ಅದ್ದೂರಿಯಾಗಿ ನಡೆದ ಹಿಂದೂಮಹಾ ಗಣಪತಿ ಶೋಭಾಯಾತ್ರೆ.

 

 

ಚಳ್ಳಕೆರೆ-15 ನಗರದಲ್ಲಿ ವಿಶ್ವಹಿಂದೂಪರಿಷತ್ ಮತ್ತು ಭಜರಂಗದಳ ಪ್ರತಿಷ್ಟಾಪನೆ ಮಾಡಿದ್ದ ಹಿಂದೂ ಮಹಾಗಣಪತಿಯ ಶೋಭಾಯಾತ್ರೆ ಗುರುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಮೆರವಣಿಗೆ ನಡೆಯಿತು.
ನಗರದ ಬಿಇಒ ಕಚೇರಿಯಿಂದ ಪ್ರಾರಂಭವಾದ ಶೋಭಾಯಾತ್ರೆ ನಗರದ ಅಂಬೇಡ್ಕರ್, ವಾಲ್ಮೀಕಿ, ನೆಹರೂ, ಬಸವೇಶ್ವರ ವೃತ್ತದ ಮೂಲಕ ನೂರಾರು ಕಾರ್ಯಕರ್ತರು, ಮಹಿಳೆಯರು, ಮಕ್ಕಳು ಡಿಜೆಗೆ ಹೆಜ್ಜೆ ಹಾಕಿದರು. ಮೂರು ಡಿಜೆಗಳು ನಗರದ ಯುವಕನ್ನು ಹುಚ್ಚೆಬಿಸಿ ಕುಣಿಸಿದವು. ಮಹಿಳೆಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕುಣಿದುಕುಪ್ಪಳಿಸಿದರು.
ಶೋಭಾಯಾತ್ರೆ ನಡೆದ ನಗರದ ಪ್ರಮುಖ‌ ಬೀದಿಗಳಲ್ಲಿ ಜನರು ಕಿಕ್ಕೀರುದು ನಿಂತು ನೋಡಿದರು. ಮಹಿಳೆಯರು ವಿವಿಧ ಕಲಾ ನೃತ್ಯಗಳನ್ನು ಪ್ರದರ್ಶಿಸಿದರು. ಯಾತ್ರೆಯಲ್ಲಿ ಭಾಗವಹಿಸಿದ್ದ ನಾಯಕರನ್ನು ಯುವಕರು ಹೆಗಲ ಮೇಲೆ ಎತ್ತಿ ಕುಣಿಸಿದರು. ಯುವಕರ ಜೊತೆಯಲ್ಲಿ ಮುಖಂಡರು ಹೆಜ್ಜೆ ಹಾಕಿ ಮತ್ತಷ್ಟು ಉತ್ಸಾಹ ಹೆಚ್ಚಿಸಿದರು. ಬೆಳ್ಳಗೆ ಸುಮಾರು 11ಗಂಟೆಗೆ ಪ್ರಾರಂಭವಾಯಿತು.
ಮೆರವಣಿಗೆ ನಡೆದ ಪ್ರಮುಖ‌ ಬೀದಿಗಳಲ್ಲಿ ಕೇಸರಿಯ ಬಂಟಿಂಗ್, ಬ್ಯಾನರ್ ಗಳು ರಾರಾಜಿಸಿದರೆ, ಮಹಿಳೆಯರು, ಯುವಕರು, ಮುಖಂಡರು ಕೇಸರಿ ಶಾಲು, ಪೇಟ ಧರಿಸಿ ಗಮನ ಸೆಳೆದರು. ನಗರದ ನೂರಾರು ಭಕ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.
ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿಪೊಲೀಸ್ ಬಂದೋಬಸ್ತ್ ಸಹ ಆಯೋಜಿಸಲಾಗಿತ್ತು. ನಗರದ ಪ್ರಮುಖ‌ ಬೀದಿಗಳಲ್ಲಿ ಮೆರವಣಿ ನಡೆಯುವ ಉದ್ದಕ್ಕೂ ಪೊಲೀಸ್ ಬಿಗಿ ಪಹರೆ ಏರ್ಪಡಿಸಿದ್ದರು. ನಗರವೂ ಸೇರಿದಂತೆ ವಿವಿಧ ಕಡೆಯಿಂದ ಪೊಲೀಸ್ ನಿಯೋಜಿಸಲಾಗಿತ್ತು.
ಜಿಲ್ಲಾ ರಕ್ಷಣಾಧಿಕಾರಿ ಭೇಟಿ :- ನಗರದಲ್ಲಿ ಗುರುವಾರ ನಡೆದ ಶೋಭಾಯಾತ್ರೆ ಮೆರವಣಿಗೆ ನಡೆಯುವ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಕೆ.ಪರಶುರಾಮ್, ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ, ಡಿವೈಎಸ್ಪಿ ರಮೇಶ್ ಕುಮಾರ್, ಸಿಪಿಐಗಳಾದ ಉಮೇಶ್, ಸತೀಶ್, ಸಮೀವುಲ್ಲಾ ಮೊದಲಾದವರು ವಹಿಸಿ ಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours