ದೇಶ ಕಟ್ಟುವ ಪ್ರಜೆಗಳನ್ನು ರೂಪಿಸುವ ಶಿಕ್ಷಕರು, ದೇಶ ಕಾಯುವ ಸೈನಿಕರ ಜೀವನ ಅತಂತ್ರ:ಬಿ .ಪಿ.ತಿಪ್ಪೇಸ್ವಾಮಿ

 

 

 

 

ಚಳ್ಳಕೆರೆ-27 : ದೇಶ ಕಟ್ಟುವ ಪ್ರಜೆಗಳನ್ನು ರೂಪಿಸುವ ಶಿಕ್ಷಕರು ಹಾಗೂ ದೇಶವನ್ನು ಕಾಯುವ ಸೈನಿಕರ ಜೀವನವನ್ನು ಅತಂತ್ರದಲ್ಲಿ ಕೆಡವುದು ಯಾವುದೇ ರಾಷ್ಟ್ರಕ್ಕೆ ಶೋಭೆ ತರುವಂತಹದ್ದಲ್ಲವೆಂದು ಚಿತ್ರದುರ್ಗ ಜಿಲ್ಲಾ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಗೌರವಾಧ್ಯಕ್ಷ ಬಿ .ಪಿ.ತಿಪ್ಪೇಸ್ವಾಮಿ ಹೇಳಿದರು .

 

 

ನಗರದ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರು ಗಿರಿಯಮ್ಮ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತ‌ನಾಡಿದರು .
ಕಾಲ್ಪನಿಕ ವೇತನ ,
ನಿಶ್ಚಿತ ಪಿಂಚಣಿ ಯೋಜನೆ ,
ಆರೋಗ್ಯ ಸಂಜೀವಿನಿ “ಯೋಜನೆಗಳನ್ನು ಅನುದಾನಿತ ನೌಕರರಿಗು ನೀಡಬೇಕೆಂಬ ಬೇಡಿಕೆಗಳುನಿರಂತರವಾಗಿ ನಡೆದರು ಸರ್ಕಾರಗಳು ನೀಡದೆ ಶಿಕ್ಷಕರನ್ನು ನಿರ್ಲಕ್ಷಿಸುವ ಯಾವುದೇ ಪ್ರಬುದ್ಧ ನಾಯಕತ್ವ ಭವಿಷ್ಯದಲ್ಲಿ ತುಂಬಾ ಬೆಲೆ ತೆರಬೇಕಾಗಬಹುದು ಎಂದರು.
ಜಿಲ್ಲಾ ಅಧ್ಯಕ್ಷ ಜಿ. ಎಸ್. ತಿಪ್ಪೇಸ್ವಾಮಿ, ಅಕ್ಟೋಬರ್ 6ರಿಂದ ಆರಂಭವಾಗುವ ಕಾಲ್ನಡಿಗೆ ಜಾಥದ ಬಗ್ಗೆ ವಿವರಣೆ ನೀಡಿದರು .
ಚಿತ್ರದುರ್ಗ ಜಿಲ್ಲಾ ಪ್ರಾಚಾರ್ಯ ಸಂಘದ ಅಧ್ಯಕ್ಷ ಹಾಗೂ ಪ್ರಾಂಶುಪಾಲ ದುರ್ಗೇಶ್ ಶತ್ರು, ಜಿಲ್ಲಾ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್. ಮಲ್ಲೇಶ್, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಇ.ನಾಗೇಂದ್ರಪ್ಪ .
ಜಿಲ್ಲಾಪ್ರಾಚಾರ್ಯರ ಸಂಘದ ಪ್ರಾಂಶುಪಾಲ ದುರುಗೇಶ್, ಚಳ್ಳಕೆರೆ ತಾಲ್ಲೂಕು ಅನುದಾನಿತ ಶಾಲಾ ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಹಿರಣ್ಣಯ್ಯ ಮುಂತಾದವರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours