ಆಕಸ್ಮಿಕ ಬೆಂಕಿ: ರಾಗಿ ಬಡವೆ ಮತ್ತು ಗುಡಿಯಲು ಸುಟ್ಟು ಸಾವಿರಾರು ರೂಪಾಯಿ ನಷ್ಟ

 

ಚಳ್ಳಕೆರೆ: ತಳಕು ಹೋಬಳಿಯ ರೇಣುಕಾಪುರ ಮತ್ತು ಬೇಡರೆಡ್ಡಿಹಳ್ಳಿ ಗ್ರಾಮದಲ್ಲಿ ಅಗ್ನಿ ಆಕಸ್ಮಿಕ ರಾಗಿ ಬಣವೆ ಹಾಗೂ ಗುಡಿಸಲು ಬೆಂಕಿಗೆ ಆಹುತಿ ಸಾವಿರಾರು ರೂ ನಷ್ಟ.

ಚಳ್ಳಕೆರೆ-೦೩ ಬೇಸಿಗೆಯ ಸುಡುಬಿಸಿಲಿನ ಹಿನ್ನೆಲೆಯಲ್ಲಿ ಅಗ್ನಿಅನಾಹುತಗಳು ನಿರಂತರ ನಡೆಯುತ್ತಿದ್ದು, ಇವುಗಳನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಜಾಗೃತೆ ವಹಿಸಬೇಕಿದೆ. ಅಗ್ನಿ ಅವಘಡಗಳಲ್ಲಿ ಬಹುತೇಕ ಎಲ್ಲರವನ್ನೂ ಕಳೆದುಕೊಂಡು ನಿರ್ಗತಿಕರಾದ ಜನಸಾಮಾನ್ಯರಿಗೆ ಸರ್ಕಾರ ನೆರವು ನೀಡಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ.
ತಳಕು ಹೋಬಳಿಯ ರೇಣುಕಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸವಿಗೊಂಡನಹಳ್ಳಿ ಗ್ರಾಮದ ನರಸಿಂಹಪ್ಪ ಎಂಬುವವರ ಗುಡಿಸಲಿಗೆ ಆಕಸ್ಮಿಕ ಬೆಂಕಿ ಬಿದ್ದು ಗುಡಿಸಲು ಬೆಂಕಿಗೆ ಆಹುತಿಯಾಗಿ ಗುಡಿಸಲಲ್ಲಿದ್ದ ರಾಗಿ, ಅಕ್ಕಿ, ಶೇಂಗಾ ಮುಂತಾದ ಆಹಾರ ಪದಾರ್ಥಗಳು ಬೆಂಕಿಯಲ್ಲಿ ಸುಟ್ಟು ಸುಮಾರು ೫೦ಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆ: ಹಠ ಬಿಟ್ಟು ಕೆಲಸ ಮಾಡಲು ಅನುವು ಮಾಡ್ಕೋಡಿ ರೈತರಿಗೆ ಡಿಸಿಎಂ ಡಿ.ಕೆ.‌ಶಿವಕುಮಾರ್ ಮನವಿ.

ಮತ್ತೊಂದು ಪ್ರಕರಣದಲ್ಲಿ ತಳಕು ಹೋಬಳಿಯ ಬೇಡರೆಡ್ಡಿಹಳ್ಳಿ ಗ್ರಾಮದ ರಘುನಾಥರೆಡ್ಡಿ ಎಂಬುವವರ ರಾಗಿ ಹುಲ್ಲಿನ ¨ಣವೆಗೆ ಭಾನುವಾರ ಮಧ್ಯಾಹ್ನ ಬಿದ್ದ ಆಕಸ್ಮಿಕ ಬೆಂಕಿಗೆ ರಾಗಿ ಹುಲ್ಲಿನ ಬಣವೆ ಸಂಪೂರ್ಣ ಸುಟ್ಟು ಸುಮಾರು ೫೦ ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ಧಾರೆ

[t4b-ticker]

You May Also Like

More From Author

+ There are no comments

Add yours