ಚಾಕಲೇಟ್ ಅಂತ ಮಾತ್ರೆ ತಿಂದಿದ್ದ ನಾಲ್ಕು ವರ್ಷದ ಮಗು ಸಾವು

 

ಚಿತ್ರದುರ್ಗ: (chitradurga)  ಚಿಕ್ಕ ಮಕ್ಕಳಿಗೆ ಏನು ತಿನ್ನಬೇಕು ಎನ್ ತಿನ್ನಬಾರದು ಅಂತ ಗೊತ್ತಿರಲ್ಲ, ಚಿಕ್ಕ ಮಕ್ಕಳಿರುವ ಮನೆಗಳಲ್ಲಿ ಮಕ್ಕಳ ಕೈಗೆ ಸಿಗುವಂತೆ ವಸ್ತುಗಳನ್ನಾಗಲಿ , ಆಹಾರವಾಗಲಿ ಹಿಡಬಾರದು.‌ಮಕ್ಕಳಿಗೆ ಏನು ತಿಳಿಯದ ವಯಸ್ಸಿನಲ್ಲಿ  ತಿಂಡಿ ತಿನಿಸುಗಳು ಅಂದರೆ ಇಷ್ಟ. ಮನೆಯಲ್ಲಿ ಆರೋಗ್ಯದಲ್ಲಿ ವ್ಯತ್ಯಾಸವಾದಗ ಕಣ್ಣಿಗೆ ಕಾಣುವಂತೆ ಮಾತ್ರೆಗಳನ್ನು ಸಹ ಟೇಬಲ್ ಮೇಲೆ ಇಟ್ಟಿರುತ್ತಾರೆ. ಆದರೆ  ಮನೆಯಲ್ಲಿದ್ದ ಮಾತ್ರೆಯನ್ನು  ಚಾಕೊಲೇಟ್ ಎಂದು ಇಷ್ಟ ಪಟ್ಟು  ತಿಂದಿದ್ದ ಮಗುವೊಂದು ಸಾವನ್ನಪ್ಪಿರುವ  ಆತಂಕಕಾರಿ ಘಟನೆ ಚಿತ್ರದುರ್ಗ ತಾಲೂಕಿನ ಕಡಬನಕಟ್ಟೆಯಲ್ಲಿ ನಡೆದಿದೆ.

ಚಿತ್ರದುರ್ಗ   ತಾಲೂಕಿನ  ಕಡಬನಕಟ್ಟೆ ನಿವಾಸಿ ವಸಂತಕುಮಾರ್ ಹಾಗೂ ಪವಿತ್ರ ದಂಪತಿಯ ಪುತ್ರ 4 ವರ್ಷದ ಹೃತ್ವಿಕ್ ಮೃತ ಕಂದ.

ಮಾರ್ಚ್ 2 ರಂದು ಮಧ್ಯಾಹ್ನ 12.30ರ ವೇಳೆಗೆ ಮನೆಯ ಒಳಗೆ ಯಾರೂ ಇಲ್ಲದಿದ್ದ ಸಮಯದಲ್ಲಿ  ಮನೆಯ ಬಾಕ್ಸ್ ನಲ್ಲಿದ್ದ  ಮಾತ್ರೆಗಳನ್ನು ಮಗು ತಿಂದಿದೆ. ಆನಂತರ ಸುಸ್ತಾಗಿದ್ದು, ತಾಯಿಗೆ ಸನ್ನೆಯ  ಮೂಲಕ ಮಾತ್ರೆ ತಿಂದಿರುವ ವಿಷಯವನ್ನು  ತಿಳಿಸಿದೆ.

ತಕ್ಷಣ ಮಗುವನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದು, ಇಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಬಸವೇಶ್ವರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಾರ್ಚ್ 3 ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.

ಇದನ್ನೂ ಓದಿ: ಜಿಲ್ಲಾಮಟ್ಟದ ಜನತಾ ದರ್ಶನ ಮುಂದೂಡಿಕೆ

ಆದರೆ, ಮಾರ್ಚ್ 6 ರಂದು ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಮಗುವಿನ ತಂದೆ ವಸಂತಕುಮಾರ್ ತುರುವನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours