SDA FDA ಹುದ್ದೆಗಳಿಗೆ ಸರ್ಕಾರದಿಂದ ಅರ್ಜಿ ಆಹ್ವಾನ

 

ARBWWB Recruitment 2023: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (Karnataka Building and other Construction Workers Welfare Board) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

186 ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್, ಫೀಲ್ಡ್ ಇನ್ಸ್​ಪೆಕ್ಟರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜುಲೈ 22, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು. ಕರ್ನಾಟಕ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ನಾಳೆಯಿಂದ ಅಂದರೆ ಜೂನ್ 23ರಿಂದ ಅರ್ಜಿ ಪ್ರಕ್ರಿಯೆ ಶುರುವಾಗಲಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
ಹುದ್ದೆ ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್, ಫೀಲ್ಡ್ ಇನ್ಸ್​ಪೆಕ್ಟರ್
ಒಟ್ಟು ಹುದ್ದೆ 186
ವೇತನ ಮಾಸಿಕ ₹ 37,900-70,850
ಉದ್ಯೋಗದ ಸ್ಥಳ ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 22, 2023

ಹುದ್ದೆಯ ಮಾಹಿತಿ:
ವೆಲ್​ಫೇರ್ ಆಫೀಸರ್- 12
ಫೀಲ್ಡ್​ ಇನ್ಸ್​ಪೆಕ್ಟರ್- 60
ಫಸ್ಟ್​ ಡಿವಿಶನ್ ಅಸಿಸ್ಟೆಂಟ್ (FDA)- 12
ಪ್ರೈವೇಟ್ ಕನ್ಸಲ್ಟೆಂಟ್- 2
ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್ (SDA)- 100

ವೇತನ:
ವೆಲ್​ಫೇರ್ ಆಫೀಸರ್- ಮಾಸಿಕ ₹ 37,900-70,850
ಫೀಲ್ಡ್​ ಇನ್ಸ್​ಪೆಕ್ಟರ್- ಮಾಸಿಕ ₹ 33,450-62,600
ಫಸ್ಟ್​ ಡಿವಿಶನ್ ಅಸಿಸ್ಟೆಂಟ್ (FDA)- ಮಾಸಿಕ ₹ 27,650-52,650
ಪ್ರೈವೇಟ್ ಕನ್ಸಲ್ಟೆಂಟ್- ಮಾಸಿಕ ₹ 27,650-52,650
ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್ (SDA)- ಮಾಸಿಕ ₹ 21,400-42,000

ವಿದ್ಯಾರ್ಹತೆ, ವಯೋಮಿತಿ, ವಯೋಮಿತಿ ಸಡಿಲಿಕೆ, ಅರ್ಜಿ ಶುಲ್ಕ ಇತ್ಯಾದಿ ವಿವರಗಳಿಗಾಗಿ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23/06/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 22, 2023
ಆನ್​ಲೈನ್ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಜುಲೈ 25, 2023
ಇ-ಪೋಸ್ಟ್​ ಆಫೀಸ್ ಮೂಲಕ ಅರ್ಜಿ ಶುಲ್ಕ ಕಟ್ಟಲು ಕೊನೆಯ ದಿನ: ಜುಲೈ 26, 2023

ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

[t4b-ticker]

You May Also Like

More From Author

+ There are no comments

Add yours