ಬಿಜೆಪಿ‌ ರಾಜ್ಯಧ್ಯಕ್ಷ ಪಟ್ಟಕ್ಕೆ ಮಹಿಳಾ ಸಾರಥಿ ಮಾಡಿ ಮತ ಪಡೆಯಲು ಪ್ಲಾನ್, ಯಾರು ಆ ಮಹಿಳೆ?

 

ಬೆಂಗಳೂರು: ಮುಂದಿನ‌  ವಿಧಾನಸಭೆ ಚುನಾವಣೆಯಲ್ಲಿ  ಬಿಜೆಪಿ ಮಿಷನ್-150 ಗುರಿ ಸಾಧಿಸುವತ್ತ  ವರಿಷ್ಠರು ತಯಾರಿ ಚುರುಕುಗೊಳಿಸಿದ್ದಾರೆ. ಸರ್ಕಾರದ ವರ್ಚಸ್ಸು ವೃದ್ಧಿ ಜತೆಗೆ ಪಕ್ಷದಲ್ಲೂ ಹುಮ್ಮಸ್ಸು ತುಂಬಿ, ರಣವ್ಯೂಹ ಜಾರಿಗೊಳಿಸುವ ಚಾಕಚಕ್ಯತೆಯ ತಂಡ ರಚನೆಗೆ ಮುಂದಾಗಿದ್ದಾರೆ.ಕೇಂದ್ರದ ಕೃಷಿ ಹಾಗೂ ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿ ಹೊಸ ತಂಡವನ್ನು ರಣಾಂಗಣಕ್ಕೆ ಇಳಿಸುವ ಚಿಂತನೆ ಮುಂದಾಗಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಕೇಂದ್ರ ಸಚಿವೆ  ಶೋಭಾ ಕರಂದ್ಲಾಜೆ ಬೆನ್ನಿಗೆ ಮಹಿಳಾ  ಒಕ್ಕಲಿಗ ಸಮುದಾಯ ಜೊತೆಗೆ  ಸಚಿವರಾಗಿ ಪಳಗಿದವರು ಎಂಬುದು ವಿಶ್ವಾಸ ಹೆಚ್ಚಿಸಿದೆ. ಜತೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಂಪೂರ್ಣ ಸಾಥ್ ನೀಡುವ ಮುಂದಾಲೋಚನೆ ವರಿಷ್ಠರದು. ಈ ಹಿಂದೆ ಬಿಎಸ್​ವೈ ಸಂಪುಟದ ಸದಸ್ಯೆಯಾಗಿ ಕೆಲಸ ಮಾಡಿದವರಷ್ಟೇ ಅಲ್ಲ, 2008ರ ಚುನಾವಣೆ ಪೂರ್ವ ರಾಜ್ಯ ಪ್ರವಾಸದಲ್ಲಿ ಹೆಗಲುಕೊಟ್ಟು ಶ್ರಮಿಸಿದವರು. ಇದಕ್ಕಾಗಿ ಶೋಭದ್ಲಾಜೆ ಹೆಸರು ರೇಸ್ ನಲ್ಲಿದೆ‌. ಎಲ್ಲಾದಕ್ಕೂ ಕಾದು ನೋಡಬೇಕಿದೆ.

[t4b-ticker]

You May Also Like

More From Author

+ There are no comments

Add yours