ಹದಿಹರೆಯದ ಹೆಣ್ಣುಮಕ್ಕಳಿಗೆ ಆರೋಗ್ಯದ ಅರಿವು ಅವಶ್ಯಕ

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ಫೆ.22:
ಹದಿಹರೆಯದ ಹೆಣ್ಣುಮಕ್ಕಳು ಆರೋಗ್ಯಯುತ ಜೀವನ ನಡೆಸಲು ಸ್ವಯಂ ಸ್ವಚ್ಚತೆ, ಋತುಸ್ರಾವ, ರಕ್ತ ಹೀನತೆ ಸೇರಿದಂತೆ ಆರೋಗ್ಯದ ಕುರಿತಾದ ಅರಿವು ಅತ್ಯಾವಶ್ಯಕವಾಗಿದೆ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಹೇಳಿದರು.
ಚಿತ್ರದುರ್ಗ ನಗರದ ಸರ್ಕಾರಿ ಸ್ಕೂಲ್ ಆಫ್ ನಸಿರ್ಂಗ್, ಸರ್ಕಾರಿ ಕಾಲೇಜ್ ಆಫ್ ನಸಿರ್ಂಗ್ ಮತ್ತು ಸರ್ಕಾರಿ ಆರೋಗ್ಯ ಸುರಕ್ಷತಾಧಿಕಾರಿಗಳ ತರಬೇತಿ ಸಂಸ್ಥೆಯಲ್ಲಿ ಬುಧವಾರ ಹದಿ ಹರೆಯದ ಕಿಶೋರಿಯರಿಗಾಗಿ ಹಮ್ಮಿಕೊಳ್ಳಲಾದ  ಮಾಹಿತಿ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳು ಖುತುಮತಿಯಾಗಿ ರಜಸ್ವಲೆಯಾಗುವುದು ಪ್ರಕೃತಿಯ ಸಹಜ ಕ್ರಿಯೆ. ಇದಕ್ಕೆ ಮಜುಗರ ಸಂಕೋಚ ಬೇಡ, ವೈಯಕ್ತಿಕ ಸ್ವಚ್ಛತೆ, ಪೌಷ್ಟಿಕ ಆಹಾರ ಸೇವನೆ ಕಡೆ ಗಮನ ಹರಿಸಬೇಕು. ಕಿಶೋರಿಯರು ರಜಸ್ವಲೆಯಾಗುವ, ಈ ವಯಸ್ಸಿನಲ್ಲಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸಂಕೋಚವಿಲ್ಲದೆ ನಿಮ್ಮ ತಾಯಿ ಅಕ್ಕಂದಿರ ಬಳಿ ನಿಮಗಾಗುವ ತೊಂದರೆಯನ್ನು ಹೇಳಿಕೊಳ್ಳಬೇಕು. ಅಗತ್ಯ ಸಂದರ್ಭಗಳಲ್ಲಿ ವೈದ್ಯರ ಸಲಹೆಗಳನ್ನು ಪಡೆದುಕೊಳ್ಳಬೇಕು. ನಿಮ್ಮ ಸೇವೆಗಾಗಿ ಪ್ರತಿ ಗುರುವಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ನೇಹ ಕ್ಲಿನಿಕ್ ತೆರೆದಿರುತ್ತದೆ. ಅಪ್ತ ಸಮಾಲೋಚನೆ ಮಾಡಿಕೊಳ್ಳಿ ಅವಕಾಶವಿದೆ. ಸರ್ಕಾರ ಕಿಶೋರಿಯರಿಗಾಗಿ ರಾಷ್ಟ್ರೀಯ ಕಿಶೋರಿ ಸ್ವಾಸ್ಥ್ಯ ಕಾರ್ಯಕ್ರಮ ಆಯೋಜಿಸಿದ್ದು ಖುತುಸ್ರಾವದ ಸಂದರ್ಭದಲ್ಲಿ ಸ್ಥಿತಿಯನ್ನು ಹೇಗೆ ನಿಭಾಯಿಸಬೇಕು, ಸ್ವಚ್ಚತೆ ಸ್ಯಾನಿಟರಿ ನ್ಯಾಪಕಿನ್ ಬಳಕೆ, ವಿಸರ್ಜನೆ, ಪೌಷ್ಟಿಕಾಹಾರ ಸೇವನೆ ಮಾನಸಿಕ ಭೌತಿಕ ಬದಲಾವಣೆಗಳನ್ನು ಅರಿಯಲು ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶೀಧರ್ ಮಾತನಾಡಿ, ಆರೋಗ್ಯ ಕೇಂದ್ರಗಳಲ್ಲಿ ವಾರಕೊಮ್ಮೆ ಕಬ್ಬಿಣಾಂಷ ಮಾತ್ರೆ, 6 ತಿಂಗಳಿಗೊಮ್ಮೆ ಜಂತು ಮಾತ್ರೆ, ರಾಷ್ಟ್ರೀಯ ಕಿಶೋರಿ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ತಪಾಸಣೆ ಚಿಕಿತ್ಸೆ ನಿರ್ದೇಶನ ನಡೆಸಲಾಗುತ್ತದೆ ಎಂದರು ತಿಳಿಸಿದರು.
ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಬಳಸಿದ ನ್ಯಾಪಕಿನ್ ಹೇಗೆ ವಿಲೇವಾರಿ ಮಾಡಬೇಕು, ಪೌಷ್ಟಿಕಾಹಾರ ಸೇವನೆ ಬಗ್ಗೆ ವಿದ್ಯಾರ್ಥಿನಿಯರಿಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರುಗಳಾದ ಅನುಶ್ರೀ, ರಾಜಯ್ಯ, ಮಂಜಮ್ಮ, ಉಪನ್ಯಾಸಕರಾದ ನರಸಿಂಹ ರೆಡ್ಡಿ, ಬಿಂತಿ, ಶಿವಲೀಲಾ ಗಾಯತ್ರಿ , ತಿರುಮಲೇಶ್ ಹಾಗೂ ಇತರೆ ಸಿಬ್ಬಂದಿಗಳು ಭಾಗವಹಿಸಿದ್ದರು.

 

 

[t4b-ticker]

You May Also Like

More From Author

+ There are no comments

Add yours