ಮಕ್ಕಳು ನಿರಂತರ ಅಧ್ಯಯನ ಮಾಡಬೇಕು:ಸಚಿವ ಡಿ.ಸುಧಾಕರ್ ಕರೆ

 

ಚಿತ್ರದುರ್ಗ: ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಪುಸ್ತಕ ಅಭ್ಯಾಸ ಜೊತೆಗೆ ಸಾಮಾನ್ಯ ಜ್ಞಾನ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು‌.

ನಗರದ ತರಾಸು  ರಂಗಮಂದಿರದಲ್ಲಿ  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು   ಶಾಖೆ ಚಿತ್ರದುರ್ಗ ಇವರ ಆಯೋಜಿಸಿದ್ದ  ಚಿತ್ರದುರ್ಗ ಜಿಲ್ಲಾ ನೂತನ ಉಸ್ತುವಾರಿ ಸಚಿವರು ಮತ್ತು ಚಿತ್ರದುರ್ಗ ಜಿಲ್ಲೆಯ  ನೂತನ ಶಾಸಕರಿಗೆ ಸನ್ಮಾನ ಮತ್ತು 2022-23 ನೇ ಸಾಲಿನಲ್ಲಿ   ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ನೌಕರರ  ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನದಲ್ಲಿ   ಎಲ್ಲಾ ವರ್ಗದ ಮಕ್ಕಳು ಉತ್ತಮವಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಈ  ಮೊದಲು  ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಆಗಿರಲಿಲ್ಲ. ಈಗ  ಎಲ್ಲಾ ಸಮಾಜದವರಿಗೆ ಸರ್ಕಾರದ ಸೌಲಭ್ಯ ನೀಡುತ್ತಿದ್ದು  ಕಷ್ಟ ಪಟ್ಟು ಅಧ್ಯಯನ ಮಾಡಿದರೆ  ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು‌.‌‌ಮಹಾತ್ಮ ಗಾಂಧೀಜಿ ಅವರು ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು.ಗಾಂಧೀಜಿಯವರ ತತ್ವಗಳನ್ನು  ಮಕ್ಕಳು ವಿದ್ಯಾರ್ಥಿ  ಜೀವನದಲ್ಲಿ  ಆಳವಡಿಕೊಳ್ಳಬೇಕು.ಮಕ್ಕಳು ಪುಸ್ತಕದ ಅಧ್ಯಯನ ಜೊತೆಗೆ  ನಿತ್ಯ ದಿನ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕದ ಜೊತೆ ಸಾಮಾನ್ಯ ಜ್ಞಾನ ಸಹ ಅಗತ್ಯವಾಗಿ ಬೇಕಿದೆ‌.ದೇಶದಲ್ಲಿ ನಿತ್ಯದ  ಬದಲಾವಣೆಯ  ವಿಷಯಗಳನ್ನು  ತಿಳಿದುಕೊಳ್ಳಬೇಕು‌. ಸಿಎಂ ಸಿದ್ದರಾಮಯ್ಯ ಅವರು  ಅಧಿಕಾರ ವಹಿಸಿಕೊಂಡ ನಂತರ ಐದು ಗ್ಯಾರೆಂಟಿಗಳನ್ನು  ಜಾರಿಗೊಳಿಸಿ ನುಡಿದಂತೆ ನಡೆದಿದ್ದಾರೆ. ಅಭಿವೃದ್ಧಿ  ಹಣ ಕಡಿಮೆ ಬಂದರು ಸಹ ಮುಂದಿನ ದಿನದಲ್ಲಿ ಅತ್ಯಂತ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡಲಾಗುತ್ತದೆ.  ಸರ್ಕಾರಿ ನೌಕರರು ಸರ್ಕಾರಕ್ಕೆ ಸಹಕಾರ ನೀಡಬೇಕು ಮತ್ತು ನೌಕರರ ಪರವಾಗಿ ಸರ್ಕಾರ ಸದಾ ಇರುತ್ತದೆ ಎಂದು ಭರವಸೆ ನೀಡಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ  ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿಗಳಿಂದ ಸರ್ಕಾರಿ ನೌಕರರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಸಂಘದ  ರಾಜ್ಯಧ್ಯಕ್ಷ ಷಡಾಕ್ಷರಿ ಸ್ಮರಿಸಿರುವುದು ಸಂತಸ ವಿಚಾರವಾಗಿದೆ.ಸಮಾಜದಲ್ಲಿ ಬದಲಾವಣೆ ಆಗಲು  ಸರ್ಕಾರಿ ನೌಕರರು ತಮ್ಮ ಇಲಾಖೆಯಲ್ಲಿ ಇಚ್ಚಾಶಕ್ತಿ ಮೂಲಕ  ಕೆಲಸ ಮಾಡಬೇಕು. ಸರ್ಕಾರಿ ನೌಕರರಿಗೆ ರಾಜಕಾರಣ ಅವಶ್ಯಕತೆ ಇಲ್ಲ. ಸರ್ಕಾರದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದರಿಂದ ಅವರಿಗೆ ಸಮಾಜದಲ್ಲಿ ಉತ್ತಮ ಹೆಸರು ಗಳಿಸಬಹುದು. ಶಾಸಕಾಂಗ ಮತ್ತು ಕಾರ್ಯಾಂಗ ಸಮಾಜದ   ಎರಡು ಚಕ್ರಗಳಿದ್ದಂತೆ ಎರಡರಲ್ಲಿ ಒಂದು ಏರುಪೇರು ಆದರಯ ಬಂಡಿ ನಿಲ್ಲುತ್ತದೆ.ಹಾಗಾಗಿ ನೌಕರರು ಉತ್ತಮ ಕೆಲಸಕ್ಕೆ ಒತ್ತು ನೀಡಿದರೇ ಎರಡು ಅಂಗಗಳು ಉತ್ತಮವಾಗಿರುತ್ತದೆ. ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಸರ್ಕಾರಿ ನೌಕರರಿಗೆ  ನೀಡಿದ  ಭರವಸೆಗಳನ್ನು ಜಾರಿಗೊಳಿಸಲು ನಮ್ಮ ಮುಖ್ಯಮಂತ್ರಿಗಳು ಬದ್ದವಾಗಿದ್ದಾರೆ‌. ನಮ್ಮ ಸರ್ಕಾದ ಮೊದಲಿನಿಂದಲೂ ಸರ್ಕಾರಿ ನೌಕರರ ಪರವಾಗಿದೆ. ಇದರ ಜೊತೆಗೆ ಉತ್ತಮ ಅಭ್ಯಾಸ ಮೂಲಕ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುತ್ತಿರುವುದು ಸಂತಸ ತಂದಿದೆ. ಮಕ್ಕಳ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಮಾಡುತ್ತಾರೆ. ಮಕ್ಕಳು ನಿರಂತರ ಪರಿಶ್ರಮದಿಂದ ಇಂದು ಸನ್ಮಾನ ಸ್ವೀಕರಿಸುತ್ತಿದ್ದಾರೆ. ಮಕ್ಕಳು ಕಲಿಕೆಯ ಜೊತೆ ಸ್ಪರ್ಧಾತ್ಮಕ ಅಧ್ಯಯನಕ್ಕೆ ಸಿದ್ದವಾದರೆ  ಜೀವನದಲ್ಲಿ ಉತ್ತಮ ಅವಕಾಶಗಳು ಹುಡುಕಿಕೊಂಡು ಬರುತ್ತದೆ. ನೌಕರರ ಸಮಸ್ಯೆಗಳ ಜೊತೆ ಷಡಾಕ್ಷರಿ ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದಾರೆ.ಜಿಲ್ಲಾ ಮತ್ತು ತಾಲೂಜ ನೌಕರರು ಸಮಸ್ಯೆಗಳಿಗೆ ನಾವು ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷಾರಿ ಮಾತನಾಡಿ ಚಿತ್ರದುರ್ಗ ಜಿಲ್ಲೆ ಅನೇಕ ಹೋರಟಗಳಿಗೆ ಶಕ್ತಿ ನೀಡಿದ ಜಿಲ್ಲೆಯಾಗಿದೆ. ಇಂತಹ ಜಿಲ್ಲೆಯಲ್ಲಿ ನಾವೆಲ್ಲ ಇರುವುದು ನಮ್ಮೆಲ್ಲರ ಭಾಗ್ಯವಾಗಿದೆ. ಸರ್ಕಾರಿ ನೌಕರರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಶಾಸಕಾಂಗ ಅಗತ್ಯವಾಗಿ ಬೇಕಾಗಿದೆ. ಸರ್ಕಾರಿ ನೌಕರರು ಸರ್ಕಾರದ ಎಲ್ಲಾ ಸೌಲಭ್ಯ ಒದಗಿಸಲು ನಾವು ಶ್ರಮಿಸಬೇಕಿದೆ. ಸಚಿವರ ಸುಧಾಕರ್ ಅವರು ಸರಳ ಸಜ್ಜನಿಕೆ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಚಳ್ಳಕೆರೆ ಶಾಸಕರಾದ ಟಿ.ರಘುಮೂರ್ತಿ ಅವರು ನೌಕರ ಸ್ನೇಹಿ ಆಡಳಿತ ಮಾಡುತ್ತಿರುವುದು ನೌಕರರ ಸಮಸ್ಯೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.  ಸರ್ಕಾರದ ಐದು ಗ್ಯಾರೆಂಟಿಗಳನ್ನು ಜಾರಿಗೊಳಿಸಲು ಸರ್ಕಾರ ನೌಕರರ ಪಾತ್ರ ದೊಡ್ಡದಿದೆ. ಗ್ಯಾರೆಂಟಿಗಳಿಂದ ಸರ್ಕಾರಿ ನೌಕರರಿಗೆ ಸಹ ಅನುಕೂಲವಾಗಿದೆ.ಸರ್ಕಾರಿ ಮಹಿಳಾ ಶಿಕ್ಷಕರಿಗೆ ಶಕ್ತಿ ಯೋಜನೆ ಮತ್ತು ಗೃಹ ಜ್ಯೋತಿ ಅನುಕೂಲವಾಗಿದೆ.   ಸರ್ಕಾರಿ ನೌಕರರ ಸಂಘದಿಂದ ಸರ್ಕಾರಿ ನೌಕರರ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಅತಿ ಹೆಚ್ಚು ಅಂಕ ಪಡೆದ  250  ಮಕ್ಕಳಿಗೆ ಪುತಿಭಾ ಪುರಸ್ಕಾರ ಮಾಡಲಾಗುತ್ತಿದೆ.6 ನೇ  ವೇತನ ಅನುಷ್ಟಾನ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು ಆ ಸಂದರ್ಭದಲ್ಲಿ ಸಹ ಸರ್ಕಾರಿ ನೌಕರರು ವೇತನ ಹೆಚ್ಚಳ ಮಾಡಿದ್ದು ಸಹ ಸಂತಸ ತಂದಿದೆ. ಇದರ ಜೊತೆ ಈಗ  7 ನೇ ವೇತನ ಜಾರಿಗಿಳಿಸುವ   ಅವಕಾಶ ಕಾಂಗ್ರೆಸ್ ಸರ್ಕಾರದ ಮುಂದೆ ಇದೆ ಎಂದರು‌. ನೌಕರರ ಬಹುದಿನದ  ಎನ್.ಪಿಎಸ್ ಯೋಜನೆಯನ್ನು  ಓಪಿಎಸ್ ಮಾಡಲು ಸರ್ಕಾರದ ಗಮನಕ್ಕೆ ತರಬೇಕು ತಾವು ಸಹಕಾರ ಬಯಸುತ್ತೇನೆ. ಸಿಎಂ ಸಿದ್ದರಾಮಯ್ಯ ಅವರು ಸಹ ಓಪಿಎಸ್ ಮಾಡುವ ಭರವಸೆ ನೀಡಿರುವುದು ಸಂತಸ ತಂದಿದೆ ಎಂದರು.
ಈ‌   ಕಾರ್ಯಕ್ರಮದಲ್ಲಿ  ಅಪರ ಜಿಲ್ಲಾಧಿಕಾರಿ ಬಿ‌.ಟಿ.ಕುಮಾರಸ್ವಾಮಿ, ಉಪ ವಿಭಾಗಧಿಕಾರಿ, ರಾಜ್ಯ ಸರ್ಕಾರಿ  ಉಪಾಧ್ಯಕ್ಷ ಎಂ.ಸಿ.ರುದ್ರಪ್ಪ, ರಾಜ್ಯಶಾಖೆಯ  ಮಲ್ಲಿಕಾರ್ಜುನ್ ಬಳ್ಳಾರಿ,  ಹಿರಿಯ ಉಪಾಧ್ಯಕ್ಷ ಬಸವರಾಜ್, ರಾಜ್ಯ ಕಾರ್ಯದರ್ಶಿ ಸದಾನಂದ , ಪಧಾಧಿಕಾರಿಗಳಾದ  ನಲ್ಕುಣಿ,  ವೇಣುಗೋಪಲ್, ಅಧಿಕ್ಷಕರಾದ ಜಗದೀಶ್,  ಚಿತ್ರದುರ್ಗ ಡಿಡಿಪಿಐ ರವಿಶಂಕರ್ ರೆಡ್ಡಿ,ಪಿಯು ಉಪ ನಿರ್ದೇಶಕ ರಾಜು,  ಕ್ಷೇತ್ರ ಶಿಕ್ಷಣಧಿಕಾರಿಗಳಾದ ನಾಗಭೂಷಣ್, ಸುರೇಶ್,  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಪೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಇದ್ದರು.ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ   ಕೆ.ಟಿ.  ತಿಮ್ಮಾರೆಡ್ಡಿ  ಸ್ವಾಗತಿಸಿದರು..
[t4b-ticker]

You May Also Like

More From Author

+ There are no comments

Add yours