ತಪ್ಪಗೊಂಡನಹಳ್ಳಿ ಹೊಸ ಬಡಾವಣೆಗೆ 20 ಎಕರೆ ಜಮೀನು‌ ಕಾಯ್ದಿರಿಸಲು ಕ್ರಮ: ಎನ್‌.ರಘುಮೂರ್ತಿ

 

 

 

 

ಚಳ್ಳಕೆರೆ: ತಪ್ಪಗೊಂಡನಹಳ್ಳಿ ಗ್ರಾಮದ ಕೆರೆಯ ಭರ್ತಿಯಾದ ಹಿನ್ನೆಲೆಯಲ್ಲಿ ಮತ್ತು ಅತಿವೃಷ್ಟಿಯಿಂದ ಈ ಗ್ರಾಮದ ವಾಸದ ಮನೆಗಳು ನೀರು ನುಗ್ಗಿ ವಾಸಿಸಲು ಅನಾನುಕೂಲವಾದ ಹಿನ್ನೆಲೆಯಲ್ಲಿ ಸದರಿ ಪ್ರದೇಶಕ್ಕೆ ಭೇಟಿ ನೀಡಿ ತಹಶೀಲ್ದಾರ್ ಎನ್. ರಘುಮೂರ್ತಿ ಪರಿಶೀಲಿಸಿದರು‌.

ಈ‌ ಸಂದರ್ಭದಲ್ಲಿ ಮಾತನಾಡಿ   ಸಚಿವರ ಆಸೆಯಂತೆ ಈ ಗ್ರಾಮಕ್ಕೆ ವ್ಯವಸ್ಥಿತವಾಗಿ ಹೊಸ ಬಡಾವಣೆ ನಿರ್ಮಾಣಕ್ಕೆ ಸರ್ವೇ ನಂಬರ್ 24ರಲ್ಲಿ 20 ಎಕರೆ ಸರ್ಕಾರಿ ಜಮೀನನ್ನು ಪಂಚಾಯಿತಿಗೆ ಮೀಸಲಿರಿಸಲು ಎರಡು ದಿನಗಳೊಳಗಾಗಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.

 

 

 

ಪ್ರತಿ ವರ್ಷ ಈ ಕೆರೆ ಬರ್ತಿ ಆದಾಗಲೆಲ್ಲ ಇಂತಹದೇ ಕಷ್ಟವನ್ನು ಈ ಗ್ರಾಮದ ಜನರು ಅನುಭವಿಸುತ್ತಾರೆ. ಈ ಗ್ರಾಮದ ಜನರು ಈ ಸಮಸ್ಯೆಯ ಕುರಿತಾದ ಮನವಿಯನ್ನು  ಸಾರಿಗೆ ಸಚಿವರಿಗೆ ಸಲ್ಲಿಸಿದ್ದಾರೆ. ಸಾರಿಗೆ ಸಚಿವರು ಈ ಅನಾನುಕೂಲಕ್ಕೆ ಸಂಬಂಧಿಸಿದಂತೆ ಶಾಶ್ವತವಾದ ಪರಿಹಾರ ಕಲ್ಪಿಸುವಂತೆ ಸೂಚಿಸಿದ್ದಾರೆ. ಅದರಂತೆ  ಇಡೀ ಗ್ರಾಮದ ಬಡಾವಣೆಗೆ 20 ಎಕರೆ ಜಾಗವನ್ನು ಗುರುತಿಸಲಾಗಿದೆ. ಈ ಗ್ರಾಮದಲ್ಲಿ ಇರುವಂತಹ ಸಾರ್ವಜನಿಕರ ಭೌತಿ ಖಾತೆ ಪೋಡಿ ದಾರಿ ಸ್ಮಶಾನ ಪಿಂಚಣಿ ಮುಂತಾದ ಕಂದಾಯ ಇಲಾಖೆಯ ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸುವಂತೆ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿ ಮತ್ತು ರಾಜಸ್ವ ನಿರೀಕ್ಷೆಕರಿಗೆ ಸೂಚಿಸಲಾಗಿದೆ.

ಇದೇ ಸರ್ವೆ ನಂಬರ್ ನಲ್ಲಿ ರೈತರ ಜಮೀನುಗಳಿಗೆ ನಡೆದಾಡಲು ದಾರಿ ಅಡ್ಡಿಪಡಿಸುತ್ತಿರುವುದಾಗಿ ದೂರು ಬಂದಿದ್ದು ಇದು ಸರ್ಕಾರಿ ಸರ್ವೇ ನಂಬರ್ ನಲ್ಲಿ ಮುಂಜೂರಾಗಿರುವ ಜಮೀನ್ ಆಗಿದ್ದು  ಇಲ್ಲಿ ಯಾರೇ ಆಗಲಿ ಓಡಾಡಲು ದಾರಿಗೆ ನಿರ್ಬಂಧ ಏರುವಂತಿಲ್ಲ. ತಕ್ಷಣವೇ ಪಂಚಾಯಿತಿ ವತಿಯಿಂದ ಎನ್ಆರ್‍ಐಜಿ ಹಣದಲ್ಲಿ ರಸ್ತೆ ಅಭಿವೃದ್ಧಿಪಡಿಸಲು ಹಾಜರಿದ್ದ ಪಂಚಾಯಿತಿ ಸದಸ್ಯರಿಗೆ ಸೂಚನೆ ನೀಡಿದರು. ಹಾಗೂ ಇಂತಹ ಯಾವುದೇ ಸಮಸ್ಯೆಗಳಿದ್ದಲ್ಲಿ ತಕ್ಷಣ ಇದಕ್ಕೆ ಸಂಬಂಧಿಸಿದ ಅರ್ಜಿ ಸಲ್ಲಿಸಲು ಸ್ಥಳೀಯ ಪಂಚಾಯಿತಿಯ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು. ಬೀದಿ ಮತ್ತು ಮನೆಗಳಿಗೆ ನೀರು ತುಂಬಿರುವುದರಿಂದ ನೀರು ಕಡಿಮೆ ಆಗುವ ತನಕ ಇಡೀ ತಾಲೂಕ ಆಡಳಿತ ಗ್ರಾಮದ ಜೊತೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಪಂಚಾಯತಿ ಸದಸ್ಯರುಗಳಾದ ಜಗಳೂರಪ್ಪ ರಂಗನಾಥ ತಿಪ್ಪೇಶಪ್ಪ ಮತ್ತು ಎಲ್ಲ ಗ್ರಾಮಸ್ಥರು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours