ವಿಕಲಚೇತನರ ಬಸ್‍ಪಾಸ್‍ಗೆ ಅರ್ಜಿ ಆಹ್ವಾನ

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜನವರಿ03:
2023ನೇ ಸಾಲಿಗೆ ವಿಕಲಚೇತನ ಫಲಾನುಭವಿಗಳ ಬಸ್‍ಪಾಸ್ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ವಿಭಾಗ ಮತ್ತು ಜಿಲ್ಲಾಮಟ್ಟದಲ್ಲಿ ವಿಕಲಚೇತನರಿಗೆ 2023ನೇ ಸಾಲಿನ ಬಸ್‍ಪಾಸ್‍ನ್ನು ನವೀಕರಿಸಲು ಸಾಕಷ್ಟು ಸಮಯಾವಕಾಶವನ್ನು ನೀಡುವ ದೃಷ್ಠಿಯಿಂದ ಫಲಾನುಭವಿಗಳು 2022ನೇ ಸಾಲಿನಲ್ಲಿ ಪಡೆದಿರುವ ಪಾಸ್‍ನ್ನು 2023ರ ಫೆಬ್ರವರಿ 28 ರೊಳಗಾಗಿ ನವೀಕರಣ ಮಾಡಿಸಿಕೊಳ್ಳುವುದು ನಂತರ ನವೀಕರಣಕ್ಕೆ ಅವಕಾಶವಿರುವುದಿಲ್ಲ.
ಪಾಸ್ ನವೀಕರಿಸುವ ವಿವರ: ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಫಲಾನುಭವಿಗಳಿಗೆ ಚಿತ್ರದುರ್ಗ ಬಸ್ ನಿಲ್ದಾಣದ ಪಾಸ್ ವಿತರಣೆ ಕೇಂದ್ರದಲ್ಲಿ ನವೀಕರಿಸಲಾಗುವುದು. ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕು ವ್ಯಾಪ್ತಿಯ ಫಲಾನುಭವಿಗಳಿಗೆ ಚಳ್ಳಕೆರೆ ಬಸ್ ನಿಲ್ದಾಣದ ಪಾಸ್ ವಿತರಣೆ ಕೇಂದ್ರದಲ್ಲಿ ನವೀಕರಿಸಲಾಗುವುದು. ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಫಲಾನುಭವಿಗಳು ಹೊಸದುರ್ಗ ಬಸ್ ನಿಲ್ದಾಣದ ಪಾಸ್ ವಿತರಣೆ ಕೇಂದ್ರದಲ್ಲಿ ನವೀಕರಿಸಲಾಗುವುದು.
ಫಲಾನುಭವಿಗಳು ವಿಕಲಚೇತನರ ಪಾಸ್ ನವೀಕರಿಸಿಕೊಳ್ಳಲು ಸೇವಾಸಿಂಧು ಪೋರ್ಟಲ್ https://serviceonline.gov.in/karnataka/ ನಲ್ಲಿ ಘಟಕ ವ್ಯವಸ್ಥಾಪಕರ ಕೌಂಟರ್ ಐಡಿ ಅರ್ಜಿ ಸಲ್ಲಿಸುವುದು ಮತ್ತು ಹೊಸ ಪಾಸ್‍ಗಳನ್ನು ಪಡೆಯಲು ವಿಭಾಗೀಯ ನಿಯಂತ್ರಣಾಧಿಕಾರಿಗಳು ಚಿತ್ರದುರ್ಗ ವಿಭಾಗ ಅವರ ಕೌಂಟರ್ ಐಡಿಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ವಿಕಲಚೇತನ ಫಲಾನುಭವಿಗಳು ದಾಖಲಾತಿಗಳನ್ನು ಸೇವಾಸಿಂಧು ಪೋರ್ಟಲ್ ಆಪ್‍ಲೋಡ್ ಮಾಡಿ ಪಾಸ್ ನವೀಕರಣ ಸಂದರ್ಭದಲ್ಲಿ ಹಾಜರುಪಡಿಸುವುದು.
ನವೀಕರಣ ಮಾಡಿಸುವ ಸಂದರ್ಭದಲ್ಲಿ ಹಾಜರುಪಡಿಸಬೇಕಾದ ಮೂಲ ದಾಖಲಾತಿಗಳು: 2022ನೇ ಸಾಲಿನ ವಿಕಲಚೇತನರ ಪಾಸು (ಮೂಲ), ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳಿಂದ ದೃಢೀಕರಿಸಿದ ವಿಕಲಚೇತನರ ಗುರುತಿನ ಚೀಟಿ ಅಥವಾ ಯುಡಿಐಡಿ ಕಾರ್ಡ್, ಡಿಸಬಿಟಿಲಿಟಿ ಸರ್ಟಿಫಿಕೇಟ್, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಇತ್ತೀಚಿನ ಭಾವಚಿತ್ರ ಆಪ್‍ಲೋಡ್ ಮಾಡಿ 3 ಭಾವಚಿತ್ರ ನೀಡುವುದು. ರೂ.660/- ನಗದು ಪಾವತಿಸುವುದು.
ಈ ಮೂಲ ದಾಖಲಾತಿಗಳ ಒಂದು ಸೆಟ್ ಜೆರಾಕ್ಸ್ ಪ್ರತಿಗಳನ್ನು ಸಂಬಂಧಪಟ್ಟ ಬಸ್ ನಿಲ್ದಾಣಗಳಲ್ಲಿ ನವೀಕರಣ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ನೀಡಿ ವಿಕಲಚೇತನರ ಬಸ್‍ಪಾಸ್‍ಗಳನ್ನು ಪಡೆಯಬಹುದಾಗಿದೆ ಹಾಗೂ ಹೊಸ ಬಸ್‍ಪಾಸ್‍ಗಳನ್ನು ವಿಭಾಗೀಯ ಕಚೇರಿಯ ಸಂಚಾರ ಶಾಖೆಯಲ್ಲಿ ವಿತರಣೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours