ಚಿತ್ರದುರ್ಗ | ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ

 

ಚಿತ್ರದುರ್ಗ(ಕರ್ನಾಟಕ ವಾರ್ತೆ) ಜ.06:
2023-24ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಯುವ ಜನರಿಗೆ ಅನುಷ್ಠಾನಗೊಳಿಸಲಿರುವ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಜನವರಿ 18 ಅರ್ಜಿ ಸಲ್ಲಿಸಲು ಕೊನೆಯ ದಿನ.
ಯುವ ಜನರಿಗಾಗಿ ಪೂರಕವಾದ ಉದ್ಯೋಗಗಳ ವಿಪುಲ ಅವಕಾಶವಿದ್ದು, ಅದರಂತೆ ಪರಿಶಿಷ್ಟ ಜಾತಿ ಯುವಜನರಿಗಾಗಿ ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ವಿದ್ಯಾರ್ಹತೆ ಹೊಂದಿದ 16 ರಿಂದ 30 ವರ್ಷ ವಯೋಮಿತಿಯವರಿಗೆ 2024ರ ಜನವರಿ 24 ರಿಂದ ಫೆಬ್ರವರಿ 7 ರವರೆಗೆ 15 ದಿನಗಳ ಕಾಲ ಜಿಮ್, ಫಿಟ್ನೆಸ್ ತರಬೇತಿ ಶಿಬಿರ ನಡೆಯಲಿದೆ. ಎಸ್‍ಎಸ್‍ಎಲ್‍ಸಿ ಪಾಸ್ ಅಥವಾ ಫೇಲ್ ಆದ 15 ರಿಂದ 29 ವರ್ಷ ವಯೋಮಿತಿಯವರೆಗೆ  2024ರ ಜನವರಿ 24 ರಿಂದ ಫೆಬ್ರವರಿ 7 ರವರೆಗೆ 15 ದಿನಗಳ ಕಾಲ ಬ್ಯೂಟಿಷಿಯನ್ ತರಬೇತಿ ಶಿಬಿರ ನಡೆಯಲಿದೆ. ದ್ವಿತೀಯ ಪಿಯು ವಿದ್ಯಾರ್ಹತೆ ಹೊಂದಿದ 15 ರಿಂದ 29 ವರ್ಷ ವಯೋಮಿತಿಯವರಿಗೆ 2024ರ ಜನವರಿ 27 ರಿಂದ ಫೆಬ್ರವರಿ 7 ರವರೆಗೆ 12 ದಿನಗಳ ವರರೆಗೆ ವೀಡಿಯೋಗ್ರಫಿ ತರಬೇತಿ ಶಿಬಿರ ನಡೆಯಲಿದೆ. ಪದವಿ ಹಾಗೂ ಪತ್ರಿಕೋದ್ಯಮ ಪದವಿ ಪಡೆದ 15 ರಿಂದ 29 ವರ್ಷ ವಯೋಮಿತಿಯವರೆಗೆ 2024ರ ಜನವರಿ 31 ರಿಂದ ಫೆಬ್ರವರಿ 7 ರವರೆಗೆ 8 ದಿನಗಳ ಕಾಲ ನಿರೂಪಣಾ ಮತ್ತು ವಾರ್ತಾ ವಾಚಕರ ತರಬೇತಿ ಶಿಬಿರ  ನಡೆಯಲಿದೆ.
ತರಬೇತಿ ಶಿಬಿರಗಳಿಗೆ ಅರ್ಜಿ ಸಲ್ಲಿಸಲು ಪರಿಶಿಷ್ಟ ಜಾತಿಯ ಯುವ ಜನರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿಯಿಂದ ಅರ್ಜಿ ಪಡೆದು ಜನವರಿ 18 ರೊಳಗೆ ಕಚೇರಿಗೆ ಸಲ್ಲಿಸಬೇಕು. ತರಬೇತಿ ಶಿಬಿರವನ್ನು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 08194-235635 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
========
[t4b-ticker]

You May Also Like

More From Author

+ There are no comments

Add yours