ಆ.29 ರಿಂದ 31 ರವರೆಗೆ ಗೌರಸಮುದ್ರ ಶ್ರೀ ಮಾರಮ್ಮ ದೇವಿ ಜಾತ್ರಾಮಹೋತ್ಸವ

 

ಆ.29 ರಿಂದ 31 ರವರೆಗೆ ಗೌರಸಮುದ್ರ ಶ್ರೀ ಮಾರಮ್ಮ ದೇವಿ ಜಾತ್ರಾಮಹೋತ್ಸವ
*********
ಚಿತ್ರದುರ್ಗ ಕರ್ನಾಟಕ ವಾರ್ತೆ ಆಗಸ್ಟ್ 26:
ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ಗೌರಸಮುದ್ರ ಗ್ರಾಮದಲ್ಲಿ ನೆಲೆಸಿರುವ ಶ್ರೀ ಮಾರಮ್ಮ ದೇವಿ ಜಾತ್ರಾಮಹೋತ್ಸವವು ಇದೇ ಆಗಸ್ಟ್ 29 ರಿಂದ 31 ರವರೆಗೆ ನಡೆಯಲಿದೆ.
ಆಗಸ್ಟ್ 28 ರಂದು ಹುತ್ತಕ್ಕೆ ಅಭಿಷೇಕ, ಆಗಸ್ಟ್ 29 ರಂದು ಮೂಲಸನ್ನಿಧಿಗೆ ಅಭಿಷೇಕ, ಆಗಸ್ಟ್ 30 ರಂದು ಮಾರಮ್ಮ ದೇವಿ ತುಂಬಲಿಗೆ ಆಗಮಿಸಿ, ಗೌರಸಮುದ್ರಕ್ಕೆ ವಾಪಾಸ್ಸಾಗುವುದು. ನಂತರ ದೇವಿಯ ಮೆರವಣಿಗೆ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು.
ಸೆಪ್ಟೆಂಬರ್ 01 ರಂದು ಓಕಳಿ ನಂತರ ರಾತ್ರಿ 8 ಗಂಟೆಗೆ ಶ್ರೀಮಾರಮ್ಮ ದೇವಿಯ ಮೆರವಣಿಗೆ, ಸೆ.02ರಂದು ಬೆಳಿಗ್ಗೆ 8.30 ರಿಂದ ಮಾರಮ್ಮದೇವಿಗೆ ಮಹಾಮಂಗಳಾರತಿ ನಂತರ ದೇವಿಯ ಗರ್ಭಗುಡಿ ಪ್ರವೇಶ ಮಾಡಲಾಗುವುದು.
ಭಕ್ತಾಧಿಗಳಿಗೆ ಸೂಚನೆ: ಹರಕೆ ಮಾಡಿಕೊಂಡ ಭಕ್ತಾದಿಗಳು ತುಂಬಲಿಗೆ ಹಾಗೂ ಗೌರಸಮುದ್ರದ ಮೂಲದೇವಸ್ಥಾನದಲ್ಲಿ ಎರಡು ಕಡೆ ಶ್ರೀದೇವಿಗೆ ಹಾಕುವ ಬೆಳ್ಳಿ, ಬಂಗಾರದ ಒಡವೆ, ಸೀರೆ ಇತ್ಯಾದಿ ವಸ್ತ್ರಾಭರಣಗಳನ್ನು ವಿಶೇಷವಾಗಿ ವ್ಯವಸ್ಥೆ ಮಾಡಿರುವ ಹುಂಡಿಯಲ್ಲಿ ಕಾಣಿಕೆಯನ್ನು ಹಾಕಬೇಕು. ಈರುಳ್ಳಿಯನ್ನು ದೇವಿಗೆ ಜೋರಾಗಿ ಎಸೆಯುವುದರಿಂದ ದೇವಿಯ ಒಡವೆಗಳು ಕೆಳಗೆ ಬೀಳುತ್ತವೆ. ಜನರಿಗೆ ಕಣ್ಣು, ಮುಖಕ್ಕೆ ಪೆಟ್ಟು ಬಿದ್ದು ತೊಂದರೆಯಾಗುತ್ತದೆ. ಆದ್ದರಿಂದ ಭಕ್ತಾದಿಗಳು ಈರುಳ್ಳಿಯನ್ನು ದೇವರ ಸನ್ನಿಧಿಗೆ ಅರ್ಪಿಸಬೇಕು. ಗೌರಸಮುದ್ರ ಗ್ರಾಮ ಪಂಚಾಯಿತಿಯಿಂದ ನೀರಿನ ಸೌಕಾರ್ಯ, ಸ್ಥಳಗಳ ಸೌಕರ್ಯ ಹಾಗೂ ಇತರೆ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿರುವುದರಿಂದ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಹರಕೆ ಮಾಡಿಕೊಂಡ ಭಕ್ತಾದಿಗಳು  ಒಡವೆ ಬದಲಿಗೆ ಹಣವನ್ನು ಹುಂಡಿಗೆ ಹಾಕಬೇಕು.  ಭಕ್ತಾದಿಗಳು ಜಾತ್ರೆಗೆ ಬಂದ ಸಮಯದಲ್ಲಿ ಮಕ್ಕಳನ್ನು ಜಾಗೃತವಾಗಿ ನೋಡಿಕೊಳ್ಳಬೇಕು.
ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಜಾತ್ರೆಯಲ್ಲಿ ಪ್ರಾಣಿಬಲಿ ನಿಷೇಧಿಸಿದೆ. ಅಂತೆಯೇ ಜಾತ್ರೆಯಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವುದು. ಸೆಪ್ಟೆಂಬರ್ 27 ರಂದು ಮರಿಪರಿಷೆ (ತಿಂಗಳ ಜಾತ್ರೆ) ನಡೆಯಲಿದೆ ಎಂದು ಚಳ್ಳಕೆರೆ ತಹಶೀಲ್ದಾರ್ ಎನ್ ರಘುಮೂರ್ತಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours