ಮಜ್ಜಿಗೆ ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟು ಲಾಭ?

 

ಆಯುರ್ವೇದದಲ್ಲಿ ಸಾತ್ವಿಕ ಆಹಾರ ಎಂದು ಪರಿಗಣಿಸಲ್ಪಟ್ಟ ಮಜ್ಜಿಗೆ ಬೇಸಿಗೆಯ ದಣಿವನ್ನು ನಿವಾರಿಸಲು ಉತ್ತಮವಾಗಿದೆ. ಮೊಸರಿಗೆ ಕೊಂಚ ನೀರು ಸೇರಿಸಿ ತೆಳ್ಳಗಾಗಿಸಿ, ಇದಕ್ಕೆ ಹಸಿಮೆಣಸು, ಉಪ್ಪು, ಜೀರಿಗೆ ಪುಡಿ, ಚಾಟ್ ಮಸಾಲಾ, ಕೊತ್ತಂಬರಿ ಸೊಪ್ಪು, ಶುಂಠಿ, ಬೇವಿನ ಸೊಪ್ಪು, ಬೆಳ್ಳುಳ್ಳಿ ಮೊದಲಾದವುಗಳನ್ನು ಕೊಂಚ ಕೊಂಚವಾಗಿ ಸೇರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ ಕುಡಿದರೆ ಬೇಸಿಗೆಗೆ ಇದಕ್ಕಿಂತ ಉತ್ತಮವಾದ ಪೇಯ ಇನ್ನೊಂದಿಲ್ಲ… ಮಜ್ಜಿಗೆಯ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.

ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು
ಮಜ್ಜಿಗೆಯಲ್ಲಿ ಮೊಸರು ಮುಖ್ಯವಾಗಿರುವ ಕಾರಣ ಮೊಸರಿನ ಗುಣಗಳೆಲ್ಲವೂ ಇದೆ. ಇದರಲ್ಲಿ ಜೀರ್ಣಕ್ರಿಯೆಗೆ ಸಹಕರಿಸುವ ಪೋಷಕಾಂಶಗಳು ಜೀರ್ಣಾಂಗಗಳ ಹೊರೆಯನ್ನು ಕಡಿಮೆ ಮಾಡುತ್ತವೆ. ಅಲ್ಲದೇ ಮಜ್ಜಿಗೆಯಲ್ಲಿ ಸೇರಿಸಿರುವ ಜೀರಿಗೆ ಪುಡಿ ಮೊದಲಾದ ಮಸಾಲೆ ಪದಾರ್ಥಗಳು ಜೀರ್ಣಕ್ರಿಯೆಗೆ ಇನ್ನಷ್ಟು ಸಹಕರಿಸಿ ಜೀರ್ಣಕ್ರಿಯೆಯನ್ನು ಸುಲಭ ಮತ್ತು ಪರಿಪೂರ್ಣಗೊಳಿಸುತ್ತವೆ.

ದೇಹದ ತಾಪಮಾನವನ್ನು ತಣಿಸುತ್ತದೆ
ಬೇಸಿಗೆಯ ಬಿಸಿಯಲ್ಲಿ ದೇಹವೂ ಬಿಸಿಯಾಗತೊಡಗುತ್ತದೆ. ಇದನ್ನು ತಣಿಸಲು ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆವರು ಹರಿಯಬೇಕಾಗುತ್ತದೆ. ಆಗ ದೇಹದಿಂದ ನಷ್ಟವಾಗುವ ನೀರನ್ನು ಬೇಗನೇ ಭರ್ತಿಮಾಡಿಕೊಳ್ಳದೇ ಇದ್ದರೆ ದ್ರವದ ಪ್ರಮಾಣ ಕಡಿಮೆಯಾಗಿ ದೇಹ ಹೆಚ್ಚು ಬಿಸಿಯಾಗಲು ಕಾರಣವಾಗುತ್ತದೆ. ಮಜ್ಜಿಗೆಯ ಸೇವನೆ ಈ ತೊಂದರೆಯಿಂದ ತಡೆಯುತ್ತದೆ ಹಾಗೂ ದೇಹವನ್ನು ತಂಪಾಗಿಡಲು ನೆರವಾಗುತ್ತದೆ.

ಹೊಟ್ಟೆ ಉಬ್ಬರಿಕೆ ಮೊದಲಾದ ಸಮಸ್ಯೆಗೆ ರಾಮಬಾಣ
ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಮಸಾಲೆ ಹೊಟ್ಟೆ ಸೇರುವುದರಿಂದ ಇವು ಹೊಟ್ಟೆಯಲ್ಲಿ ಉರಿ, ಆಮ್ಲೀಯತೆ ಮೊದಲಾದ ತೊಂದರೆಗಳನ್ನು ಉಂಟುಮಾಡಬಹುದು. ಆದರೆ ಹಾಲಿನಲ್ಲಿರುವ ಪ್ರೋಟೀನುಗಳು ಮಜ್ಜಿಗೆಯಲ್ಲಿಯೂ ಇದ್ದು ಈ ಉರಿ ತರಿಸುವ ಮಸಾಲೆಗಳನ್ನು ತಟಸ್ಥವಾಗಿಸುತ್ತವೆ. ಆದ್ದರಿಂದ ಊಟದ ಕಡೆಯ ಆಹಾರವಾಗಿ ಮಜ್ಜಿಗೆಯನ್ನು ಸೇವಿಸುವ ಮೂಲಕ ಮಸಾಲೆಗಳ ಕಾರಣ ಎದುರಾಗಬಹುದಾಗಿದ್ದ ಉರಿ, ಆಮ್ಲೀಯತೆ, ಹೊಟ್ಟೆ ಉಬ್ಬರಿಕೆ ಮೊದಲಾದವು ಕಡಿಮೆಯಾಗುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಹೊರತಾಗಿ ವಿವಿಧ ಪ್ರೋಟೀನುಗಳು, ವಿಟಮಿನ್ ಬಿ, ಪೊಟ್ಯಾಸಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇವೆಲ್ಲವೂ ಆರೋಗ್ಯಕ್ಕೆ ಪೂರಕವಾಗಿವೆ. ಪರಿಣಾಮವಾಗಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ರಕ್ತದೊತ್ತಡ ನಿವಾರಣೆಗೆ
ನಿತ್ಯವೂ ಮಜ್ಜಿಗೆಯನ್ನು ಸೇವಿಸುವ ಮೂಲಕ ರಕ್ತದೊತ್ತಡ ಸಮರ್ಪಕವಾಗಿರುವಂತೆ ನೋಡಿಕೊಳ್ಳುವುದು ಹಾಗೂ ದೇಹಕ್ಕೆ ಹಲವು ರೀತಿಯ ಲಾಭಗಳಿವೆ.

[t4b-ticker]

You May Also Like

More From Author

+ There are no comments

Add yours