ಚಳ್ಳಕೆರೆ ಬಿಜೆಪಿಯ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ಕೂಗು, ಮೂರು ಜನ ಆಕಾಂಕ್ಷಿಗಳಲ್ಲಿ ಯಾರಿಗೆ ಟಿಕೆಟ್?

 

ಚಿತ್ರದುರ್ಗ: ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಗೆ  ಮೂರು  ಹೆಸರುಗಳು  ಪ್ರಬಲವಾಗಿ ಕೇಳಿ ಬರುತ್ತಿವೆ. ಚಳ್ಳಕೆರೆಯಲ್ಲಿ ಪಕ್ಷ  ಉತ್ತಮವಾಗಿ  ಸಂಘಟನೆ ಇದ್ದರು ಕಾರ್ಯಕರ್ತರಿಗೆ ಮುನ್ನೆಡೆಸುವ ನಾಯಕನ ವಿಚಾರಕ್ಕೆ ಸಾಕಷ್ಟು ಗೊಂದಲವಿದೆ ಎಂದು ಹೇಳಬಹುದು.

ಬಿಜೆಪಿ ಟಿಕೆಟ್ ಬಯಸಿರುವ ಮೂವರು ಸಹ ಲೋಕಲ್ ಎಂಬ ಬ್ರ್ಯಾಂಡ್ ನಲ್ಲಿ ಟಿಕೆಟ್ ಬಯಸುತ್ತಿದ್ದಾರೆ.
ಸಂಘ ಪರಿವಾರದ ಹಿನ್ನೆಲೆಯ ಬಾಳೆಕಾಯಿ ರಾಮದಾಸ್,  ಬಿಜೆಪಿ ಜಿಲ್ಲಾ  ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಮುಖಂಡ ಜಯರಾಮ್  ಸ್ವರ್ಧೆಗೆ ಕಣದಲಿದ್ದಾರೆ. ಮೂವರು ಸಹ ನಾನೇ ಅಭ್ಯರ್ಥಿ ಎಂಬ ಪರಿಸ್ಥಿತಿಯಲ್ಲಿ ಇಲ್ಲ. ಎಲ್ಲಾರೂ ಕಾದು ನೋಡಿ ಅವಕಾಶ ಸಿಕ್ಕರೆ ಒಂದು ಕೈ ಎಂಬ ಭಾವನೆಯಲ್ಲಿ ಇದ್ದು ಯಾರು ಪಕ್ಷ ಸಂಘಟಿಸಿ ನನಗೆ ಟಿಕೆಟ್ ಬೇಕು ಎಂದು  ಹೈಕಮಾಂಡ್ ಬಳಿ ಹೋಗುವ ಮನಸ್ಸು ಮಾಡುತ್ತಿಲ್ಲದಿರುವುದು ಕಾರ್ಯಕರ್ತರಲ್ಲಿ ಚಿಂತೆ ಉಂಟು ಮಾಡಿದೆ.
ಬಿಜೆಪಿ ಪಕ್ಷದ ಮಂಡಲ  ಸಭೆಯಲ್ಲಿ  ಚಳ್ಳಕೆರೆಗೆ ಹೊರಗಿನ ಅಭ್ಯರ್ಥಿಯನ್ನು ತರಬಾರದು? ಎಂಬ ಮಾತು ಕೇಳಿ ಬಂದಿದೆ. ನಮ್ಮಲ್ಲಿ ಸ್ಥಳೀಯರಿಗೆ  ಟಿಕೆಟ್  ನೀಡಿದರು ಕೆಲಸ ಮಾಡುತ್ತೇವೆ ಎಂಬ ಅಭಯ ನೀಡಿದ್ದಾರೆ ಎಂಬ ಮಾತು ಸಂಘ ಪರಿವಾರ ಮತ್ತು ಚಳ್ಳಕೆರೆ ಕ್ಷೇತ್ರದ ಮುಖಂಡರ ಮನದಾಳದ ಮಾತು ಎಂದರೆ ತಪ್ಪಗಲಾರದು ಎಂದು ಹೇಳಬಹುದು‌.
ಒಟ್ಟಿನಲ್ಲಿ ಚಳ್ಳಕೆರೆ ಬಿಜೆಪಿ ಎಲ್ಲವೂ ಸರಿಯಿಲ್ಲ ಎಂಬುದು ತಿಳಿದು ಪಕ್ಷ ಯಾರಿಗೆ ಮಣೆ ಹಾಕುತ್ತದೆ ಎಂಬುದು ಮಾತ್ರ ನಿಗೂಢಾವಾಗಿದ್ದು ಮುಂದಿನ ದಿನದಲ್ಲಿ ಯಾವ ನಡೆ ಎಂಬುದು ಕಾದು ನೋಡಬೇಕಿದೆ.
[t4b-ticker]

You May Also Like

More From Author

+ There are no comments

Add yours