ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ: ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ಸ್ಥಳದಲ್ಲೇ ಚಿತ್ರ ಬರೆದು ಖುಷಿಪಟ್ಟ ಚಿಣ್ಣರು

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ನ.10:
ಪ್ರಾಥಮಿಕ ಶಾಲಾ ಮಕ್ಕಳು ಕೈಯಲ್ಲಿ ಕುಂಚ ಹಿಡಿದು ಪ್ರಕೃತಿ, ಸೂರ್ಯ, ಚಿಟ್ಟೆಗಳು, ಕಾಮನಬಿಲ್ಲು, ಪ್ರಾಣಿ, ಪಕ್ಷಿಗಳು, ಬೆಟ್ಟ-ಗುಡ್ಡ ಚಿತ್ರ ಹೀಗೆ “ನಮ್ಮ ಪರಿಸರ” ಎಂಬ ವಿಷಯದ ಕುರಿತು ತಮ್ಮ ಪ್ರತಿಭೆಗೆ ಅನುಗುಣವಾಗಿ ಚಿತ್ರ ಬರೆದರು.
ಚಿತ್ರದುರ್ಗ ನಗರದ ನಗರ ಕೇಂದ್ರ ಗ್ರಂಥಾಲಯ ಆವರಣದಲ್ಲಿ ಗುರುವಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಚಿತ್ರದುರ್ಗ ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯ, ಕೊಲ್ಕತ್ತಾದ ರಾಜಾ ರಾಮ್‍ಮೋಹನ್ ರಾಯ್ ಲೈಬ್ರರಿ ಫೌಂಡೇಷನ್ ಇವರ ಸಹಯೋಗದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಹಾಗೂ ರಾಜಾ ರಾಮ್‍ಮೋಹನ್ ರಾಯ್ ಅವರ 250ನೇ ಜನ್ಮ ವಾರ್ಷಿಕೋತ್ಸವ ಅಂಗವಾಗಿ ಶಾಲಾ ಮಕ್ಕಳಿಗೆ ಸ್ಥಳದಲ್ಲಿಯೇ ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳಿವು.
ಬೆಳಿಗ್ಗೆ 11ಕ್ಕೆ ಆರಂಭವಾದ ಸ್ಥಳದಲ್ಲಿಯೇ ಚಿತ್ರ ಬರೆಯೂವ ಸ್ಪರ್ಧೆಯಲ್ಲಿ ಚಿತ್ರದುರ್ಗ ನಗರ ವ್ಯಾಪ್ತಿಯ ವಿವಿಧ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. 2 ರಿಂದ 3ನೇ ತರಗತಿಯವರೆಗೆ ಒಂದು ವಿಭಾಗ, 4 ರಿಂದ 5ನೇ ತರಗತಿಯವರೆಗೆ ಒಂದು ವಿಭಾಗ ಹಾಗೂ 6 ರಿಂದ 7ನೇ ತರಗತಿಯವರೆಗೆ ಒಂದು ವಿಭಾಗ ಮಾಡಿ “ನಮ್ಮ ಪರಿಸರ” ಎಂಬ ವಿಷಯದ ಕುರಿತು 1 ಗಂಟೆ ಅವಧಿ ನಿಗಧಿಪಡಿಸಿ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿತ್ತು.
8 ರಿಂದ 10ನೇ ತರಗತಿಯವರೆಗೆ “ರಾಜಾರಾಂ ಮೋಹನ್ ರಾಯ್ ಅವರ ಜೀವನ ಚರಿತ್ರೆ” ಕುರಿತು ಪ್ರಬಂಧ ಸ್ಪರ್ಧೆ ನಡೆಯಿತು. ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೂ “ಬುದ್ಧ ಬಸವ ಹಾಗೂ ಅಂಬೇಡ್ಕರ್‍ರವರ ಸಾಮಾಜಿಕ ಚಿಂತನೆ” ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪುಸ್ತಕ ನೀಡಲಾಯಿತು.
ಈ ಸಂದಭದಲ್ಲಿ ನಗರದ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿ ಕೊಳ್ಳಿ ಬಸವರಾಜ್, ಜಿಲ್ಲಾ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ, ಸಹ ಗ್ರಂಥಪಾಲಕ ಮೋಹನ್ ದಾಸ್, ಗ್ರಂಥಾಲಯ ಸಹಾಯಕ ಗೋಪಾಲ್ ಸೇರಿದಂತೆ ನಗರ ಕೇಂದ್ರ ಗ್ರಂಥಾಲಯ ಸಿಬ್ಬಂದಿ ವರ್ಗ ಹಾಗೂ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.
ಫೋಟೋ ವಿವರ: ಚಿತ್ರದುರ್ಗ ನಗರದ ನಗರ ಕೇಂದ್ರ ಗ್ರಂಥಾಲಯ ಆವರಣದಲ್ಲಿ ಗುರುವಾರ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ನಗರದ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿ ಕೊಳ್ಳಿ ಬಸವರಾಜ್, ಜಿಲ್ಲಾ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ ಚಿತ್ರಕಲಾ ಸ್ಪರ್ಧೆ ವೀಕ್ಷಿಸಿದರು.

[t4b-ticker]

You May Also Like

More From Author

+ There are no comments

Add yours