ಸರ್ಕಾರ 7.5 ಮೀಸಲಾತಿ ಘೋಷಣೆ‌ ಮಾಡದ್ದಿದ್ದರೆ ವಾಲ್ಮೀಕಿ ಜಯಂತಿ ಬಹಿಷ್ಕಾರ: ಶಾಸಕ ಟಿ.ರಘುಮೂರ್ತಿ

 

 

 

 

ಚಿತ್ರದುರ್ಗ: ನಿವೃತ್ತ ನ್ಯಾಯಮೂರ್ತಿ ಎಚ್.ಎನ್‌. ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಯಥಾವತ್ತಾಗಿ ಅಕ್ಟೋಬರ್ 9 ತಾರೀಖಿನ ಒಳಗೆ ಜಾರಿಗೊಳಿಸಿ ಮೀಸಲಾತಿ ಪ್ರಮಾಣ ಹೆಚ್ಚಿಸದಿದ್ದರೆ ವಾಲ್ಮೀಕಿ ಜಯಂತಿಯನ್ನು ಬಹಿಷ್ಕಾರಿಸಿ ಸ್ವಾಮೀಜಿ ಆದೇಶದಂತೆ ಬೆಂಗಳೂರು ಚಲೋ ದಲ್ಲಿ ಸಮಾಜದವರು ಭಾಗವಹಿಸಲಿದ್ದೇವೆ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿ ಹರಿಹರದ ವಾಲ್ಮೀಕಿ ಗುರುಪೀಠದ ನಮ್ಮ ಪ್ರಸನ್ನಾನಂದ ಸ್ವಾಮೀಜಿ ಅವರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 230 ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು ಸರ್ಕಾರ ಮಾತ್ರ ಹುಸಿ ಭರವಸೆಗಳನ್ನು ನೀಡುವ ಮುಖಾಂತರ ನಾಯಕ ಜನಾಂಗಕ್ಕೆ ಅನ್ಯಾಯ ಮಾಡುತ್ತಿದೆ. ನಮ್ಮ ಹೋರಟ ನ್ಯಾಯಯುತವಾಗಿದ್ದು, ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳವಲ್ಲಿ ಮೀನಮೇಷ ಎಣಿಸುತ್ತಿರುವುದು ನೋವಿನ ಸಂಗತಿಯಾಗಿದೆ. ರಾಜ್ಯ ಸರ್ಕಾರಕ್ಕೆ ಎಲ್ಲಾ ಪಕ್ಷದ ಬೆಂಬಲ ಸಹ ಇದೆ ಎಂದರು.

ಸಿ.ಎಂ.ಬಸವರಾಜ್ ಬೊಮ್ಮಾಯಿ ಅವರಿಗೆ ಮೀಸಲಾತಿ ವಿಷಯ ವಿಧಾನಸಭೆ ಮತ್ತು ವಿಧಾನಪರಿಷತ್ ಕಲಾಪಗಳಲ್ಲಿಯೂ ಚರ್ಚೆಗೆ ಬಂದಿರುತ್ತದೆ. ಆದರೆ, ಈವರೆಗೂ ಸಂವಿಧಾನಾತ್ಮಕವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಸಂಬಂಧ ಆದೇಶ ಹೊರಡಿಸಿರುವುದಿಲ್ಲ. ಶೀಘ್ರವೇ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಶಿಫಾರಸಿನಂತೆ ಪರಿಶಿಷ್ಟ ಜಾತಿಯವರಿಗೆ ಶೇ 15ರಿಂದ ಶೇ 17ಕ್ಕೆ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ 3ರಿಂದ ಶೇ 7ಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು.

 

 

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ವಾಲ್ಮೀಕಿ ಸಮಾಜದ ಹೋರಟ ನ್ಯಾಯಸಮ್ಮತವಾಗಿದೆ ಅವರಿಗೆ ಮೊದಲು ಮೀಸಲಾತಿ ನೀಡಿ ವಾಲ್ಮೀಕಿ ಸಮಾಜದ ಸ್ವಾಮೀಜಿ ಫ್ರೀಡಂ ಪಾರ್ಕ್ ನಲ್ಲಿ ಕುಳಿತು ಅಹೋರಾತ್ರಿ ಧರಣಿ ಮಾಡುತ್ತಿದ್ದು ಕೂಡಲೇ ಮೀಸಲಾತಿ ನೀಡಿ ಎಂದು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಬೆಂಬಲ ಸೂಚಿಸಿದ್ದಾರೆ.

ವಿಧಾನಸಭೆ 224 ಜನ ಶಾಸಕರು , ವಿಧಾನ ಪರಿಷತ್ ಸದಸ್ಯರು, ಸಂಸದರು, ಸಂಘ ಸಂಸ್ಥೆಗಳು, ಮಠಾಧೀಶರು ಸಹ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಬೆಂಬಲ ನೀಡಿದ್ದಾರೆ.

ನಾಗಮೋಹನ್ ದಾಸ್ ವರದಿ ನೀಡಿ ಎರಡೂವರೆ ವರ್ಷವಾಗಿದೆ. ಸರ್ಕಾರ ಮಾತ್ರ ಸಬೂಬು ಹೇಳುತ್ತಾ ಕಾಲಹರಣ ಮಾಡುತ್ತಿದ್ದು ಹೀಗೆ ಪದೇ ಪದೇ ಏಕೆ ಭರವಸೆ ನೀಡುತ್ತ ಸಮಯ ವ್ಯರ್ಥ ಮಾಡುತ್ತಿದೆ. ಕಾನೂನಾತ್ಮಕ ಯಾವುದೇ ಅಡ್ಡಿ ಇಲ್ಲದಿದ್ದರು ಸಹ ಏಕೆ ಜಾರಿಗೆ ಹಿಂದೇಟು ಹಾಕುತ್ತಿದೆ ಎಂದು ತಿಳಿಯುತ್ತಿಲ್ಲ‌?
ಸರ್ಕಾರದ ಈ ನಡೆ ಸಮಾಜದ ಜನರಿಗೆ ಬೇಸರ ತಂದಿದೆ. ವಾಲ್ಮೀಕಿ ಜಯಂತಿ ಒಳಗಾಗಿ ಮೀಸಲಾತಿ ಹೆಚ್ಚಿಸಿ ಸರ್ಕಾರ ಆದೇಶ ಮಾಡದಿದ್ದರೆ ಮುಂದಿನ ಎಲ್ಲಾ ಪರಿಣಾಮಗಳಿಗೆ ಸರ್ಕಾರ ನೇರ ಹೊಣೆ ಎಂದು  ಸರ್ಕಾರದ ವಿರುದ್ಧ ಕಿಡಿಕಾರಿದರು.

[t4b-ticker]

You May Also Like

More From Author

+ There are no comments

Add yours