ದೂರದೃಷ್ಟಿಯಿಂದ ಪ್ರವಾಹ ಪುನರ್ವಸತಿಗಾಗಿ 10 ಎಕರೆ ಜಮೀನು ಮೀಸಲು:ಶಾಸಕ ಟಿ.ರಘುಮೂರ್ತಿ

 

ಚಳ್ಳಕೆರೆ:ತಾಲೂಕಿನ ಪರಶುರಾಂಪುರ ಹೋಬಳಿಯಲ್ಲಿ ತಾಲೂಕು ಆಡಳಿತದಿಂದ  ಹಾಲಗೊಂಡನಹಳ್ಳಿ ಮತ್ತು ಸೂರನಹಳ್ಳಿಯಲ್ಲಿ ನಿರಾಶ್ರಿತರ ಕೇಂದ್ರ ಪ್ರಾರಂಭಿಸಲಾಗಿದ್ದು  ಪ್ರವಾಹ ಪೀಡಿತ ನಿರಾಶ್ರಿತರ ಕೇಂದ್ರಗಳಲ್ಲಿ ನಿರಾಶ್ರಿತರಿಗೆ ಸ್ವಲ್ಪ   ರಿಲೀಫ್ ನೀಡುವ ದೃಷ್ಟಿಯಿಂದ   ಶಿವ ಭಜನೆಯನ್ನು ನಿರಾಶ್ರಿತ ಕೇಂದ್ರದಲ್ಲಿದ್ದ ಜನರು ಮಾಡಿದರು.  ಇದಕ್ಕೆ ಶಾಸಕ ಟಿ. ರಘುಮೂರ್ತಿ ಮತ್ತು ತಹಶೀಲ್ದಾರ್ ಎನ್.ರಘುಮೂರ್ತಿ ಸಾಥ್ ನೀಡಿದರು.

ತಾಲೂಕು ಆಡಳಿತದಿಂದ ನಿರಾಶ್ರಿತರ  ಆರೈಕೆ ಕೇಂದ್ರಗಳಿಗನ್ನು ಶಾಸಕರು ಪರಿಶೀಲಿಸಿದರು. ಈತನ ಸಂದರ್ಭದಲ್ಲಿ  ಮಾತನಾಡಿದ ಶಾಸಕ ಟಿ.ರಘುಮೂರ್ತಿ ಅವರು  ಆಲುಗೊಂಡನಹಳ್ಳಿ ಗ್ರಾಮದಲ್ಲಿ 21 ಕುಟುಂಬಗಳ 75 ಜನ ಮತ್ತು ಸೂರನಹಳ್ಳಿ ಗ್ರಾಮದಲ್ಲಿ 12 ಕುಟುಂಬಗಳ 50 ಜನರ ಆರೈಕೆ ಕೇಂದ್ರದಲ್ಲಿ ಈ ಜನರಿಗೆ ಬೇಕಾಗುವಂತ ದೈನಂದಿನ ಆಹಾರ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗಿದೆ. ನಮ್ಮ ಜೊತೆ  ತಹಶೀಲ್ದಾರ್ ಎಲ್ಲಾ ಕಡೆ ಭೇಟಿ ನೀಡಿ ವರದಿ ಪಡೆದಿದ್ದಾರೆ.  ಹವಾಮಾನ ವೈಪರಿತ್ಯದಿಂದ ಒಂದು ಆರೈಕೆ ಕೇಂದ್ರದಲ್ಲಿರುವ ಈ ಬಂಧುಗಳನ್ನು ಈ ರೀತಿ ನೋಡುವುದು ನನಗೆ ತುಂಬಾ ಮನಸ್ಸಿಗೆ ನೋವುಂಟು ಮಾಡಿದೆ. ಒಂದು ಕಡೆ ಈ ನೋವಾದರೆ ಇನ್ನೊಂದು ಕಡೆ ಒಂದು ಶತಮಾನದಿಂದಲೂ ಈ ಒಂದು ನದಿ ಪಾತ್ರ ಈ ರೀತಿ ತುಂಬಿರುವುದನ್ನು ನಾವ್ಯಾರು ಕೂಡ ನೋಡಿಲ್ಲ ‌.  ಮುಂದಿನ ದಿನಗಳಲ್ಲಿ ರೈತನ ಬದುಕು ಸಮೃದ್ಧಿಯಾಗಲಿದೆ ಎಂಬ  ಖುಷಿ ನನಗಿದೆ. ಎರಡನ್ನು  ಕೂಡ ಸಂತ್ರಸ್ತರು ಮನಗಾಣಬೇಕು.  ಮುಂದಿನ ದಿನಗಳಲ್ಲಿ ಈ ರೀತಿ ಪ್ರವಾಹ ಸಂಭವಿಸಿದಲ್ಲಿ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಬೇಕು ಎನ್ನುವ ದೃಷ್ಟಿಯಲ್ಲಿ ಪುನರ್ವಸತಿಗೆ 10 ಎಕರೆ ಜಮೀನನ್ನು ಮೀಸಲಿಸಲಾಗಿದೆ. ಇಲ್ಲಿಯ ಸಂತ್ರಸ್ತರನ್ನು ಆದ್ಯತೆ ಮತ್ತು ಅರ್ಹತೆಗೆ ಅನುಗುಣವಾಗಿ ಸ್ಥಳಾಂತರಿಸಲಾಗುವುದು. ಹಾಗೂ ತಾಲೂಕ್ ಆಡಳಿತದಿಂದ ಯಾವುದೇ ಸಂತ್ರಸ್ತರಿಗೆ ಅನಾನುಕೂಲವಾಗದ ರೀತಿಯಲ್ಲಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದೆಂದು ಹೇಳಿದರು.

ತಹಶೀಲ್ದಾರ್  ಎನ್ ರಘುಮೂರ್ತಿ ಮಾತನಾಡಿ  ಶಾಸಕರು ಮತ್ತು ಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳ ದೂರ ದೃಷ್ಟಿಯಿಂದ ಇಷ್ಟೆಲ್ಲಾ ಪ್ರವಾಹ ಸಂಭವಿಸಿದರು  ಕೂಡ ಯಾವುದೇ ವ್ಯಕ್ತಿಯ  ತೊಂದಯಾಗದಂತೆ ತಾಲೂಕ ಆಡಳಿತ ಮತ್ತು ಶಾಸಕರು  ಸಂತ್ರಸ್ತರ ಬೆನ್ನಿಗೆ ನಿಂತಿದ್ದಾರೆ. ಈ ಪ್ರವಾಹದಿಂದ ಈ ಭಾಗದ ಯಾವುದೇ ಜನರ ಆತಂಕ ಪಡುವ ಅವಶ್ಯಕತೆ ಇಲ್ಲ. ಪ್ರವಾಹ ಕಡಿಮೆ ಆಗುವ ತನಕ  ವೃದ್ಧರು ಮಕ್ಕಳು ನದಿಗೆ ಇಳಿಯಕೂಡದು ಮತ್ತು ಯುವಕರು ಕೂಡ ಈಜು ಮತ್ತಿತರ ಕೃತ್ಯಗಳಿಗೆ ಮುಂದಾಗಬಾರದೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಿಡ್ಲ್ಯೂಡಿ ಇಲಾಲೆಯ  ವಿಜಯ ಭಾಸ್ಕರ್, ತಾ.ಪಂ.ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ , ಪಿಡಿಒ ಗುಂಡಪ್ಪ ಮುಖಂಡರುಗಳಾದ ಸೂರನಹಳ್ಳಿ ಶ್ರೀನಿವಾಸ್  , ಗುಜ್ಜಾರಪ್ಪ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ತಿಪ್ಪೇಸ್ವಾಮಿ, ಚವಳು ಪ್ರಕಾಶ್ ಚನ್ನಮ್ಮನ ನಾಗತಿ ಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಆನಂದ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours