ಸೆಪ್ಟಂಬರ್ 30 ರಂದು ನಾಯಕನಹಟ್ಟಿ ದೊಡ್ಡಕೆರೆಗೆ ಬಾಗಿನ ಸಮರ್ಪಣೆ: ತಹಶೀಲ್ದಾರ್ ಎನ್.ರಘುಮೂರ್ತಿ

 

ಚಿತ್ರದುರ್ಗ:ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಅವರ ಒಳ ಮಠ ದಲ್ಲಿ ಪೂರ್ವಭಾವಿ ಸಭೆಯಲ್ಲಿ ಪಟ್ಟಣ ಪಂಚಾಯಿತಿಯ  ಆಡಳಿತ ಅಧಿಕಾರಿ ಎನ್.ರಘುಮೂರ್ತಿ ಮಾತನಾಡಿ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ  ಹಾಗೂ ಸಣ್ಣ ನೀರಾವರಿ ಇಲಾಖೆ  ಚಿತ್ರದುರ್ಗ ಇವರು   ಆಯೋಜಿಸಿರುವ  ಇತಿಹಾಸ ಪ್ರಸಿದ್ಧ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯವರು ಕಟ್ಟಿಸಿರುವಂತಹ ನಾಯಕನಹಟ್ಟಿ ದೊಡ್ಡಕೆರೆಗೆ ಬಾಗಿನ ಬಿಡುವಂತಹ ಕಾರ್ಯಕ್ರಮವು ದಿನಾಂಕ 30-9- 2022  ರಂದು ಮಧ್ಯಾಹ್ನ 12 ಗಂಟೆಗೆ  ಏರ್ಪಡಿಸಲಾಗಿದ.  ಕಾರ್ಯಕ್ರಮಕ್ಕೆ  ಸಾರಿಗೆ ಸಚಿವ ಬಿ. ಶ್ರೀರಾಮುಲು,  ಕೇಂದ್ರ ಸಚಿವ  ಎ.ನಾರಾಯಣಸ್ವಾಮಿ,  ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮತ್ತು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ  ಬಾಗಿನ ಕಾರ್ಯಕ್ರಮದಲ್ಲಿ  ಭಾಗವಹಿಸಲಿದ್ದಾರೆ ಎಂದು

ಬೆಳಿಗ್ಗೆ 11 ಗಂಟೆಗೆ ಸಚಿವರುಗಳು  ಜಾನಪದ ಶೈಲಿಯ ಎತ್ತಿನ ಬಂಡಿಯಲ್ಲಿ 101 ಪೂರ್ಣ ಕುಂಭ ಮೆರವಣಿಗೆ , ಲಂಬಾಣಿ ಮತ್ತು ಹಂದಿ ಜೋಗಿ ಕಲಾವಿದರೊಂದಿಗೆ ಮತ್ತು ವಿಶಿಷ್ಟ ಕಲಾ ತಂಡದೊಂದಿಗೆ ಚಿಕ್ಕ ಕೆರೆಯವರಿಗೆ ಕರೆದೊಯ್ಯಲಾಗುವುದು. ಪಟ್ಟಣ ತುಂಬಾ ಬಾಳೆ ಕಂದು ಮತ್ತು ಹಸಿರು  ತೋರಣದೊಂದಿಗೆ ಸಿಂಗರ ಮಾಡಲಾಗುತ್ತದೆ.
ದೊಡ್ಡ ಕೆರೆಯಲ್ಲಿ ವಿಶಿಷ್ಟ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ. ಕೆರೆಯ ಏರಿ ಮೇಲೆ ಸಭಾ ಕಾರ್ಯ ನಡೆಯಲಿದ್ದು 1000 ಗಣ್ಯರಿಗೆ ಹಾಸನ ವ್ಯವಸ್ಥೆ  ಮತ್ತು  ಊಟದ ವ್ಯವಸ್ಥೆ ಮಾಡಲಾಗುತ್ತದೆ. ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರ ಇತಿಹಾಸ ಪರಂಪರೆ ಮತ್ತು ವೈಭವದ ಬಗ್ಗೆ ಪ್ರವಚನ ಏರ್ಪಡಿಸಲಾಗಿದೆ. ಪೂಜಾ ಕೈಂಕರ್ಯ ಮತ್ತು ಪೂಜಾ ವಿಧಿ ವಿಧಾನಗಳಿಗೆ ತೊಂದರೆ ಆಗದಂತೆ   ಎಚ್ಚರಿಕೆ ವಹಿಸಲಾಗಿದೆ.  ಕಾರ್ಯಕ್ರಮದಲ್ಲಿ ಎಲ್ಲಾ ಸಾರ್ವಜನಿಕರು  ಭಾಗವಹಿಸಲು ಮನವಿ ಮಾಡಿದರು.
ಈ ಸಭೆಯಲ್ಲಿ  ಪಟೇಲ್ ತಿಪ್ಪೇಸ್ವಾಮಿ , ಬಿಜೆಪಿ ಮಂಡಲ ಅಧ್ಯಕ್ಷ ರಾಮರೆಡ್ಡಿ , ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷ ಮಹಾಂತೇಶ್, ಎಂ ವೈ ಟಿ ಸ್ವಾಮಿ, ಚೆನ್ನಿಗಾನಹಳ್ಳಿ ಮಲ್ಲೇಶ್, ಗೋವಿಂದ್ ರಾಜ್, ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ  ಕಾರ್ಯನಿರ್ವಣಾಧಿಕಾರಿ ಗಂಗಾಧರಪ್ಪ ಮುಂತಾದವರು ಉಪಸ್ಥಿತರಿದ್ದರು.
[t4b-ticker]

You May Also Like

More From Author

+ There are no comments

Add yours