ಬಡವರ ಅಕ್ಕಿ ಕಿತ್ತುಕೊಂಡವರಿಗೆ ಚುನಾವಣೆಯಲ್ಲಿ ತಕ್ಕ ಪಾಠ: ಸಚಿವ ಆರ್.ಬಿ.ತಿಮ್ಮಾಪುರ

 

ಚಿತ್ರದುರ್ಗ: (chitradurga)ಜೂ:22: ಬಡವರಿಗೆ ಕೊಡುವ ಅನ್ನ ಕಿತ್ತುಕೊಂಡವರಿಗೆ ಬರುವ  ಎಂಪಿ  ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಬೇಕು ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ(R.B.Thimapura) ತಿಳಿಸಿದರು.

ಇಂದು  ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದ ಅವರು  ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಮುಂದಿನ
ಲೋಕಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಮೀಸಲು  ಕ್ಷೇತ್ರದಲ್ಲಿ ಕಾಂಗ್ರೆಸ್ ನೂರಕ್ಕೆ ನೂರರಷ್ಟು ಈ ಬಾರಿ ಗೆಲುವು  ವಿಶ್ವಾಸ  ವ್ಯಕ್ತಪಡಿಸಿದರು.dist congress

ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲೇ ಅತೀ ಹೆಚ್ಚು ಮತಗಳು ಬಂದಿರುವುದು ಚಿತ್ರದುರ್ಗದ ದಾಖಲೆಯಾಗಿದೆ. ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆ, ದಲಿತ ಸಮಾವೇಶಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದಾಗಲೇ ಇದರ ಸೂಚನೆ ಸಿಕ್ಕಿತ್ತು ಎಂದರು.

ಕಾಂಗ್ರೆಸ್ ಬಡವರ ಪಕ್ಷ  ಇಂದಿರಾಗಾಂಧಿ ಅವರ ಕಾಲದಿಂದಲೂ ಬಡವರ ಹಿತವನ್ನು  ಕಾಪಾಡಿಕೊಂಡು ಬಂದಿದೆ. ಮತ್ತೊಂದು ರಾಷ್ಟ್ರೀಯ  ಪಕ್ಷ ಅದಾನಿ, ಅಂಬಾನಿಯವರ ಪಕ್ಷ. ಅವರ ಸಾಲ ಮನ್ನಾ ಮಾಡಿ, ಬಡವರಿಗೆ ಅನ್ನ ಕೊಡಲು ಅಡ್ಡಿ ಮಾಡುತ್ತಿದ್ದಾರೆ. ಅದಾನಿ ಅಂಬಾನಿ ಮಾತ್ರ ಅವರಿಗೆ ಕಾಣುತ್ತಿದ್ದು ಬಡವರು ಇವರ ಕಣ್ಣಿಗೆ ಕಾಣುತ್ತಿಲ್ಲ.  ಇದನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು.

600 ಭರವಸೆ ಕೊಟ್ಟು 50 ಈಡೇರಿಸದ ಅಯೋಗ್ಯರಿಗೆ ನಮ್ಮ ಬದ್ಧತೆ ಪ್ರಶ್ನಿಸುವ ನೈತಿಕ ಹಕ್ಕಿಲ್ಲ. ಬಡವರಿಗೆ ಕೊಡುವ ಅನ್ನ ಕೊಡುವುದನ್ನು ತಡೆಯುವ ನೀವು ಬಡವರ ಪರವಾಗಿದ್ದೀರಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದ  ಕಾರ್ಯಕರ್ತರ ಪರಿಶ್ರಮದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಮುಂದಿನ  ಜಿಪಂ, ತಾಪಂ ಚುನಾವಣೆಯಲ್ಲಿ ಕಾರ್ಯಕರ್ತರನ್ನು ಗೆಲ್ಲಿಸಿಕೊಳ್ಳವ ಮಹತ್ವದ ಜವಾಬ್ದಾರಿ ನಮ್ಮದು.

ಚಿತ್ರದುರ್ಗದಲ್ಲಿ 30 ವರ್ಷ ಒಬ್ಬರೇ ಶಾಸಕರಾಗಿದ್ದರು. ಇದನ್ನು ಮನಗಂಡು ಇಲ್ಲಿನ ಬುದ್ದಿವಂತ ಕಾರ್ಯಕರ್ತರು ಮುಂದಿನ 30 ವರ್ಷ ಅಧಿಕಾರ ನಡೆಸುವ ಯುವಕನನ್ನು ಆಯ್ಕೆ ಮಾಡಿದ್ದೀರಿ ಎಂದು ತಿಮ್ಮಾಪುರ ಶ್ಲಾಘಿಸಿದರು.

ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) k.c.virendhra pappi ಮಾತನಾಡಿ, ಚಿತ್ರದುರ್ಗದಲ್ಲಿ 30 ವರ್ಷಗಳ ನಂತರ ಕಾಂಗ್ರೆಸ್ ಗೆದ್ದಿದೆ. ಶೇ.60ರಷ್ಟು ಮತ ಬಂದಿವೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಪೀರ್ ಮಾತನಾಡಿ, ಎಲ್ಲ ಸಚಿವರು ಜಿಲ್ಲೆಗಳಿಗೆ ಭೇಟಿ ನೀಡಿದಾಗ ಮೊದಲು ಕಾಂಗ್ರೆಸ್ ಕಚೇರಿಗಳಿಗೆ ಭೇಟಿ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್

ನೀಡಿದ್ದಾರೆ. ಇದರಿಂದ ಪಕ್ಷದ ಕಾರ್ಯಕರ್ತರಿಗೆ ಉತ್ಸಾಹ ಬಂದಿದೆ. ಇದು ಬಹಳ ಉತ್ತಮ ನಿರ್ಧಾರ ಎಂದರು.
ರಾಜ್ಯದಲ್ಲಿ ಐದು ವರ್ಷದ ನಂತರ ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ. ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಎಐಸಿಸಿ 4 ಕ್ಷೇತ್ರ ಟಾರ್ಗೆಟ್ ಕೊಟ್ಟಿತ್ತು. ಆದರೆ, ಒಂದು ಕ್ಷೇತ್ರ ಐದು ಸಾವಿರ ಅಂತರದಲ್ಲಿ ಸೋತಿದ್ದೇವೆ. ಚಿತ್ರದುರ್ಗದಲ್ಲಿ ಕಾಂಗ್ರೆಸ್ ಶೇ.48 ರಷ್ಟು ಮತ ಪಡೆದಿದೆ. ಮುಂದೆ ಲೋಕಸಭಾ ಚುನಾವಣೆಯಲ್ಲಿ ಹೀಗೆ ಕೆಲಸ ಮಾಡಿ ಪಕ್ಷ ಗೆಲ್ಲಿಸಬೇಕು. ಸಚಿವರು, ಶಾಸಕರು ಕಾರ್ಯಕರ್ತರ ಬಂದಾಗ ಅವರ ಸಮಸ್ಯೆ ಆಲಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡಿ, ಆರ್.ಬಿ.ತಿಮ್ಮಾಪುರ ಸಜ್ಜನಿಕೆಯ ವ್ಯಕ್ತಿ. ಅವರು ಅಧಿಕಾರದ ಹಿಂದೆ ಹೋದವರಲ್ಲ. ಅವರ ಬಳಿಗೆ ಅಧಿಕಾರ ಹುಡುಕಿಕೊಂಡು ಬಂದಿದೆ. ಬಿಜೆಪಿ ಭ್ರಷ್ಟಾಚಾರ ಅಧಿಕಾರ ದುರುಪಯೋಗ ನೋಡಿ ರಾಜ್ಯದ ಜನತೆ 66 ಸ್ಥಾನಕ್ಕೆ ನಿಲ್ಲಿಸಿ, ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದು ಜನರ ಜೊತೆ ಇರುತ್ತೇವೆ ಎಂದರು.

ಎಸ್ಸಿ ಸೆಲ್ ರಾಜ್ಯ ಕಾರ್ಯದರ್ಶಿ ಪಿ.ರಘು ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಲಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಮೈಲಾರಪ್ಪ, ಲಿಡ್ಕರ್ ಮಾಜಿ ಅಧ್ಯಕ್ಷ ಆರ್.ಶಂಕರ್ ಮತ್ತಿತರರಿದ್ದರು.

–ಬಾಕ್ಸ್-
ಲೋಕಸಭೆ ಚುನಾವಣೆಗೆ ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ಕೊಡಬೇಕು. ಈ ಬಗ್ಗೆ ಪಕ್ಷದ ಹಿರಿಯರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು.

# ಜೆ.ಜೆ.ಹಟ್ಟಿ ಡಾ.ಬಿ.ತಿಪ್ಪೇಸ್ವಾಮಿ, 2009 ಪರಾಜಿತ ಅಭ್ಯರ್ಥಿ.ಕಾಂಗ್ರೆಸ್ ಮುಖಂಡರು.

[t4b-ticker]

You May Also Like

More From Author

+ There are no comments

Add yours