ಬಸ್ತಿಹಳ್ಳಿ ಶಾಲೆಗೆ ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಭೇಟಿ ನೀಡಿ ಶೈಕ್ಷಣಿಕ ಪ್ರಗತಿ ಪರಿಶೀಲನೆ

 

 

 

 

ಚಿತ್ರದುರ್ಗ: ತಾಲೂಕಿನ ಹುಲ್ಲೇಹಾಳ್ ಬಸ್ತಿಹಳ್ಳಿ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಂದು ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ  ಭೇಟಿ ನೀಡಿ ಮಕ್ಕಳ‌ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಿದರು.

 

 

ಮಕ್ಕಳ ಪಾಠದ ಪ್ರಶ್ನೆಗಳು,‌ಮಗ್ಗಿ, ಲೆಕ್ಕ ಬೋರ್ಡ್ ಮೇಲೆ ಹಾಕುವ ಮೂಲಕ ಮಕ್ಕಳ ಬುದ್ದಿ ಶಕ್ತಿ, ಶೈಕ್ಷಣಿಕ  ಗುಣಮಟ್ಟ ಪರೀಕ್ಷಿಸಿದರು. ಶಾಲೆಯ ವಾತಾವರಣ ಎಲ್ಲಾವನ್ನು ಖುದ್ದು  ವಿಕ್ಷಿಸಿದರು. ಮಕ್ಕಳು  ತಹಶೀಲ್ದಾರ್   ಪ್ರಶ್ನೆಗಳಿಗೆ ಪಠ ಪಠನೇ ಉತ್ತರಿಸಿದರು. ಮಗ್ಗಿಯನ್ನು ಮಧ್ಯದಲ್ಲಿ ಕೇಳಿತರು ಟಕ್ ಅಂತ ಹೇಳಿದ್ದಕ್ಕೆ ತಹಶೀಲ್ದಾರ್ ಅವರು ಸಂತಸ ವ್ಯಕ್ತಪಡಿಸಿದರು. ಮಕ್ಕಳಿಗೆ ಲೇಖನಿ  (ಪೆನ್ನು),  ಸಿಹಿಯನ್ನು ನೀಡಿವ ಮೂಲಕ ಪ್ರೋತ್ಸಾಹ ನೀಡಿದರು. ಮಕ್ಕಳ ಎಂದರೆ ವಿಶೇಷ ಪ್ರೀತಿ ತಹಶೀಲ್ದಾರ್ ಅವರಿಗೆ ಎಂಬುದು ತಿಳಿಯುತ್ತದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಮಾತನಾಡಿ ಮಕ್ಕಳು ತುಂಬಾ ಚುರುಕಾಗಿದ್ದಾರೆ. ಮೂರು ಬಾರಿ ಈ ಶಾಲೆಗೆ ಭೇಟಿ ನೀಡಿದ್ದು ‌ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮವಾಗಿದೆ. ಶಿಕ್ಷಕರು ವಿಶೇಷ ಆಸಕ್ತಿ ವಹಿಸಿದರೆ ಮಕ್ಕಳಿಗೆ ಉತ್ತಮ ಬುನಾದಿ ದೊರಕುತ್ತದೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಿಂತ ಯಾವುದರಲ್ಲೂ ಕಡಿಮೆ ಇಲ್ಲ.ಸರ್ಕಾರಿ ಶಾಲೆ ಮಕ್ಕಳಿಗೆ ಆತ್ಮವಿಶ್ವಾಸ ಹೆಚ್ಚು ಎಂದರು. ಶಿಕ್ಷಕರು  ಇನ್ನು ಹೆಚ್ಚಿನ ಒತ್ತನ್ನು ನೀಡಿ ಎಂದು ಸಲಹೆ ನೀಡಿದರು.
[t4b-ticker]

You May Also Like

More From Author

+ There are no comments

Add yours