ಹಿರಿಯೂರಿನಲ್ಲಿ 5 ಕಾಳಜಿ ಕೇಂದ್ರ ಪ್ರಾರಂಭ: 600 ಜನರಿಗೆ ಆಶ್ರಯ

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಸೆಪ್ಟೆಂಬರ್ 07:
ಜಿಲ್ಲೆಯಲ್ಲಿ ಸೆಪ್ಟಂಬರ್ 06ರಂದು ಸುರಿದ ಮಳೆ ವಿವರದನ್ವಯ ಚಳ್ಳಕೆರೆ ತಾಲ್ಲೂಕಿನ ಡಿ.ಮರಿಕುಂಟೆಯಲ್ಲಿ 80.6 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಉಳಿದಂತೆ ಚಳ್ಳಕೆರೆಯಲ್ಲಿ 15.4 ಮಿ.ಮೀ, ಪರಶುರಾಂಪುರ 14.6 ಮಿ.ಮೀ, ನಾಯಕನಹಟ್ಟಿ 10.2 ಮಿ.ಮೀ, ತಳುಕು 12.2ಮಿ.ಮೀ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 23.6 ಮಿ.ಮೀ, ಬಬ್ಬೂರಿನಲ್ಲಿ 36.2 ಮಿ.ಮೀ, ಈಶ್ವರಗೆರೆ 46.2 ಮಿ.ಮೀ, ಇಕ್ಕನೂರಿನಲ್ಲಿ 78.2 ಮಿ.ಮೀ, ಸೂಗೂರಿನಲ್ಲಿ 9.2 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 11.6 ಮಿ.ಮೀ, ರಾಮಗಿರಿ 18 ಮಿ.ಮೀ, ಚಿಕ್ಕಜಾಜೂರು 8.6 ಮಿ.ಮೀ, ಬಿ.ದುರ್ಗ 14 ಮಿ.ಮೀ, ಹೆಚ್.ಡಿ.ಪುರ 17.2 ಮಿ.ಮೀ, ತಾಳ್ಯ 7.4 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 62.4 ಮಿ.ಮೀ, ಬಾಗೂರು 10.3 ಮಿ.ಮೀ,  ಮತ್ತೋಡು 46.6 ಮಿ.ಮೀ, ಮಾಡದಕೆರೆ 28.2 ಮಿ.ಮೀ, ಶ್ರೀರಾಂಪುರ 12 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ -1ರಲ್ಲಿ 28.2 ಮಿ.ಮೀ, ಚಿತ್ರದುರ್ಗ -2ರಲ್ಲಿ 13.4, ಹಿರೇಗುಂಟನೂರು 3.1 ಮಿ.ಮೀ, ಐನಳ್ಳಿ 23.6 ಮಿ.ಮೀ, ಭರಮಸಾಗರ 34.4 ಮಿ.ಮೀ, ಸಿರಿಗೆರೆ 22.6 ಮಿ.ಮೀ, ತುರುವನೂರು 38.4 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮೂರಿನ ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 55 ಮಿ.ಮೀ, ರಾಯಾಪುರ 48.2 ಮಿ.ಮೀ, ಬಿ.ಜಿ.ಕೆರೆ 42.4 ಮಿ.ಮೀ, ರಾಂಪುರ 12.2 ಮಿ.ಮೀ, ದೇವಸಮುದ್ರ 21.2 ಮಿ.ಮೀ ಮಳೆಯಾಗಿದೆ.
117 ಮನೆಗಳು ಭಾಗಶಃ ಹಾನಿ: ಮಂಗಳವಾರ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಒಟ್ಟು 117 ಮನೆಗಳು ಭಾಗಶಃ ಹಾನಿ, 07 ಮನೆಗಳು ತೀವ್ರ ಹಾನಿಗೆ ಒಳಗಾಗಿವೆ. ಚಿತ್ರದುರ್ಗ 31 ಮನೆಗಳು, ಹಿರಿಯೂರು 32, ಚಳ್ಳಕೆರೆ 05, ಹೊಸದುರ್ಗ 19, ಹೊಳಲ್ಕೆರೆ 24, ಮೊಳಕಾಲ್ಮೂರು 06 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ. ಒಟ್ಟು 59 ಮನೆಗಳಿಗೆ ನೀರು ನುಗ್ಗಿದ್ದು, 15 ಸಣ್ಣ ಜಾನುವಾರುಗಳಿಗೆ ಹಾನಿಯಾಗಿದೆ.
5 ಕಾಳಜಿ ಕೇಂದ್ರ ಪ್ರಾರಂಭ: ಹಿರಿಯೂರು ತಾಲ್ಲೂಕಿನಲ್ಲಿ ಒಟ್ಟು 05 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಹಿರಿಯೂರು ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ 100 ಜನ ಆಶ್ರಯ ಪಡೆದಿದ್ದಾರೆ. ಲಕ್ಷಮ್ಮ ಕಲ್ಯಾಣ ಮಂಟಪದಲ್ಲಿ 100 ಜನ, ಮಸ್ಕಲ್ ಸರ್ಕಾರಿ ಪ್ರೌಢಶಾಲೆಯಲ್ಲಿ 100 ಜನ, ಮೇಟಿಕುರ್ಕೆ ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ 200 ಜನ, ರಂಗನಾಥಪುರದ ಸರ್ಕಾರಿ ಆಸ್ಪತ್ರೆಯಲ್ಲಿ 100 ಜನ ಸೇರಿದಂತೆ ಒಟ್ಟು 600 ಜನ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

 

[t4b-ticker]

You May Also Like

More From Author

+ There are no comments

Add yours