ಶಾಸಕ ಚಂದ್ರಪ್ಪ ಅಮಾನತ್ತು ಬೆದರಿಕೆಯಿಂದ ಡೆತ್ ನೋಟ್ ಬರೆದು ಸರ್ಕಾರಿ ನೌಕರ ಆತ್ಮಹತ್ಯೆ

 

 

 

 

ಚಿತ್ರದುರ್ಗ: ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಕೆಲಸದಿಂದ ಅಮಾನತ್ತು ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕ ತಿಪ್ಪೇಸ್ವಾಮಿ ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸದುರ್ಗದ ಜಾನಕಲ್ಲಿನ ತನ್ನ ಮಗಳ ಮನೆಯ ಬಳಿ ವಿಷ ಸೇವಿಸಿ ಸಾವಿಗೀಡಾಗಿದ್ದಾರೆ.

 

 

‘ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ನನ್ನನ್ನು ಅಮಾನತ್ತು ಮಾಡುವ ಬೆದರಿಕೆ ಹಾಕಿದ್ದರು’ ಎಂದು ಡೆತ್‌ ನೋಟ್‌ನಲ್ಲಿ ಉಲ್ಲೇಖಿಸಿರುವ ತಿಪ್ಪೇಸ್ವಾಮಿ, ನನ್ನ ಸಾವಿಗೆ ಶಾಸಕ ಎಂ. ಚಂದ್ರಪ್ಪ ನೇರ ಕಾರಣ. ಗ್ರಾಮ ಪಂಚಾಯತಿಯಲ್ಲಿ ಕೆಲವರು ನನಗೆ ಕಿರುಕುಳ ನೀಡುತ್ತಿದ್ದರು. ಎಂದು ಉಲ್ಲೇಖಿಸಿದ್ದಾರೆ. ಶಾಸಕರು ಮತ್ತು ತನ್ನ ಸಹೋದ್ಯೋಗಿಗಳ ಕಿರುಕುಳವೇ ತಿಪ್ಪೇಸ್ವಾಮಿ ಆತ್ಮಹತ್ಯೆಗೆ ಕಾರಣ ಎನ್ನಲಾಗಿದ್ದು, ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

[t4b-ticker]

You May Also Like

More From Author

+ There are no comments

Add yours