ಪಿಂಚಣಿ ವಂಚಿತ 5790 ಜನರಿಗೆ ಪಿಂಚಣಿ ಭಾಗ್ಯ,ಜನಸ್ನೇಹಿ ಆಡಳಿತ ಮೂಲಕ ಭರವಸೆ ಹೆಜ್ಜೆಯಿಟ್ಟ ತಹಶೀಲ್ದಾರ್ ಸತ್ಯನಾರಾಯಣ

 

 

 

 

ವಿಶೇಷ ವರದಿ 

 

 

ಚಿತ್ರದುರ್ಗ:ಪ್ರತಿಯೊಬ್ಬ ಅಧಿಕಾರಿ ತನ್ನದೇ ಆದ  ವ್ಯಾಪ್ತಿಯಲ್ಲಿ ಬರುವ ಇಲಾಖೆಯ ಕೆಲಸಗಳನ್ನು ಜನಪರವಾಗಿ ಮಾಡಿದರೆ ಹೆಚ್ಚು ಪರಿಣಾಮಕಾರಿ ಆಗುತ್ತದೆ. ಆದರೆ ಇಂತಹ ಸಾರ್ವಜನಿಕ ಕುಂದು ಕೊರತೆಗಳ ಸಮಸ್ಯೆ ಬಗೆಹರಿಸುವ ಸಾಲಿ‌ನಲ್ಲಿ ಬೆರಳೆಣಿಕೆಯಷ್ಟು ಅಧಿಕಾರಿಗಳನ್ನು ಮಾತ್ರ ನಿಲ್ಲುತ್ತಾರೆ.ಅಂತಹ ಸಾಲಿನಲ್ಲಿ ಚಿತ್ರದುರ್ಗ ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ನಿಲ್ಲುತ್ತಾರೆ ಎಂದರೆ ತಪ್ಪಾಗಲಾರದು.
ಜನರು ಮಧ್ಯೆ ಇದ್ದು ಜನಪರ ಆಡಳಿತ ನಡೆಸುವಲ್ಲಿ ತಾಲೂಕು ದಂಡಾಧಿಕಾರಿ ಪಾತ್ರ ಬಹು ಮುಖ್ಯವಾದ್ದು. ಇದದಲ್ಲಿ ವಿಶೇಷವಾಗಿ ಬಡವರ ಮತ್ತು ಮಧ್ಯಮ ವರ್ಗಗಳ ಆಧಾರವಾದ ಪಿಂಚಣಿ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಮೂಲಕ‌ ಸಾವಿರಾರು ಜನರ ಜೀವನಾಧಾರ ಸ್ತಂಭ ಪಿಂಚಣಿ ಕೊಡಿಸುವಲ್ಲಿ ತಹಶೀಲ್ದಾರ್ ಸತ್ಯನಾರಾಯಣ ಯಶಸ್ವಿಯಾಗಿದ್ದಾರೆ..
ಹಿರಿಯ ನಾಗರೀಕರ 
ಸಂಧ್ಯಾ ಸುರಕ್ಷ ಯೋಜನೆ-1248
ಅಂಗವಿಕಲರ ಯೋಜನೆ -18 
ನಿರ್ಗತಿಕರ ವಿಧವಾ ವೇತನ-784
ಇ.ವೃದ್ಧಾಪ್ಯ ವೇತನ-1093 
ಮನಸ್ವಿನಿ- 55 
ಮೈತ್ರಿ -2  
ಈ ಎಲ್ಲಾ ಯೋಜನೆಗಳು ಸೇರಿ ಒಟ್ಟು 3200 ಅರ್ಜಿಗಳ ವಿಲೇವಾರಿ ಮಾಡಿ  ಈಗಾಗಲೇ ಪಿಂಚಣಿ ಮಂಜೂರಾತಿ ಪತ್ರ ನೀಡಿದ್ದು ಪಿಂಚಣಿ ವಂಚಿತರಿಗೆ ಪಿಂಚಣಿ ದೊರಕಿಸುವ ಮೂಲಕ ಕಾರ್ಯ ನಿಷ್ಠೆ ಮೆರೆದಿದ್ದಾರೆ‌.
ಆಧಾರ ಕಾರ್ಡ್ ತಾಂತ್ರಿಕ ಸಮಸ್ಯೆಯಿಂದ ಪಿಂಚಣಿಗೆ ಬ್ರೇಕ್ : ಆಧಾರ ಕಾರ್ಡ್ ಮತ್ತು ಮನೆಯ ವಿಳಾಸ ಬದಲಾವಣೆ ಸಮಯದಲ್ಲಿ ವ್ಯತ್ಯಾಸ ಸೇರಿ ಹಲವು ಸಮಸ್ಯೆಗಳಿಂದ ಹಲವು ವರ್ಷಗಳಿಂದ ಪಿಂಚಣಿ ಅರ್ಹರಾಗಿ ಅನೇಕ ವರ್ಷಗಳು ಪಿಂಚಣಿ ಪಡದು ತದನಂತರ ಪಿಂಚಣಿ ಸ್ಥಗೀತಗೊಂಡು ವರ್ಷಗಳೇ ಕಳೆದರು ಸಹ ಯಾರು ಗಮನ ಹರಿಸಿರಲಿಲ್ಲ ಮತ್ತು ಪಿಂಚಣಿದಾರರು ಸುಮ್ಮನಾಗಿದ್ದರು ಆದರೆ ತಮ್ಮ ಕಚೇರಿಗೆ ಬರುವ ಇಂತಹ ಪ್ರಕರಣ ಗಮನಿಸಿ  ವಿಶೇಷ ಕಾಳಜಿ ಮತ್ತು ಪಿಂಚಣಿ  ಅದಲಾತ್ ಸೇರಿ ಅನೇಕ ಕಾರ್ಯಕ್ರಮ ಮೂಲಕ ಪಿಂಚಣಿ ಸ್ಥಗಿತಗೊಂಡವರ ದಾಖಲಾತಿ ಪಡೆದು 2590 ಜನರಿಗೆ ಮತ್ತೆ  ಪಿಂಚಣಿ ಆರಂಭಿಸಿ  ಬಡವರ ಪಾಲಿನ ಸಂಜೀವಿನಿಯಂತೆ ಕೆಲಸ ಮಾಡುತ್ತಿದ್ದಾರೆ.
ಪಿಂಚಣಿ ಪುನರ್ ಆರಂಭ ವಿವರ
ಭರಮಸಾಗರ ಹೋಬಳಿ-539 
ಹಿರೇಗುಂಟನೂರು- 169 
ಕಸಬಾ -1580
ತುರುವನೂರು ಹೋಬಳಿ-302 
ಒಟ್ಟು ಪುನರ್ ಆರಂಭವಾದ ಪಿಂಚಣಿದಾರರ ಸಂಖ್ಯೆ -2590 ಆಗಿದೆ.
ತಹಶೀಲ್ದಾರ್ ಸತ್ಯನಾರಾಯಣ ಅವರು ತಮ್ಮ ಕಚೇರಿಗೆ ಬರುವ ಸಾರ್ವಜನಿಕರಿಗೆ ದಾಖಲೆ ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡಿ ಕಳಿಸುವ  ಪರಿಗೆ ಜನರು ಮರು ಮಾತನಾಡದೇ ಸಂತೋಷದಿಂದ ತೆರಳುತ್ತಾರೆ. ತನ್ನ  ವ್ಯಾಪ್ತಿಯಲ್ಲಿ ಆಗುವ ಕೆಲಸವನ್ನು ಮರು ಮಾತಡದೆ ಮುಗಿಸಿ‌ ಕೊಡುವ ಶೈಲಿಗೆ ಜನರು ಫಿದಾ ಆಗಿದ್ದಾರೆ.ಪಹಣಿ ಸಮಸ್ಯೆ, ದಾರಿ ಸಮಸ್ಯೆ, ದಾಖಲಾತಿ ಸಮಸ್ಯೆ, ಅಳತೆ, ವಿಶೇಷವಾಗಿ ವಿವಾದಗಳಿಗೆ ಒತ್ತು ಬರುವ  ಜನರಿಗೆ ಪ್ರೀತಿಯ ಮಾತು ಬಗ್ಗದಿದ್ದರೆ ಕಾನೂನು ಚಾಟಿ ಬೀಸುವ ಮೂಲಕ ಸದ್ದಿಲ್ಲದೇ ಪ್ರಕರಣಕ್ಕೆ ಅಂತ್ಯ ಹಾಡುತ್ತಾರೆ. ಹೀಗೆ  ತಮ್ಮ ದೇ ಆದ ಶೈಲಿಯಲ್ಲಿ  ತಾಲೂಕ್ ಆಡಳಿತಕ್ಕೆ ಸುಧಾರಣೆ ಕ್ರಮಗಳನ್ನು ಅನುಸರಿತ್ತಿದ್ದು ಮತ್ತಷ್ಟು ಜನಸ್ನೇಹಿ ಆಡಳಿತಕ್ಕೆ ಒತ್ತು ನೀಡಲಿ ಎಂಬ ಬಯಕೆ  ಜನರ ಮನದಲ್ಲಿದೆ.
[t4b-ticker]

You May Also Like

More From Author

+ There are no comments

Add yours