ಶಿಕ್ಷಕ ವೃತ್ತಿ ತುಂಬಾ ಅಮೂಲ್ಯವಾದದ್ದು:ಕೆ ಎಸ್ ದೇವರಾಜ್

 

 

 

 

ಹಿರಿಯೂರು.ಡಿ :10: ಶಿಕ್ಷಕ ವೃತ್ತಿ ತುಂಬಾ ಅಮೂಲ್ಯವಾದದ್ದು ದೇಶದ ಭಾವಿ ಪ್ರಜೆಗಳನ್ನು ತಯಾರು ಮಾಡುವುದು ಶಿಕ್ಷಕರು ಎಂದು ಮುಖ್ಯ ಶಿಕ್ಷಕ ಕೆ ಎಸ್ ದೇವರಾಜ್ ಹೇಳಿದರು. ನಗರದ ನೆಹರು ಮೈದಾನ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ತಿಂಗಳ ಕಾಲ ತರಬೇತಿಗಾಗಿ ಆಗಮಿಸಿದ್ದ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಕ್ಕಳಿಗೆ ದಾರಿದೀಪವಾಗುವ ಶಿಕ್ಷಕ ಹುದ್ದೆಯನ್ನು ನೀವು ಆಯ್ಕೆ ಮಾಡಿಕೊಂಡಿದ್ದೀರಿ ನಿಮ್ಮ ಭವಿಷ್ಯ ಉತ್ತಮವಾಗಿರಲಿ ಎಂದು ಶುಭ ಕೋರಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆ ಟಿ ರುದ್ರಮನಿ ಯವರು ಮಾತನಾಡಿ ಪ್ರಶಿಕ್ಷಣಾರ್ಥಿಗಳು ಉತ್ತಮ ಶಿಕ್ಷಕರಾಗಿ ಹೊರ ಹೊಮ್ಮಿ ನಿಮ್ಮ ಮುಂದಿನ ಶಿಕ್ಷಣ ಹಾಗೂ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು. ಶಿಕ್ಷಕರಾದ ವೆಂಕಟೇಶ್, ಶಿಲ್ಪ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗಿರೀಶ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಾದ ಮನು ಚೈತ್ರ ರಂಜಿತ ಹಾಗೂ ರಾಜೇಶ್ವರಿ ಯವರು ಒಂದು ತಿಂಗಳ ಕಾಲ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿ ತರಬೇತಿ ಪಡೆದು ಹಿಂತಿರುಗುತ್ತಿರುವುದಕ್ಕೆ ಬೀಳ್ಕೊಡುಗೆ ನೀಡಲಾಯಿತು. ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ನಂತರ ಎಲ್ಲರಿಗೂ ಸಿಹಿ ವಿತರಣೆ ಮಾಡಲಾಯಿತು.

 

 

[t4b-ticker]

You May Also Like

More From Author

+ There are no comments

Add yours