ಹಗಲು ರಾತ್ರಿ ಲೆಕ್ಕಿಸದೇ ಜನರ ಕೆಲಸ ಮಾಡುವ ರಕ್ಷಣ ಇಲಾಖೆಗೆ ಹೆಚ್ಚಿನ ವಾಹನಗಳ ಅಗತ್ಯತೆ ಇದೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ:ಸೆ:14 ಹಗಲು ರಾತ್ರಿ ಲೆಕ್ಕಿಸದೇ ಜನರ ಕೆಲಸ ಮಾಡುವ ರಕ್ಷಣ ಇಲಾಖೆಗೆ ಹೆಚ್ಚಿನ ವಾಹನಗಳ ಅಗತ್ಯತೆಯಿದ್ದು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆವರಣದಲ್ಲಿ ಶಾಸಕರ ಅನುದಾನದಲ್ಲಿ 26 ಲಕ್ಷ ವೆಚ್ಚದಲ್ಲಿ ಖರೀದಿಸಿದ  2 ಬುಲಾರಾ ವಾಹನಗಳನ್ನು  ಶಾಸಕರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ಅವರಿಗೆ ಕೀ ನೀಡುವ ಮುಖಾಂತರ  ಹಸ್ತಾಂತರಿಸಿ ಮಾತನಾಡಿದರು.
ಚಿತ್ರದುರ್ಗ ಜಿಲ್ಲಾ ಕೇಂದ್ರವಾಗಿದ್ದು ಹೆಚ್ಚಿನ ಸಿಬ್ಬಂದಿಗಳು ಕಾರ್ಯ ನಿರ್ವಹಿದ್ದು ರಕ್ಷಣೆ ಇಲಾಖೆಗೆ  ವಾಹನಗಳ ಅಗತ್ಯತೆ  ಸಾಕಷ್ಟಿದೆ. ಹಲವು ವಾಹನಗಳು ಹಳೆಯ ವಾಹನಗಳು ಹಳೆಯದಾಗಿದ್ದು ಬಳಸಲು ಬರುತ್ತಿಲ್ಲ ಎಂದು ನನಗೆ ಎಸ್ಪಿ ಅವರು ಮನವಿ ಮಾಡಿದ್ದರು ಮತ್ತು ತುರ್ತಾಗಿ  ನಿಮ್ಮ ಅನುದಾನದಲ್ಲಿ ವಾಹನಕ್ಕೆ ಮನವಿ ಮಾಡಿದ್ದರಿಂದ ಕೂಡಲೇ ಶಾಸಕರ ಅನುದಾನದಲ್ಲಿ 26 ಲಕ್ಷ ಹಣ ನೀಡಿದ್ದು ಅದರಂತೆ  ಎರಡು ಬುಲಾರಾ ವಾಹನ ಖರೀದಿಸಲಾಗಿದೆ ಎಂದರು.
ಸಿಗ್ನಲ್ ವ್ಯವಸ್ಥೆಗೆ ಹಣದ ಕೊರತೆ ಇದೆ ಎಂದು  ಎಸ್ಪಿ ಅವರು ಖುದ್ದು ನಗರಾಭಿವೃದ್ಧಿ ಪ್ರಾಧಿಕಾರ ಸಭೆಗೆ  ಆಗಮಿಸಿ ಮನವಿ ಮಾಡಿದ್ದರು. ಆದ್ದರಿಂದ  ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ 1.50 ಕೋಟಿ ಮೀಸಲಿಡಲಾಗಿದೆ.ಯಾವ  ಹಂತದಲ್ಲಿದೆ ಎಂದು ಪರಿಶೀಲಿಸಿ ವ್ಯವಸ್ಥೆ ಮಾಡಲಾಗುವುದು ಎಂದರು.
ನಗರದಲ್ಲಿ 3-4 ರಾಜ್ಯ ಹೆದ್ದಾರಿಗಳು ಪ್ರವೇಶಿಸುವುದರಿಂದ ಅಪಘಾತ ಪ್ರಕರಣ ಹೆಚ್ಚುತ್ತಿವೆ.ನಗರದ ಜನಸಂಖ್ಯೆ ಸಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದು  ರಸ್ತೆ ಕಾಮಗಾರಿ ಮುಗಿದಿರುವ ಕಡೆಗಳಲ್ಲಿ ಟ್ರಾಫಿಕ್ ದಟ್ಟಣೆಗೆ ಕಡಿವಾಣ ಹಾಕಲು ಎಸ್ಪಿ ಅವರಿಗೆ ಸೂಚಿಸಿದರು.
ಸರ್ಕಾರದ ಹಂತದಲ್ಲಿ ಹೊಸ ವಾಹನಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು ಅನುಮೋದನೆ ಆಗಿದೆ. ಇನ್ನು 50 ವಾಹನಗಳ ಅವಶ್ಯಕತೆ ಇಲಾಖೆಗೆ  ಇರುವುದರಿಂದ ಸರ್ಕಾರದ ಗೃಹ ಸಚಿವರು ಮತ್ತು  ಸಿಎಂ ಬಳಿ ನಾನು ಸಹ ಮನವಿ ಮಾಡುತ್ತೇನೆ. ಸಾರ್ವಜನಿಕರ ಸೇವೆಗಾಗಿ ಸಮಯದ ನಿಗದಿ ಇಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಉತ್ತಮ ವಾಹನಗಳು ಇದ್ದರೆ ತಮ್ಮ ವೇಗಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ.
ರಸ್ತೆ ಅಗಲೀಕರಣ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾಪೌಂಡ್  ತೆರವು ಮಾಡಲಾಗಿದ್ದು ಅದನ್ನು ಇಲಾಖೆಯ ಮನವಿ ಮೇರೆಗೆ  ನಗರಸಭೆ ಅನುದಾನ ಬಳಸಿ ನೂತನ ಕಾಪೌಂಡ್ ನಿರ್ಮಾಣಕ್ಕೂ ಸಹ ಅನುದಾನ ಒದಗಿಸಿದ್ದು ಕಾಮಗಾರಿ  ಪ್ರಗತಿಯಲ್ಲಿದ್ದು ನನ್ನ ಕಡೆಯಿಂದ ಎಲ್ಲಾ ಸಹಕಾರವನ್ನು  ಜಿಲ್ಲಾ ಪೋಲಿಸ್ ರಕ್ಷಣೆ ಇಲಾಖೆಗೆ ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ  ಕೆ.ಪರಶುರಾಮ್, ಉಪ ಪೋಲಿಸ್ ಅಧಿಕ್ಷಕ ಎಸ್.ಜೆ.ಕುಮಾರಸ್ವಾಮಿ, ಸಿಟಿ ಡಿಎಸ್ಪಿ ಅನಿಲ್ ಕುಮಾರ್, ಡಿಎಆರ್ ಡಿವೈಎಸ್ಪಿ ತಿಪ್ಪೇಸ್ವಾಮಿ, ಸಿಪಿಐಗಳಾದ ಬಾಲಚಂದ್ರನಾಯಕ್, ಎಂ.ಟಿ.ಓ ರುದ್ರೇಶ್, ಪಿಐ  ತಿಪ್ಪೇಸ್ವಾಮಿ, ಸಿಇಎನ್ ಇನ್ಸ್ ಪೆಕ್ಟರ್ ರಮಾಕಾಂತ್ ಮತ್ತು ಎಲ್ಲಾ ಪೋಲಿಸ್ ಠಾಣೆಯ ಸಿಬ್ಬಂದಿಗಳು ಹಾಜರಿದ್ದರು‌.
[t4b-ticker]

You May Also Like

More From Author

+ There are no comments

Add yours