ಬುಡಕಟ್ಟು ಜನಾಂಗದ ಆರಾಧ್ಯದೇವಿ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆಗೆ ಡೇಟ್ ಫಿಕ್ಸ್.

 

 

 

 

ಚಳ್ಳಕೆರೆ: ರಾಜ್ಯದ ಬುಡಕಟ್ಟು ಜನರ ಆರಾಧ್ಯದೇವಿ   ಗೌರ ಸಮುದ್ರ ಮಾರಮ್ಮ ದೇವಿಯ 2022- 23ನೇ ಸಾಲಿನ ಜಾತ್ರಾ ಮಹೋತ್ಸವವನ್ನು  ಆಗಸ್ಟ್ 29 ಮತ್ತು 30 ನೇ ತಾರೀಖು ನಿಗದಿ ಮಾಡಿದ್ದು  ಈ ಬಾರಿ  ಅದ್ದೂರಿಯಾಗಿ ವೈಶಿಷ್ಟ್ಯವಾಗಿ ಭಕ್ತರ ಭಾವನೆಗಳನ್ನು ಗೌರವಿಸುವ ರೀತಿಯಲ್ಲಿ  ಆಚರಣೆ ಮಾಡಬೇಕೆಂದು ಚಳ್ಳಕೆರೆ ತಹಶೀಲ್ದಾರ್  ಎನ್. ರಘುಮೂರ್ತಿ ಅವರಿಗೆ  ಸಚಿವಬಿ .ಶ್ರೀರಾಮುಲು ರವರು ಸೂಚಿಸಿದರು.

ಇಂದು ಗೌರಸಮುದ್ರ ಜಗನ್ಮಾತೆ ಶ್ರೀ ಮಾರಮ್ಮ ದೇವಸ್ಥಾನದ ಆವರಣದಲ್ಲಿ 2022- 23ನೇ ಸಾಲಿನ ಜಾತ್ರಾ ಮಹೋತ್ಸವದ ಆಚರಣೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಳೆದ ಎರಡು ವರ್ಷಗಳಿಂದ ಕೋವಿಡ್  ಕಾರಣದಿಂದ ದೇವಿಯ ಜಾತ್ರೆಯನ್ನು ಭಕ್ತಾದಿಗಳ  ಭಾವನೆಗಳಿಗೆ ಪೂರಕವಾಗಿ ಆಚರಿಸಿಲ್ಲ ಎಂಬ  ನೋವಿದೆ.  ಆದರೆ ಈ ಬಾರಿ ಎಲ್ಲ ಜನ ಶೇಕಡ 100ರಷ್ಟು ಲಸಿಕೆಯನ್ನು ಕೇಂದ್ರ ಸರ್ಕಾರದ ಆಶಯದಂತೆ ಹಾಕಿಸಲಾಗಿದೆ. ಅಗತ್ಯವಿರುವ ಜನರಿಗೆ ಬೂಸ್ಟರ್ ಡೋಸ ನೀಡಲಾಗಿದೆ.  ನನ್ನ ಜನರು ಕ್ಷೇಮದಿಂದಿದ್ದಾರೆ ಆದರೂ ಈ ಜಾತ್ರಾ ಸಮಯದಲ್ಲಿ ನಾಲ್ಕು ವಿಶೇಷ ಕೌಂಟರ್ ಗಳನ್ನು ಆರಂಭಿಸಿ ಇಲ್ಲಿಯೂ ಅಗತ್ಯವಿರುವ ಜನರಿಗೆ ವ್ಯಾಕ್ಸಿನ್ ಹಾಕಿಸಲಾಗುವುದು.  ಈ ವರ್ಷದ ಜಾತ್ರಾ ಮಹೋತ್ಸವವನ್ನು ಅಗತ್ಯವಿರುವಂತಹ ಮೂಲಭೂತ ಸೌಕರ್ಯಗಳನ್ನು ನಾಗರಿಕರಿಗೆ ಮತ್ತು ಭಕ್ತಾದಿಗಳಿಗೆ ಒದಗಿಸಿ ಸಾರಿಗೆ,  ಆರೋಗ್ಯ,  ಕುಡಿಯುವ ನೀರು ಮತ್ತು ಪೊಲೀಸ್ ಬಂದೋಬಸ್ತ್ ಇವುಗಳನ್ನು ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಮಾಡಿಕೊಂಡು ಯಾವುದೇ ವ್ಯತ್ಯಾಸ  ಹಾಗೆ ಜಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ತಾಲೂಕು ಆಡಳಿತಕ್ಕೆ ಸೂಚಿಸಿದರು.

 

 

ವಿಧಾನಪರಿಷತ್ ಸದಸ್ಯರಾದಂತ ನವೀನ್ ರವರು ಮಾತನಾಡಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿ ಗಳು ತಹಶೀಲ್ದಾರ್  ಅವರೊಂದಿಗೆ ಸಹಕರಿಸಿ ಮೂಲಭೂತ ಸೌಕರ್ಯಗಳಲ್ಲಿ ಯಾವುದೇ ಕೊರತೆ ಯಾಗದಂತೆ ಜಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಗೌರಸಮುದ್ರ ಗ್ರಾಮ ಪಂಚಾಯಿತಿಯ ಸದಸ್ಯರುಗಳು ವಿವಿಧ ಬೇಡಿಕೆಗಳ ಪಟ್ಟಿಯನ್ನು  ಸಚಿವರಿಗೆ ಸಲ್ಲಿಸಿದರು. ಕೋವಿಡ್ ಪೂರ್ಣಗೊಂಡ ನಂತರ ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ಮಾಡಿದ್ದು ಅದರಂತೆ ಕುಡಿಯುವ ನೀರು ಸಾರಿಗೆ ಶುಚಿತ್ವ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಯಾವುದೇ ಕೊರತೆಯಾಗದ ರೀತಿಯಲ್ಲಿ ಗ್ರಾಮ ಪಂಚಾಯಿತಿ ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಒಂದೆರಡು ಬಾರಿ ಸಭೆ ನಡೆಸಿ ಕಾಲಕಾಲಕ್ಕೆ ಯಾವ ಕೆಲಸಗಳನ್ನು  ಪೂರ್ಣವಾಗಬೇಕು  ಎಂಬುದನ್ನು ಚರ್ಚಿಸಿ ಯಾವುದೇ ಲೋಪ ಉಂಟಾಗದ ಹಾಗೇ ಮಾಡಲಾಗುವುದು.

ಸಮಾರಂಭದಲ್ಲಿ ತಹಶೀಲ್ದಾರ್  ರಘುಮೂರ್ತಿ,  ಪೊಲೀಸ್ ಉಪ ಅಧೀಕ್ಷಕ ರಮೇಶ್,  ಸಹಾಯಕ ಕಾರ್ಯ ಪಾಲಕ ಅಭಿಯಂತರರಾದ ಕಾವ್ಯ ದಯಾನಂದ ಸ್ವಾಮಿ,  ಆರಕ್ಷಕ ವೃತ್ತ ನಿರೀಕ್ಷಕ ಸೇಮಿವುಲ್ಲಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಶಿರೇಖಾ,  ತಾಲೂಕು ಮತ್ತು ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours