ನಗರದ ಎಲ್ಲಾ ಕಡೆ ವಿದ್ಯುತ್ ತಂತಿಗಳನ್ನು ಪರಿಶೀಲಿಸಿ ಅವಘಡಗಳು ಆಗದಂತೆ ಕ್ರಮ ವಹಿಸಿ : ಡಿಸಿ ಕವಿತಾ ಎಸ್.ಮನ್ನಿಕೇರಿ ಸೂಚನೆ

 

 

ಚಿತ್ರದುರ್ಗ:

ಚಿತ್ರದುರ್ಗ:ನಗರದ ಸಾಧಿಕ್ ನಗರದ ವಾಸಿ  ಮಣಿಕಂಠ (10)  ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ. ನಗರಸಭೆ,ಕೆಇಬಿ, ನಿರ್ಲಕ್ಷ್ಯಿದಿಂದ  ವಿದ್ಯುತ್ ತಂತಿ ತಗುಲಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದಿದೆ.

ಈ ಬಾಲಕ ತಂದೆ ಆನಂದ್ ತಾಯಿ  ಶ್ವೇತಾ ದಂಪತಿಗಳ ಪಿತ್ರಮಾಗಿದ್ದನೆ. ವಿದ್ಯುತ್ ಕಂಬದಲ್ಲಿ ಅವೈಜ್ಞಾನಿಕ ತಂತಿ ಅಳವಡಿಕೆಯಿಂದ ಪ್ರಾಣ ಹಾನಿ ಆಗಿದೆ.

ಬೀದಿ ದ್ವೀಪ ಆನ್&ಆಫ್ ಮಾಡಲು ವಿದ್ಯುತ್ ತಂತಿ ಬಿಟ್ಟಿದ್ದ ಕೆಇಬಿ ಸಿಬ್ಬಂದಿ, ಆಟವಾಡುತ್ತ ವಿದ್ಯುತ್ ಕಂಬದ ಬಳಿ ನಿಂತಿದ್ದಾಗ ವಿದ್ಯುತ್ ತಗುಲಿ  ಮಗು ಅಸುನೀಗಿದೆ.

ಜಿಲ್ಲಾಧಿಕಾರಿ‌ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿಗಳ ಮುಂದೆ ‌ ನಗರಸಭೆ, ಕೆಇಬಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಮತ್ತು ಕರ್ತವ್ಯ ಲೋಪ, ನಿರ್ಲಕ್ಷ ತೋರಿದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಡಿಸಿಗೆ ಮನವಿ ಮಾಡಿದರು ನಂತರ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದಾಗ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ನೇರವಾಗಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ನಂತರ ಮಾಧ್ಯಮದವರ ಜೊತೆ ಮಾತನಾಡಿ ಮಣಿಕಂಠ ಎಂಬ ಬಾಲಕ ಮೃತ ಪಟ್ಟಿರಯವುದು ನೋವಿನ ಸಂಗತಿಯಾಗಿದೆ. ಆಟವಾಡುವ ಸಂದರ್ಭದಲ್ಲಿ  ಈ ಘಟ‌ನೆ ಸಂಬಂಧಿಸಿದೆ ಎಂದು ತಿಳಿದಿದೆ. ಈ ಘಟನೆಯಿಂದ ನಮಗೂ ತುಂಬಾ ನೋವಾಗಿದೆ. ಈ ಘಟನೆಯ ಸಂಪೂರ್ಣ ವರದಿ ಪಡೆದುಕೊಂಡು ತಪ್ಪಿತಸ್ಥರ ವಿರುದ್ದ ಸೂಕ್ತ ಜರುಗಿಸಲಾಗುವುದು. ಕುಟುಂಬಕ್ಕೆ ಸರ್ಕಾರದಿಂದ ವರದಿ ಪಡೆದುಕೊಂಡು ಪರಿಹಾರ ವಿಚಾರವಾಗಿ ಸಂಬಂಧಿಸಿದ ಇಲಾಖೆಯೊಂದಿಗೆ ಚರ್ಚಿಸಿ ಪರಿಹಾರ ನೀಡಲಾಗುವುದು ಎಂದರು.  ನಗರದ ಎಲ್ಲಾ ಕಡೆಗಳಲ್ಲಿ ಪರಿಶೀಲನೆ ನಡೆಸಿ ಕೆಳಭಾಗದಲ್ಲಿ ಮತ್ತು ವಾಲಿರುವ , ಜೋತು ಬಿದ್ದಿರಯವ  ವಿದ್ಯುತ್ ತಂತಿಗಳನ್ನು ಕೂಡಲೇ ಸರಿಪಡಿಸಬೇಕು. ಅಗತ್ಯ ಇದ್ದ ಕಡೆ ಪೈಪ್ ಗಳನ್ನು ಹಾಕಿ ಲೈನ್ ಎಳೆದುಕೊಂಡು ಹೋಗಿ ಇಂತಹ ಘಟನೆಗಳು ಮರು ಕಳಿಸಬಾರದು ಎಂದು ಅಧಿಕಾರಿಗಳಿಗೆ  ಖಡಕ್ ಸೂಚನೆ ನೀಡಿದರು.

 

[t4b-ticker]

You May Also Like

More From Author

+ There are no comments

Add yours