ಸಿ.ಸಿ.ರಸ್ತೆ ಕಾಮಗಾರಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ

 

 

 

 

ಚಿತ್ರದುರ್ಗ:ಸೆ:21: ಯಾರು ಆತಂಕ ಪಡಬೇಡಿ , ಹಂತ ಹಂತವಾಗಿ ಎಲ್ಲಾ ಅರ್ಹರಿಗೆ ಹಕ್ಕು ಪತ್ರ ನೀಡಲಾಗುತ್ತದೆ ಮತ್ತು ನಗರದ ಎಲ್ಲಾ ರಸ್ತೆಗಳನ್ನು ಅನುದಾನ ಅನುಗುಣವಾಗಿ ಮಾಡಲಾಗುತ್ತದೆ ಎಂದು‌ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

 

 

ನಗರದ ಧವಳಗಿರಿ ಬಡಾವಣೆ ಅರವಿಂದ್‌ ಗಾರ್ಮೆಂಟ್ಸ್ ಪಕ್ಕ ಸಿ.ಸಿ.ರಸ್ತೆ ಕಾಮಗಾರಿಗೆ  ಮತ್ತು ತಾಲೂಕಿನ ಹೊಸಕಲ್ಲಹಳ್ಳಿ ಗ್ರಾಮದಲ್ಲಿ ನೂತನ ಸಿ.ಸಿ.ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮೂಲಕ ಚಾಲನೆ ನೀಡಿ ಮಾತನಾಡಿದರು.
ಧವಳಗಿರಿ ಬಡಾವಣೆಯಲ್ಲಿ ಎರಡರಿಂದ ಮೂರು ಬಡಾವಣೆ  ನಗರಾಭಿವೃದ್ಧಿ ಪ್ರಾಧಿಕಾರ 14 ಲಕ್ಷ ಅನುದಾನದಲ್ಲಿ  ಸಿ.ಸಿ.ರಸ್ತೆ ಮಾಡಲಾಗುತ್ತದೆ. ಹಲವಾರು ದಿನಗಳಿಂದ ಎರಡ್ಮೂರು ಬಡಾವಣೆಯ ಜನರು ಮನವಿ ಮಾಡಿದ್ದರು ಅನುದಾನ ನೋಡಿಕೊಂಡು ನೀಡುತ್ತೇನೆ ಎಂದಿದ್ದ ಅದರಂತೆ ಒದಗಿಸಿದ್ದೇನೆ ಎಂದರು.
ನಗರದಲ್ಲಿ  ಹಕ್ಕು ಪತ್ರ  ಮತ್ತು ಖಾತೆಗೆ ಬಗ್ಗೆ ಯಾರು ಅನುಮಾನ ಇಟ್ಟುಕೊಳ್ಳಬೇಡಿ. ನಗರದ ಅರ್ಹ ಎಲ್ಲಾ ಫಲಾನುಭವಿಗಳಿಗೆ ಹಕ್ಕು ಪತ್ರ ಮತ್ತು ಖಾತೆ ಮಾಡಿ ಕೊಡುತ್ತಾರೆ. ನಗರದ ವ್ಯಾಪ್ತಿ ದೊಡ್ಡದಿದ್ದು ಒಂದೊಂದಾಗಿ ವಾರ್ಡ್ ಪ್ರಕಾರ ನೀಡುತ್ತಾರೆ. ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿ ಆಯ್ಕೆಯಾದವರು ನಗರಸಭೆಗೆ ವಂತಿಕೆ ಹಣ ಕಟ್ಟಲು ಒಮ್ಮೆ ಆಗದಿದ್ದರೆ ಸ್ವಲ್ಪ ಸಮಯ ತೆಗೆದುಕೊಂಡ 3-4 ತಿಂಗಳಲ್ಲಿ ಕಟ್ಟಿದರೆ ಸರ್ಕಾರದ ಮಾನದಂಡ ಪ್ರಕಾರ ಮನೆ ನಿರ್ಮಾಣ ಮಾಡಿಕೊಡಲಾಗುತ್ತದೆ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಬಾಲಮ್ಮ,  ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರಾದ ಸೋಮಶೇಖರ್, ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ನಾಗರಾಜ್ ಮತ್ತು ಮುಖಂಡರು ಇದ್ದರು.
ಹೊಸಕಲ್ಲಹಳ್ಳಿ ಗ್ರಾಮದಲ್ಲಿ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ
ಹೊಲಕಲ್ಲಹಳ್ಳಿ ಗ್ರಾಮದಲ್ಲಿ  ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದಿಂದ 25 ಲಕ್ಷ ವೆಚ್ಚದಲ್ಲಿ ಸಿ.ಸಿ‌ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ರಸ್ತೆ ಮಾಡವುದಕ್ಕಿಂರ ಮೊದಲು ಮನೆಗಳ ಮತ್ತು ಗ್ರಾಮ ಪಂಚಾಯತಿಯ  ನೀರಿನ ಪೈಪ್ ಲೈನ್ ಗಳನ್ನು  ಸೇರಿ ಯಾವುದೇ  ಕೆಲಸ ಇದ್ದರು ಸಿ.ಸಿ.ರಸ್ತೆ ನಿರ್ಮಾಣಕ್ಕಿಂತ ಮೊದಲು ಮಾಡಿಕೊಳ್ಳಿ ಎಂದು‌ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ನಿಜಲಿಂಗಪ್ಪ, ಶ್ರೀಧರ್ ಮುಖಂಡರಾದ ಸುನೀಲ್, ಚಂದ್ರಣ್ಣ, ತಿಪ್ಪೇಸ್ವಾಮಿ, ಓಬಳೇಶ್.ಅಂಜನ ಮತ್ತು ಗ್ರಾಮಸ್ಥರು ಹಾಜರಿದ್ದರು.
[t4b-ticker]

You May Also Like

More From Author

+ There are no comments

Add yours