ಕರ್ತವ್ಯನಿಷ್ಠನಾದರೆ ಭವಿಷ್ಯದಲ್ಲಿ ಸದೃಢ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು: ಡಾ.ಕೆ.ಜಿ.ಶ್ರೀನಿವಾಸ್

 

ಚಿತ್ರದುರ್ಗ: ಮನಸ್ಸು ಮಾಡು, ಕಾದು ನೋಡು, ಕರ್ತವ್ಯನಿಷ್ಠನಾದರೆ ಭವಿಷ್ಯದಲ್ಲಿ ಸದೃಢ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಪ್ರಾಧ್ಯಾಪಕ ಡಾ. ಕೆ.ಜಿ.ಶ್ರೀನಿವಾಸ್ ತಿಳಿಸಿದರು.
ನಗರದ ತರಾಸು ಎಸ್.ಜೆ.ಎಸ್ ಜ್ಞಾನಪೀಠದಿಂದ ಗುರುವಾರ ಹಮ್ಮಿಕೊಂಡಿದ್ದ ಜ್ಞಾನ ಸಂಭ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಬೋಧಕರ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ. ಬೋಧಕರು ವಿದ್ಯಾರ್ಥಿಗಳನ್ನು ಪ್ರಶ್ನೆ ಕೇಳುವಂತೆ ಪ್ರೇರೇಪಿಸಬೇಕು, ಅವರುಗಳು ಕೇಳಿದಂತಹ ಪ್ರತಿಯೊಂದು ಪ್ರಶ್ನಿಗೂ ಬೇಸರಿಸಿಕೊಳ್ಳದೆ ಉತ್ತರವನ್ನು ನೀಡಿ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಹೇಳಿದರು.
ವಿಜ್ಞಾನಿ ಲೂಯಿಸ್ ಪ್ಯಾಶ್ಚರ್ ಹೇಳಿದಂತೆ ಏನು, ಏಕೆ, ಹೇಗೆ ಎನ್ನುವ ಪ್ರಶ್ನಿಸುವ ವಿದ್ಯಾರ್ಥಿಗಳು ಕಲಿಕೆಯಲ್ಲಿ ಅತ್ಯಂತ ಉತ್ಸುಕನಾಗಿರುತ್ತಾನೆ. ಅವನ ಉತ್ಸಕತೆಯನ್ನು ಬೋಧಕರು ಯಾವುದೆ ಕಾರಣಕ್ಕೂ ಚೂಟಿಯಾಗದೆ ಉತ್ತಮ ಭವಿಷ್ಯಕ್ಕಾಗಿ ಮಾರ್ಗದರ್ಶನ ನೀಡಬೇಕು.
ಓದು ಸಾರ್ಥಕ ಓದಿದರಲ್ಲ ತಿಳಿದರೆ, ತಿಳಿವು ಸಾರ್ಥಕ ಬರಿ ತಿಳಿದರಲ್ಲ ಬದುಕಿದರೆ, ಬದುಕು ಸಾರ್ಥಕ ಬದುಕಿದರಲ್ಲ ಬೆಳಗಿದರೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ವಿದ್ಯಾರ್ಥಿ ಜೀವನ ಕಲಿಕೆ ಹಂತದಲ್ಲಿರುತ್ತದೆ. ಅದು ಸುಂದರವಾದAತಹ ಬದುಕಲ್ಲ, ಸುಂದರವಾದ ಬದುಕನ್ನು ಮಾಡಿಕೊಳ್ಳುವುದು ವಿದ್ಯಾರ್ಥಿಗಳ ಕೈಯಲ್ಲಿರುತ್ತದೆ ಆಗಾಗಿ ಶ್ರಮವಹಿಸಿ ಶ್ರದ್ಧೆಯಿಂದ ಪಾಠ-ಪ್ರವಚನದಲ್ಲಿ ತೊಡಗಿಕೊಂಡರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಭೋವಿ ಗುರುಪೀಠದ ಸಿ.ಇ.ಓ ಗೌನಹಳ್ಳಿ ಗೋವಿಂದಪ್ಪ, ಮುಖ್ಯಶಿಕ್ಷಕರಾದ ಎಂ.ಸಿ.ನಾಗರಾಜ, ಪಿ.ಕೆ.ಶ್ರೀಧರ್, ಹನುಮಂತಪ್ಪ, ಸಹಶಿಕ್ಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಶಾರದ ಬಾಲಕೀಯ ಪ್ರೌಢಶಾಲೆ, ಸಿದ್ಧರಾಮೇಶ್ವರ ವಸತಿ ಪ್ರೌಢಶಾಲೆ, ರಾಮಕೃಷ್ಣ ವಸತಿ ಪ್ರೌಢಶಾಲೆ, ಮಕ್ಕಳು ಮತ್ತು ಪೋಷಕರು ಭಾಗವಹಿಸಿದ್ದರು

[t4b-ticker]

You May Also Like

More From Author

+ There are no comments

Add yours