.

ಚಂದ್ರಬಾಬು ನಾಯ್ಡು ಅವರ ಬಂಧನವಾದ ಆರ್.ಕೆ. ಫಂಕ್ಷನ್ ಹಾಲ್ ನಲ್ಲಿ ಸೆಪ್ಟೆಂಬರ್‌ 9ರ ಬೆಳಗಿನ ಜಾವ ಹೈಡ್ರಾಮಾ ನಡೆಯಿತು. ನಾಯ್ಡು ಅವರ ಬೆಂಬಲಿಗರು ಜೊತೆಗಿರುವಾಗ ಅವರನ್ನು ಬಂಧಿಸುವುದು ಅಷ್ಟು ಸುಲಭವಲ್ಲ ಎಂಬುದನ್ನು ಅರಿತಿದ್ದ ಪೊಲೀಸರು, ನಂಧ್ಯಾಲ ವಲಯದ ಡಿಐಜಿ ರಘುರಾಮಿ ರೆಡ್ಡಿ ಹಾಗೂ ಸಿಐಡಿ ನಿರ್ದೇಶಕರ ನೇತೃತ್ವದಲ್ಲಿ ಪೊಲೀಸರ ದೊಡ್ಡ ಪಡೆಯನ್ನೇ ರಚಿಸಲಾಗಿತ್ತು. ಬೆಳಗಿನ ಜಾವ ಪೊಲೀಸರು ಕಾರ್ಯಾಚರಣೆ ನಡೆಸಿದರು.

ನಾಯ್ಡು ಅವರನ್ನು ಸುತ್ತುವರೆದ ಟಿಡಿಪಿ ಕಾರ್ಯಕರ್ತರ ದೊಡ್ಡ ಪಡೆಯು ಪೊಲೀಸರನ್ನು ನಾಯ್ಡು ಅವರ ಹತ್ತಿರಕ್ಕೂ ಹೋಗಲು ಬಿಡಲಿಲ್ಲ. ಪೊಲೀಸರು ಸರ್ಕಾರದ ಆದೇಶದಂತೆ ತಾವು ನಾಯ್ಡು ಅವರನ್ನು ವಶಕ್ಕೆ ಪಡೆಯಬೇಕಾಗಿದೆ ಎಂಬುದನ್ನು ಮನವರಿಕೆ ಮಾಡಿದರು. ನಿಯಮಗಳ ಪ್ರಕಾರ, ವಿಐಪಿಗಳನ್ನು ಬೆಳಗಿನ ಜಾವ 5.30ರೊಳಗೆ ಬಂಧಿಸುವ ಹಾಗಿರಲಿಲ್ಲ. ಪೊಲೀಸರು ಆವರೆಗೂ ಕಾಯ್ದು, ಆನಂತರ ಅವರನ್ನು ವಶಕ್ಕೆ ಪಡೆದು ನಂಧ್ಯಾಲ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours