ಮದಕರಿನಾಯಕ ದುರ್ಗದ ಕೆಚ್ಚೆದೆಯ ವೀರ:ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ:ಕಾಮಗೇತಿ ವಂಶಕ್ಕೆ ಸೇರಿದ ಚಿತ್ರದುರ್ಗದ ಸಂಸ್ಥಾನದ ದೊರೆ  ಮದಿಸಿದ ಆನೆಯನ್ನು ಪಳಗಿಸಿ ದೊರೆ ರಾಜವೀರ ಮದಕರಿ ನಾಯಕ ಮದಕರಿ ಎಂದು  ಇತಿಹಾಸ ಹೇಳುತ್ತದೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು.

ಚಳ್ಳಕೆರೆ ನಗರದ ವಾಲ್ಮೀಕಿ ವೃತ್ತದಲ್ಲಿ ಇಂದು ವಾಲ್ಮೀಕಿ ಸಮುದಾಯ ಹಾಗೂ ವಿವಿಧ ಸಂಘಟನೆಗಳಿಂದ ಹಮ್ಮಿಕೊಂಡಿದ ಮದಕರಿ ನಾಯಕ ಜಯಂತಿ ಕಾರ್ಯಕ್ರ ದಲ್ಲಿ ಮದಕರಿ ನಾಯಕ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಮಾತನಾಡಿದರು.

 

 

ಚಿತ್ರದುರ್ಗದ ‌ಮದಕರಿನಾಯಕ ಧೀರ ಮತ್ತು  ಶೂರಾ ಆಗಿದ್ದನು.  ಮದಕರಿ ನಾಯಕನ ಕಾಲದಲ್ಲಿ ಕೆರೆ ಕಟ್ಟೆಗಳನ್ನು ಕಟ್ಟಿಸಿ ಜನಪರ ಕೆಲಸಗಳಿಗೆ ಹೆಸರುವಾಸಿಯಾಗಿದ್ದನು.

ಮತ್ತಿ ಮದಕರಿಯ ಗೋವುಗಳನ್ನು ಹಿಡಿದ. ರಾಜಮಾತೆಯು ಶತ್ರುಗಳನ್ನು ನಿರ್ನಾಮ ಮಾಡಿ ಗೋವುಗಳನ್ನು ಬಿಡಿಸಿಕೊಂಡು ಬರುವಂತೆ ಆಜ್ಞೆಯಿತ್ತರು. ಕೇವಲ ಹನ್ನೆರಡು ವಯಸ್ಸಿನ ಬಾಲಕ ಸೇನೆಯನ್ನು ಮುನ್ನೆಡೆಸಿ ಶತ್ರುಗಳನ್ನು ಸದೆಬಡಿದು ಗೋವುಗಳನ್ನು ಬಿಡಿಸಿಕೊಂಡು ಬಂದ ಕೀರ್ತಿ ಮದಕರಿಗೆ ಸಲ್ಲುತ್ತದೆ. ಮುಂದೆ ಬಾಲಕ ವಜ್ರಕಾಯನಾಗಿ , ತೇಜಸ್ವಿಯಾಗಿ ಬೆಳೆದು ನಿಲ್ಲುತ್ತಾರೆ.ಶೌರ್ಯ ಪರಾಕ್ರಮಕ್ಕೆ ಹೆಸರುವಾಸಿಯಾದ ದೊರೆ ಮದಕರಿ ನಾಯಕ 77 ಪಾಳೇಗಾರರಲ್ಲಿ ಬಲಿಷ್ಠ ನಾಯಕ, ಮದಕರಿ ನಾಯಕ ಚಿತ್ರದುರ್ಗದ ನಾಯಕರಲ್ಲಿ ಕಳೆಯ ನಾಯಕರಾಗಿದ್ದ  ಚಿತ್ರದುರ್ಗದ ಸಿಂಹಾಸವನ್ನು ಅಲಂಕರಿಸಿದಾಗ 12 ವರ್ಷ ವಯಸ್ಸು ನಾಗಿದ್ದರು ಚಿತ್ರದುರ್ಗದ ವೈರಿಗಳು ಮತ್ತೊಮ್ಮೆ ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಬೇಡರ ಸಮುದಾಯ ತಮ್ಮ ನಾಯಕನಿಗೆ ನಿಷ್ಠಾವಂತರಾಗಿ ಉಳಿದ ಚಿತ್ರದುರ್ಗ ಕೋಟೆಯನ್ನು ಕೊಟೆಯನ್ನು ರಕ್ಷಿಸುತ್ತಾರೆ. ಮದಕರಿ ನಾಯಕರು ಕೆರೆಕಟ್ಟೆ ಮಠ ಮಂದಿರಗಳನ್ನು ನಿರ್ಮಿಸಿ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದರು. ನಾಯಕರನ್ನು ಜಾತಿ ಧರ್ಮಕ್ಕೆ ಸೀಮಿತಗೊಳಿಸದೆ ಅವರು ಮಾಡಿದಂತಹ ಕಾರ್ಯಗಳನ್ನು ಸ್ಮರಿಸಬೇಕು. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಟಿಜೆ ವೆಂಕಟೇಶ್ ,ಮಾಜಿ ಪುರಸಭೆ ಸದಸ್ಯ ಚೇತನ್ ಕುಮಾರ್ ಕುಮ್ಮಿ, ಮುಖಂಡರಾದ ಶಿವಣ್ಣ ಶ್ರೀಧರಾಚಾರ್, ಪ್ರಶಾಂತ ನಾಯಕ್, ಅಮ್ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ಹಾಗೂ ಸಮುದಾಯದ ಮುಖಂಡ ಮದಕರಿ ಪಾಪಣ್ಣ, ಶಿವರಾಜ್ ಹರೀಶ್, ಬುಜ್ಜಿ ಮಂಜುನಾಥ್, ಪಾಪಣ್ಣ ಸೇರಿದಂತೆ ವಿವಿಧ ಸಮುದಾಯದ ಮುಖಂಡರು ನಾಯಕ ಸಮುದಾಯದ ಮುಖಂಡರು ಇದ್ದರು

[t4b-ticker]

You May Also Like

More From Author

+ There are no comments

Add yours