ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ..

 

 

 

 


ಚಿತ್ರದುರ್ಗ,ಜನವರಿ22:
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಸ್ಥಳೀಯ ಮತ್ತು ಮಿಕ್ಕುಳಿದ ವೃಂದಗಳ (ಸಿವಿಲ್) (ಪುರುಷ, ಮಹಿಳಾ ಮತ್ತು ಸೇವೆಯಲ್ಲಿರುವವರು) ಒಟ್ಟು 545 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಫೆಬ್ರವರಿ 22 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅರ್ಹತಾ  ಷರತ್ತುಗಳನಮ್ನು ಪೂರೈಸುವ ಅಭ್ಯರ್ಥಿಗಳು ಆನ್‍ಲೈನ್ ಮುಖಾಂತರ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು. ಖಾಲಿ ಹುದ್ದೆಗಳ ವರ್ಗೀಕರಣ ಹಾಗೂ ಅರ್ಹತಾ ಷರತ್ತುಗಳಿಗೆ ಅಧಿಕೃತ ವೆಬ್‍ಸೈಟ್ www.recruitment.ksp.gov.in ನಲ್ಲಿನ ಅಧಿಸೂಚನೆಯನ್ನು ಗಮನಿಸಬಹುದು.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜನವರಿ 22ರಿಂದ ಪ್ರಾರಂಭವಾಗಿದ್ದು, ಫೆಬ್ರವರಿ 22 ಕೊನೆಯ ದಿನವಾಗಿದೆ. ಅಧಿಕೃತ ಬ್ಯಾಂಕ್ ಶಾಖೆಗಳ, ಅಂಚೆ ಕಚೇರಿಯ ಕಚೇರಿ ವೇಳೆಯಲ್ಲಿ ಶುಲ್ಕವನ್ನು ಪಾವತಿಸಲು ಫೆಬ್ರವರಿ 24 ಕೊನೆಯ ದಿನವಾಗಿದೆ. ಸಾಮಾನ್ಯ ವರ್ಗ, ಪ್ರವರ್ಗ2(ಎ), 2(ಬಿ), 3(ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ ರೂ.500/-, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.250/- ಶುಲ್ಕ ಪಾವತಿಸಬೇಕು.
ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಅಧಿಕೃತ ವೆಬ್‍ಸೈಟ್ www.recruitment.ksp.gov.in ನಲ್ಲಿ ನೀಡಲಾಗಿರುವ ಅಧಿಸೂಚನೆಯಲ್ಲಿನ ಸೂಚನೆಗಳನ್ನು ಜಾಗರೂಕತೆಯಿಂದ ಓದಿಕೊಂಡು ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಜಿ.ರಾಧಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
=======
 

 

 

[t4b-ticker]

You May Also Like

More From Author

+ There are no comments

Add yours