ನ.15ರಂದು ವಿದ್ಯುತ್ ವ್ಯತ್ಯಯ ಎಲ್ಲೆಲ್ಲಿ ಪವರ್ ಕಟ್

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ನ.14:
ತುರುವನೂರು ಮತ್ತು ಮಾಡನಾಯನಹಳ್ಳಿ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಿರ್ವಹಿಸುವುದರಿಂದ ಇದೇ ನವೆಂಬರ್ 15ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ತುರುವನೂರು ಮತ್ತು ಮಾಡನಾಯಕನಹಳ್ಳಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳಿಂದ ವಿದ್ಯುತ್ ಸರಬರಾಜು ಆಗುವ ಎಲ್ಲಾ 11 ಕೆ.ವಿ ಮಾರ್ಗಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ತುರುವನೂರಿನಿಂದ ವಿದ್ಯುತ್ ಸರಬರಾಜು ಆಗುವ 66 ಕೆವಿ ಹಾಗೂ 11 ಕೆವಿ ಮಾರ್ಗಗಳಾದ ಬೊಮ್ಮಕ್ಕನಹಳ್ಳಿ, ಕೂನಬೇವು, ಅವಳೇನಹಳ್ಳಿ, ದೊಡ್ಡಗಟ್ಟ, ತುರುವನೂರು ಎನ್‍ಜೆವೈ, ಕರಿಯಮ್ಮನಹಟ್ಟಿ, ಕೋಟೆಹಟ್ಟಿ, ಹುಣಸೆಕಟ್ಟೆ, ಪೇಲಾರಹಟ್ಟಿ ಮತ್ತು ಎಲ್ಲಾ 11 ಕೆವಿ ಮಾರ್ಗಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಮಾಡನಾಯನಹಳ್ಳಿಯಿಂದ ವಿದ್ಯುತ್ ಸರಬರಾಜು ಆಗುವ 66 ಕೆವಿ ಹಾಗೂ 11 ಕೆವಿ ಮಾರ್ಗಗಳಾದ ಮಾಡನಾಯಕನಹಳ್ಳಿ, ಸಿ.ಜಿ.ಹಳ್ಳಿ, ಮುದ್ದಾಪುರ, ಯಾಲವರಹಟ್ಟಿ, ಹೊಸಗೊಲ್ಲರಹಟ್ಟಿ, ರಾಯನಹಳ್ಳಿ, ಸೂರನಹಳ್ಳಿ ಮತ್ತು ಎಲ್ಲಾ 11 ಕೆವಿ ಮಾರ್ಗಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours